ಸುನಿಲ್ ಗವಾಸ್ಕರ್ ಶರ್ಟ್ ಮೇಲೆ ಧೋನಿ ಆಟೋಗ್ರಾಫ್ – ಕ್ರಿಕೆಟ್ ಲೋಕದ ಹೆಮ್ಮೆಯ ಕ್ಷಣ ಕಣ್ತುಂಬಿಕೊಂಡ ಅಭಿಮಾನಿಗಳು

ಭಾನುವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೆಕೆಆರ್ ನಡುವೆ ನಡೆದ ಪಂದ್ಯದಲ್ಲಿ ಕೆಲ ರೋಚಕ ಕ್ಷಣಗಳನ್ನು ಅಭಿಮಾನಿಗಳನ್ನು ಕಣ್ತುಂಬಿಕೊಂಡಿದ್ದಾರೆ. ಇಡೀ ಕ್ರಿಕೆಟ್ ಜಗತ್ತೇ ಹೆಮ್ಮೆ ಪಡುವಂತಹ ಘಟನೆಗೆ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಲೋಕಕ್ಕೆ ಅಪಾರ ಕೊಡುಗೆ ಸಲ್ಲಿಸಿ ಲೆಜೆಂಡರಿ ಎನಿಸಿಕೊಂಡಿರುವ ಸುನಿಲ್ ಗವಾಸ್ಕರ್, ಮಹೇಂದ್ರ ಸಿಂಗ್ ಧೋನಿ ಅವರ ಆಟೋಗ್ರಾಫ್ ಕೇಳಿ ಪಡೆದಿದ್ದು ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಸುನಿಲ್ ಗವಾಸ್ಕರ್ ಕೂಡಾ ಧೋನಿ ಬಗ್ಗೆ ಆಡಿರುವ ಮನದಾಳದ ಮಾತು ಕೇಳಿ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬೊಮ್ಮನ್ ಮತ್ತು ಬೆಳ್ಳಿಗೆ ಮರೆಯಲಾರದ ಉಡುಗೊರೆ – ಧೋನಿಯಿಂದ ಜೆರ್ಸಿ ಗಿಫ್ಟ್
ಭಾನುವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಸಂಪೂರ್ಣ ಭರ್ತಿ ಆಗಿತ್ತು. ಸಿಎಸ್‌ಕೆ ಅಭಿಮಾನಿಗಳು ಎಂಬುದಕ್ಕಿಂತ ಎಂಎಸ್ ಧೋನಿ ಫ್ಯಾನ್ಸ್ ಸ್ಟೇಡಿಯಂನಲ್ಲಿ ತುಂಬಿದ್ದರು. ಆದರೆ, ಚೆನ್ನೈ ಈ ಪಂದ್ಯದಲ್ಲಿ ಸೋಲು ಕಂಡಿತು. ಕೆಕೆಆರ್ 6 ವಿಕೆಟ್‌ಗಳ ಜಯ ಸಾಧಿಸಿತು. ಪಂದ್ಯ ಮುಗಿದ ಬಳಿಕ ಅನೇಕ ವಿಶೇಷ ಘಟನೆಗಳು ನಡೆದಿವೆ. ಚೆಪಾಕ್‌ನಲ್ಲಿ ಇದು ಸಿಎಸ್‌ಕೆಯ ಕೊನೆಯ ಲೀಗ್ ಪಂದ್ಯ ಆಗಿದ್ದರಿಂದ ಧೋನಿ ಸೇರಿದಂತೆ ಸಿಎಸ್‌ಕೆಯ ಎಲ್ಲಾ ಪ್ಲೇಯರ್ಸ್ ಇಡೀ ಮೈದಾನ ಸುತ್ತು ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಇದರ ನಡುವೆ ಲೆಜೆಂಡ್ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಧೋನಿಯ ಆಟೋಗ್ರಾಫ್‌ಗೆ ಓಡೋಡಿ ಬಂದರು. ಹೌದು, ಐಪಿಎಲ್ 2023 ರಲ್ಲಿ ಇಡೀ ಕ್ರಿಕೆಟ್ ಜಗತ್ತೇ ಹೆಮ್ಮೆ ಪಡುವಂತಹ ಘಟನೆ ಸಂಭವಿಸಿತು. ಭಾರತೀಯ ಕ್ರಿಕೆಟ್ ಲೋಕಕ್ಕೆ ಅಪಾರ ಕೊಡುಗೆ ಸಲ್ಲಿಸಿ ಲೆಜೆಂಡರಿ ಎನಿಸಿಕೊಂಡಿರುವ ಸುನಿಲ್ ಗವಾಸ್ಕರ್ ಅವರು ಮಹೇಂದ್ರ ಸಿಂಗ್ ಧೋನಿ ಅವರ ಆಟೋಗ್ರಾಫ್ ಕೇಳಿದರು. ಅದು ಕೂಡ ಅವರು ಧರಿಸಿಕೊಂಡಿದ್ದ ಶರ್ಟ್ ಮೇಲೆ. ಇದಕ್ಕೆ ಒಪ್ಪಿದ ಧೋನಿ ಗವಾಸ್ಕರ್ ಅವರ ಶರ್ಟ್ ಮೇಲೆ ತನ್ನ ಹಸ್ತಾಕ್ಷರ ಹಾಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಬಗ್ಗೆ ಮಾತನಾಡಿದ ಗವಾಸ್ಕರ್, ಧೋನಿಯನ್ನು ಪ್ರೀತಿ ಮಾಡದಿರುವವರು ಯಾರಿದ್ದಾರೆ ಹೇಳಿ?. ಅನೇಕ ವರ್ಷಗಳಿಂದ ಧೋನಿ ಭಾರತೀಯ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಅದ್ಭುತ. ಇವರಿಗಿಂತ ಉತ್ತಮ ರೋಲ್ ಮಾಡೆಲ್ ಇನ್ನೊಬ್ಬರು ಬೇಕೇ?. ಅನೇಕ ಯುವಕರು ಧೋನಿಯನ್ನು ನೋಡಿ ಕಲಿಯುತ್ತಿದ್ದಾರೆ. ಧನ್ಯವಾದ ನಾನು ಅವರ ಆಟೋಗ್ರಾಫ್ ಪಡೆದಿದ್ದೇನೆ. ಇದನ್ನು ನಾನು ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ,” ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಎಂಎಸ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಸೀಸನ್ ಎಂದು ಹೇಳಲಾಗುತ್ತಿದೆ. ಈ ಸೀಸನ್ ಬಳಿಕ ಧೋನಿ ಕ್ರಿಕೆಟ್ ಲೋಕದಿಂದ ದೂರವಾಗಲಿದ್ದಾರಂತೆ. ಸದ್ಯ ಚೆನ್ನೈ ಆಡಿರುವ 13 ಪಂದ್ಯಗಳಲ್ಲಿ 7 ಗೆಲುವು, 5 ಸೋಲು ಕಂಡು 15 ಅಂಕ ಸಂಪಾದಿಸಿ ದ್ವಿತೀಯ ಸ್ಥಾನದಲ್ಲಿದೆ. ಸಿಎಸ್‌ಕೆ ಇನ್ನೂ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿಲ್ಲ. ಎಲ್ಲಾದರು ಪ್ಲೇ ಆಫ್ ಪ್ರವೇಶಿಸಲು ವಿಫಲವಾದರೆ ಭಾನುವಾರ ನಡೆದ ಪಂದ್ಯ ಚೆಪಾಕ್‌ನಲ್ಲಿ ಕೊನೆಯ ಮ್ಯಾಚ್ ಆಗಲಿದೆ. ಹೀಗಾಗಿ ಧೋನಿ ಸೇರದಂತೆ ಸಿಎಸ್‌ಕೆ ತಂಡದ ಎಲ್ಲಾ ಆಟಗಾರರು ಪಂದ್ಯದ ಬಳಿಕ ಮೈದಾನಕ್ಕೆ ಬಂದಿದ್ದ ಪ್ರೇಕ್ಷಕರಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದರು.