ಸಿಎಸ್‌ಕೆ ಪ್ಲೇಯಿಂಗ್ 11ನಿಂದ ಧೋನಿ ಔಟ್ – ಚೆನ್ನೈ ತಂಡದಿಂದ ಧೋನಿಯನ್ನು ಹೊರಗಿಟ್ಟಿದ್ದು ಯಾಕೆ?

ಸಿಎಸ್‌ಕೆ ಪ್ಲೇಯಿಂಗ್ 11ನಿಂದ ಧೋನಿ ಔಟ್ – ಚೆನ್ನೈ ತಂಡದಿಂದ ಧೋನಿಯನ್ನು ಹೊರಗಿಟ್ಟಿದ್ದು ಯಾಕೆ?

ಐಪಿಎಲ್ ಫೀವರ್ ನಿಧಾನವಾಗಿ ಜಾಸ್ತಿಯಾಗುತ್ತಿದೆ. ಇನ್ನೇನು ಪಂದ್ಯಗಳ ಆರಂಭಕ್ಕೂ ಕೌಂಟ್‌ಡೌನ್ ಶುರುವಾಗಿದೆ. ಇದರ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್‌ನ ಪ್ಲೇಯಿಂಗ್ 11 ಪ್ರಕಟಿಸಿದ್ದು, ಮಹೇಂದ್ರ ಸಿಂಗ್ ಧೋನಿಗೆ ಸ್ಥಾನ ನೀಡಿಲ್ಲ.

ಇದನ್ನೂ ಓದಿ:RCB ಫ್ಲವರ್ ಅಲ್ಲ ಫೈಯರ್ – ಆಲ್ ರೌಂಡರ್ ಗಳೇ ಮ್ಯಾಚ್ ವಿನ್ನರ್ಸ್

ಐಪಿಎಲ್​ನಲ್ಲಿ ಅಭಿಮಾನಿಗಳ ನೆಚ್ಚಿನ ತಂಡಗಳಲ್ಲಿ ಸಿಎಸ್‌ಕೆ ಟೀಮ್ ಕೂಡಾ ಹೌದು. ಈ ಬಾರಿ ಕೂಡಾ ತಲಾ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಇದರ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಚೆನ್ನೈ ಸೂಪರ್ ಕಿಂಗ್ಸ್‌ನ ಪ್ಲೇಯಿಂಗ್ 11 ಪ್ರಕಟಿಸಿದ್ದಾರೆ. ಅಂದರೆ, ತಂಡದ ಪ್ಲೈಯಿಂಗ್ ಲೆವೆನ್ ಅವರ ಪ್ರಕಾರ ಹೇಗಿರಬೇಕು ಅನ್ನೋದನ್ನು ವಿವರಿಸಿದ್ದಾರೆ. ಪಠಾಣ್ ಅವರ ಆಡುವ ಹನ್ನೊಂದರ ಬಳಗದಲ್ಲಿ ಧೋನಿಗೆ ಸ್ಥಾನ ನೀಡಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿಯೂ ಪಠಾಣ್, ಧೋನಿ ಹೆಸರನ್ನು ತೆಗೆದುಕೊಂಡಿಲ್ಲ. ಈ ತಂಡದಲ್ಲಿ ಇರ್ಫಾನ್ ಪಠಾಣ್ ಸಂಜು ಸ್ಯಾಮ್ಸನ್ ಮತ್ತು ಆಯುಷ್ ಮ್ಹಾತ್ರೆ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಮೂರನೇ ಸ್ಥಾನಕ್ಕೆ ಕಳುಹಿಸಲು ಅವರು ನಿರ್ಧರಿಸಿದ್ದಾರೆ. ಶಿವಂ ದುಬೆ ಅವರನ್ನು ನಾಲ್ಕನೇ ಸ್ಥಾನಕ್ಕೆ ಮತ್ತು ಡೆವೋಲ್ಡ್ ಬ್ರೆವಿಸ್ ಅವರನ್ನು ಐದನೇ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಇರ್ಫಾನ್ ಪಠಾಣ್ ಆರನೇ ಸ್ಥಾನಕ್ಕೆ ಸರ್ಫರಾಜ್ ಖಾನ್ ಅವರಿಗೆ ಆದ್ಯತೆ ನೀಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಬದಲಿಗೆ ಸರ್ಫರಾಜ್ ಖಾನ್ ಈ ಸ್ಥಾನಕ್ಕೆ ಸೂಕ್ತ ಎಂದು ಅವರು ಹೇಳಿದ್ದಾರೆ. ಏಕೆಂದರೆ ಕಳೆದ ಎರಡು ಸೀಸನ್‌ಗಳಲ್ಲಿ ಧೋನಿ ಕೊನೆಯ ಎರಡು ಓವರ್‌ಗಳಿಗೆ ಮಾತ್ರ ಬ್ಯಾಟಿಂಗ್ ಮಾಡಲು ಬಂದಿದ್ದರು. ಅಭಿಮಾನಿಗಳ ಉತ್ಸಾಹ ಹೆಚ್ಚಿಸಲು ಇದು ಒಳ್ಳೆಯದು. ಆದರೆ ಫ್ರಾಂಚೈಸಿಯ ದೃಷ್ಟಿಕೋನದಿಂದ ಇದು ಸರಿಯಲ್ಲ.

