ಮಾಹಿ ಅಭಿಮಾನಿಗಳಿಗೆ ಸಿಕ್ಕೇಬಿಡ್ತು ಗುಡ್​ನ್ಯೂಸ್​.. – CSK ಪರ ಮತ್ತೆ ಆಡ್ತಾರೆ ಧೋನಿ!

ಮಾಹಿ ಅಭಿಮಾನಿಗಳಿಗೆ ಸಿಕ್ಕೇಬಿಡ್ತು ಗುಡ್​ನ್ಯೂಸ್​.. – CSK ಪರ ಮತ್ತೆ ಆಡ್ತಾರೆ ಧೋನಿ!

ಐಪಿಎಲ್​ನಲ್ಲಿ ಎಂಎಸ್‌ ಧೋನಿ ನಿವೃತ್ತಿ ಯಾವಾಗ? ಇದು ಕ್ರಿಕೆಟ್‌ ವಲಯದಲ್ಲಿ ಚರ್ಚೆಯಾಗುತ್ತಿರುವ ದೊಡ್ಡ ವಿಷಯಗಳಲ್ಲಿ ಒಂದು. 2020ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ 42 ವರ್ಷದ ಅನುಭವಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌, ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ತಮ್ಮ ಸೇವೆ ಮುಂದುವರಿಸಿದ್ದಾರೆ. ಇನ್ನು ಐಪಿಎಲ್‌ 2025 ಟೂರ್ನಿಯಲ್ಲೂ ಧೋನಿ ಆಡುತ್ತಾರೆಯೇ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇದೀಗ ಇದಕ್ಕೆ ಈಗ ಉತ್ತರ ಸಿಕ್ಕಿದೆ.

ಐಪಿಎಲ್-2025ರ ಮೆಗಾ ಹರಾಜು ಡಿಸೆಂಬರ್​ನಲ್ಲಿ ನಡೆಯಲಿದ್ದು ಅದಕ್ಕಾಗಿ ಯಾರನ್ನ ಉಳಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಅನ್ನೋದ್ರ ಬಗ್ಗೆ ಫ್ರಾಂಚೈಸಿ ತೆರೆಮರೆಯಲ್ಲಿ ಚರ್ಚೆ ಶುರುವಾಗಿದೆ. ಇದೇ ವಿಚಾರವಾಗಿ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮಾಲೀಕರನ್ನು ಭೇಟಿಯಾಗಿದ್ದಾರೆ. ಭೇಟಿ ವೇಳೆ ಮೆಗಾ ಹರಾಜಿನಲ್ಲಿ ಯಾರನ್ನೆಲ್ಲ ರಿಟೈನ್ ಮಾಡಿಕೊಳ್ಳಬೇಕು ಅನ್ನೋದ್ರ ಬಗ್ಗೆ ಚರ್ಚೆ ನಡೆದಿದೆ.

ಮಾಹಿತಿ ಪ್ರಕಾರ ಐಪಿಎಲ್‌ ಆಡಳಿತ ಮಂಡಳಿ ತನ್ನ ನಿಯಮದಲ್ಲಿ ಬದಲಾವಣೆ ತಂದು 5 ರಿಂದ 6 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಮಾಡಿಕೊಟ್ಟರೆ ಎಂಎಸ್‌ ಧೋನಿ ಸಿಎಸ್‌ಕೆ ತಂಡದಲ್ಲೇ ಉಳಿದು ಆಟ ಮುಂದುವರಿಸಲಿದ್ದಾರೆ. ಇದೇ ವಿಚಾರವಾಗಿ ಧೋನಿ ಸಿಎಸ್​ಕೆ ಫ್ರಾಂಚೈಸಿ ಅಧಿಕಾರಿಗಳನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

Shwetha M

Leave a Reply

Your email address will not be published. Required fields are marked *