ಸಿನಿಮಾ ಹೀರೋ ರೀತಿ ಮಿಂಚಿದ ಧೋನಿ – ಮಹಿ ಹೊಸ ಲುಕ್ಗೆ ಫ್ಯಾನ್ಸ್ ಫಿದಾ
ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಕ್ರಿಕೆಟ್ ಬದುಕಿನಲ್ಲಿ ಹಲವು ಬಾರಿ ತಮ್ಮ ಹೇರ್ಸ್ಟೈಲ್ ಮೂಲಕವೇ ಗಮನ ಸೆಳೆದಿದ್ದಾರೆ. ಅದರಲ್ಲೂ ಮಹಿ ತನ್ನ ಉದ್ದ ಕೂದಲಿನೊಂದಿಗೆ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೆ, ಅದೇ ಹೇರ್ ಸ್ಟೈಲ್ ಮೂಲಕವೇ ಹೊಸ ಟ್ರೆಂಡ್ ಕೂಡಾ ಸೃಷ್ಟಿಸಿದ್ದರು. ಈಗ ಮತ್ತೆ ಎಂ.ಎಸ್ ಧೋನಿ ತನ್ನ ಹೇರ್ಸ್ಟೈಲ್ ಮೂಲಕ ಹವಾ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಕ್ಯಾಪ್ಟನ್ ಕೂಲ್ – ತಮಿಳು ನಟ ವಿಜಯ್ ಜೊತೆ ನಟಿಸಲಿದ್ದಾರಂತೆ ಧೋನಿ
2011 ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ ಧೋನಿ ಉದ್ದ ಕೂದಲಿಗೆ ವಿದಾಯ ಹೇಳಿದ್ದರು. ಇದಾದ ಬಳಿಕವೂ ಹೊಸ ಹೊಸ ಹೇರ್ ಸ್ಟೈಲ್ನೊಂದಿಗೆ ಗಮನ ಸೆಳೆದಿದ್ದರು. ಇದೀಗ ಮತ್ತೊಮ್ಮೆ ಧೋನಿ ಫ್ಯಾನ್ಸ್ ಎದುರು ವಿಭಿನ್ನ ಲುಕ್ ಜೊತೆ ಕಾಣಿಸಿಕೊಂಡಿದ್ದಾರೆ. ಅದು ಕೂಡಾ ಯಾವ ಬಾಲಿವುಡ್ ಹೀರೋಗೂ ಕಮ್ಮಿಯಿಲ್ಲ ಎಂಬಂತೆ ಧೋನಿ ಮಿಂಚಿದ್ದಾರೆ. ಧೋನಿ ನ್ಯೂ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಉದ್ದ ಕೂದಲಿಗೆ ಗೋಲ್ಡನ್ ಟಚ್ ನೀಡಿರುವ ಧೋನಿ ಯಾವುದೇ ಸ್ಟಾರ್ ನಟರಿಗೂ ಕಮ್ಮಿ ಇಲ್ಲವೆಂಬಂತೆ ಪೋಸ್ ನೀಡಿದ್ದಾರೆ. ತಮ್ಮ ಹಳೆಯ ಸ್ಟೈಲ್ಗೆ ಹೊಸ ಟಚ್ ನೀಡುವ ಮೂಲಕ ಮಹೇಂದ್ರ ಸಿಂಗ್ ಧೋನಿ ಲುಕ್ ಚೇಂಜ್ ಮಾಡಿಕೊಂಡಿದ್ದಾರೆ. ಧೋನಿಯ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಇನ್ನು ಧೋನಿಯ ಹೊಸ ಲುಕ್ ಅನ್ನು ವಿನ್ಯಾಸಗೊಳಿಸಿರುವುದು ಮತ್ಯಾರೂ ಅಲ್ಲ, ಖ್ಯಾತ ಹೇರ್ ಸ್ಟೈಲಿಸ್ಟ್ ಆಲೀಮ್ ಹಕೀಮ್. ಬಾಲಿವುಡ್ ಸೆಲೆಬ್ರಿಟಿಗಳು, ಟೀಮ್ ಇಂಡಿಯಾ ಆಟಗಾರರ ಹೇರ್ ಸ್ಟೈಲ್ ಹಿಂದಿರುವ ಕೈಚಳಕ ಕೂಡ ಇವರದ್ದೇ. ಇದೀಗ ಮಹಿಗೂ ಹೊಸ ಲುಕ್ ನೀಡಿದ್ದಾರೆ.