ಇರ್ಫಾನ್ ಪಠಾಣ್ ಅವರ ಪ್ರಕಾರ, ಧೋನಿ ಕನಿಷ್ಠ ನಾಲ್ಕು ಓವರ್‌ಗಳಾದರೂ ಬ್ಯಾಟಿಂಗ್ ಮಾಡಬೇಕು. ಧೋನಿ ತಂಡದಲ್ಲಿ ಪೂರ್ಣ ಪ್ರಮಾಣದ ಆಟಗಾರನಾಗಿ ಆಡಿದರೆ ಅದು ಫ್ರಾಂಚೈಸಿಯಗೆ ಉತ್ತಮ. ಆದರೆ ಅದು ಸಂಭವಿಸದಿದ್ದರೆ, ಒಂದು ಪ್ರಶ್ನಾರ್ಥಕ ಚಿಹ್ನೆ ಉದ್ಭವಿಸುತ್ತದೆ. ಪ್ರತಿಯೊಬ್ಬ ಶ್ರೇಷ್ಠ ಆಟಗಾರನಿಗೂ, ಅವನು ಆಟವನ್ನು ಬಿಡಬೇಕಾದ ಸಮಯ ಬರುತ್ತದೆ. ಧೋನಿ ಈಗ ಸಿಎಸ್‌ಕೆ ತಂಡವನ್ನು ನಿರ್ಮಿಸುವತ್ತ ಗಮನಹರಿಸಬೇಕು. ಇದರಿಂದ ಹೆಚ್ಚಿನ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡುತ್ತದೆ. ಆದರೆ ಧೋನಿ ಆಡಲು ನಿರ್ಧರಿಸಿದರೆ, ಸರ್ಫರಾಜ್ ಖಾನ್ ಸಿಎಸ್‌ಕೆ ಪರ ತಮ್ಮ ಚೊಚ್ಚಲ ಐಪಿಎಲ್ ಪಂದ್ಯಕ್ಕಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಎಂದಿದ್ದಾರೆ. ಉಳಿದಂತೆ ಇರ್ಫಾನ್ ಪಠಾಣ್ ತಂಡದಲ್ಲಿ, ಕಾರ್ತಿಕ್ ಶರ್ಮಾ ಏಳನೇ ಕ್ರಮಾಂದಲ್ಲಿ, ಪ್ರಶಾಂತ್ ವೀರ್ ಎಂಟನೇ ಕ್ರಮಾಂದಲ್ಲಿ ಆಡಲಿದ್ದಾರೆ. ಸ್ಪಿನ್ ಬೌಲಿಂಗ್ ಜವಾಬ್ದಾರಿಯನ್ನು ಅಕೀಲ್ ಹುಸೇನ್ ಮತ್ತು ನೂರ್ ಅಹ್ಮದ್ ಅವರ ಹೆಗಲ ಮೇಲೆ ಹಾಕಿರುವ ಪಠಾಣ್, ವೇಗದ ಬೌಲರ್​ಗಳಾಗಿ ಮ್ಯಾಟ್ ಹೆನ್ರಿ ಮತ್ತು ಖಲೀಲ್ ಅಹ್ಮದ್ (ಇಂಪ್ಯಾಕ್ಟ್ ಪ್ಲೇಯರ್) ಅವರಿಗೆ ಅವಕಾಶ ನೀಡಿದ್ದಾರೆ.

Sulekha