ವಾಂಖೆಡೆ ಸ್ಟೇಡಿಯಂನಲ್ಲಿ ‘ಧೋನಿ’ ಆಸನ – ವಿಜಯ ಸ್ಮಾರಕ ಉದ್ಘಾಟಿಸಿದ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್

ವಾಂಖೆಡೆ ಸ್ಟೇಡಿಯಂನಲ್ಲಿ ‘ಧೋನಿ’ ಆಸನ – ವಿಜಯ ಸ್ಮಾರಕ ಉದ್ಘಾಟಿಸಿದ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈಗಲೂ ಅಭಿಮಾನಿಗಳ ನೆಚ್ಚಿನ ಕ್ರಿಕೆಟ್ ಸ್ಟಾರ್. ಐಪಿಎಲ್‌ನಲ್ಲಂತೂ ಸಿಎಸ್‌ಕೆ ಕ್ಯಾಪ್ಟನ್ ಧೋನಿ ಮೇಲೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಇದರ ಮಧ್ಯೆ ಎಂ.ಎಸ್ ಧೋನಿಗೆ ಏಪ್ರಿಲ್ 7 ವಿಶೇಷವಾದ ದಿನ. ಯಾಕೆಂದರೆ, ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಧೋನಿಗೆ ಮುಂಬೈ ಕ್ರಿಕೆಟ್ ಸಂಸ್ಥೆ ವಿಶೇಷ ಗೌರವ ಸಲ್ಲಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಧೋನಿ ವಿಜಯ ಸ್ಮಾರಕವನ್ನು ಉದ್ಘಾಟಿಸಿದ್ದಾರೆ.

ಇದನ್ನೂ ಓದಿ: ಗೆದ್ದರೂ ಗರಂ ಆದ ‘ಕೂಲ್’ ಕ್ಯಾಪ್ಟನ್.! –ಸಿಎಸ್‌ ಕೆ ಬೌಲರ್‌ಗಳಿಗೆ ಧೋನಿ ಕೊಟ್ಟ ಎಚ್ಚರಿಕೆಯೇನು?

ಇತ್ತೀಚೆಗಷ್ಟೇ 2011ರ ಏಕದಿನ ವಿಶ್ವಕಪ್ ಗೆದ್ದ ತಂಡದ 12 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ಮುಂಬೈ ಕ್ರಿಕೆಟ್ ಸಂಸ್ಥೆ ಮಹತ್ವದ ಘೋಷಣೆ ಮಾಡಿತ್ತು. ವಾಂಖೆಡೆ ಸ್ಟೇಡಿಯಂನಲ್ಲಿ ಎಂ.ಎಸ್ ಧೋನಿ ಹೆಸರನ್ನು ಇಡಲು ನಿರ್ಧರಿಸಿದ್ದರು. 2011ರ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಧೋನಿ ಸಿಕ್ಸ್ ಮೂಲಕ ವಿನ್ನಿಂಗ್ ಶಾಟ್ ಸಿಡಿಸಿದ್ದು ಯಾರೂ ಮರೆಯಲು ಸಾಧ್ಯವಿಲ್ಲ. ಲಂಕಾ ವೇಗಿ ನುವಾನ್ ಕುಲಶೇಖರ ವಿರುದ್ಧ ಧೋನಿ ಹೊಡೆದಿದ್ದ ಸಿಕ್ಸರ್ ಲ್ಯಾಂಡ್ ಆಗಿರುವ ಕ್ರೀಡಾಂಗಣದಲ್ಲಿನ ಆಸನಕ್ಕೆ ಧೋನಿ ಅವರ ಹೆಸರನ್ನು ಇಡಲಾಗುವುದು ಎಂದು ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಹೇಳಿದ್ದರು. ಅದರಂತೆ ಇದೀಗ ಸ್ವತಃ ಧೋನಿ ಅವರೇ ತಮ್ಮ ಹೆಸರಿನ ಎಂಸಿಎ ಕ್ರೀಡಾಂಗಣದ ಒಳಗಿನ ಆಸನವನ್ನು ಉದ್ಘಾಟನೆ ಮಾಡಿದ್ದಾರೆ.

2011 ರ ವಿಶ್ವಕಪ್ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಧೋನಿ ಅವರ ಮ್ಯಾಚ್ ವಿನ್ನಿಂಗ್ ಸಿಕ್ಸರ್ ಬಿದ್ದ ಸ್ಥಳಕ್ಕೆ ಧೋನಿ ಹೆಸರನ್ನು ಇಡಲಾಗಿದೆ. ವಾಂಖೆಡೆ ಸ್ಟೇಡಿಯಂ ಈಗಾಗಲೇ ಕೆಲ ಕ್ರಿಕೆಟ್ ದಿಗ್ಗಜರ ಹೆಸರು ಇದೆ. ಸಚಿನ್ ತೆಂಡುಲ್ಕರ್, ಸುನೀಲ್ ಗವಾಸ್ಕರ್ ಹಾಗೂ ವಿಜಯ್ ಮರ್ಚೆಂಟ್ ಅವರಂತಹ ಶ್ರೇಷ್ಠರ ಹೆಸರನ್ನು ಹೊಂದಿದೆ. ಪಾಲ್ಲಿ ಉಮ್ರಿಗರ್ ಹಾಗೂ ವಿನೂ ಮಂಕಡ್ ಅವರ ಹೆಸರಿನ ದ್ವಾರಗಳೂ ಇವೆ. ಇವರ ಜೊತೆಗೆ ಈಗ ಧೋನಿ ಹೆಸರು ಕೂಡ ಸೇರ್ಪಡೆ ಆಗಿದೆ.

suddiyaana