ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಕ್ಯಾಪ್ಟನ್ ಕೂಲ್ – ತಮಿಳು ನಟ ವಿಜಯ್ ಜೊತೆ ನಟಿಸಲಿದ್ದಾರಂತೆ ಧೋನಿ

ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಕ್ಯಾಪ್ಟನ್ ಕೂಲ್ – ತಮಿಳು ನಟ ವಿಜಯ್ ಜೊತೆ ನಟಿಸಲಿದ್ದಾರಂತೆ ಧೋನಿ

ಕ್ಯಾಪ್ಟನ್ ಕೂಲ್ ಅಂತಾನೇ ಖ್ಯಾತರಾಗಿರುವ ಮಹೇಂದ್ರ ಸಿಂಗ್ ಧೋನಿ ಸಿನಿಮಾ ಇಂಡಸ್ಟ್ರಿಗೂ ಎಂಟ್ರಿಯಾಗಿದ್ದಾರೆ. ಈಗಾಗಲೇ ತಮ್ಮದೇ ಧೋನಿ ಎಂಟರ್ ಟೈನ್ಮೆಂಟ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಈ ಸಂಸ್ಥೆಯಡಿ ಧೋನಿ ಪತ್ನಿ ಸಾಕ್ಷಿ ಧೋನಿ ಲೆಟ್ಸ್ ಗೆಟ್ ಮ್ಯಾರೀಡ್ ಎಂಬ ತಮಿಳು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಆದರೆ, ಧೋನಿ ಸಿನಿಮಾದಲ್ಲಿ ನಟಿಸಬೇಕು ಎಂಬ ಅಭಿಮಾನಿಗಳ ಆಸೆ ಕೂಡಾ ಸದ್ಯದಲ್ಲೇ ಈಡೇರಲಿದೆ ಎನ್ನಲಾಗ್ತಿದೆ. ಸದ್ಯದಲ್ಲೇ ಮಹಿ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಸಿನಿಮಾದಲ್ಲಿ ಹೀರೋ ಆಗಲು ಕ್ಯಾಪ್ಟನ್ ಕೂಲ್ ರೆಡಿ -‘ಆ್ಯಕ್ಷನ್’ ಸಿನಿಮಾ ಓಕೆ ಎಂದ ಧೋನಿ ಪತ್ನಿ ಸಾಕ್ಷಿ

ಐಪಿಎಲ್‌ನಲ್ಲಿ ಕ್ಯಾಪ್ಟನ್ ಕೂಲ್ ಹವಾ ಜೋರಾಗಿಯೇ ಇದೆ. ಧೋನಿ ಎಂಬ ಕ್ರಿಕೆಟ್ ದಿಗ್ಗಜನಿಗೆ ಕೋಟ್ಯಂತರ ಅಭಿಮಾನಿಗಳು ಕೂಡಾ ಇದ್ದಾರೆ. ಈ ನಡುವೆ ಧೋನಿ ಬಣ್ಣದ ಲೋಕಕ್ಕೂ ಕಾಲಿಡಬೇಕು ಎಂಬ ಅಭಿಮಾನಿಗಳ ಆಸೆಯೂ ಈಡೇರಲಿದೆ. ನಟ ದಳಪತಿ ವಿಜಯ್ ಜತೆ ಸಿನಿಮಾದಲ್ಲಿ ಧೋನಿ ಮಿಂಚಲು ರೆಡಿಯಾಗಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ, ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಚಿತ್ರವಾಗಿರುವ ‘ದಳಪತಿ 69′ ಸಿನಿಮಾದಲ್ಲಿ ವಿಜಯ್ ಜತೆ ಮುಖ್ಯ ಪಾತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಎಂ ಎಸ್ ಧೋನಿ ನಟಿಸುತ್ತಿರುವುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿ ಧೋನಿ ಅಭಿಮಾನಿಗಳನ್ನು ಥ್ರಿಲ್ ಮಾಡಿದ್ದಂತೂ ಸುಳ್ಳಲ್ಲ.

suddiyaana