150 ಪಂದ್ಯಗಳಲ್ಲಿ ವಿಜಯದ ಭಾಗವಾದ ಏಕೈಕ ಆಟಗಾರ ಧೋನಿ – ಒಂದೇ ದಿನ ಐದು ಕ್ಯಾಚ್ ಹಿಡಿದು ಮಿಂಚಿದ ಡೇರಿಲ್ ಮಿಚೆಲ್

150 ಪಂದ್ಯಗಳಲ್ಲಿ ವಿಜಯದ ಭಾಗವಾದ ಏಕೈಕ ಆಟಗಾರ ಧೋನಿ – ಒಂದೇ ದಿನ ಐದು ಕ್ಯಾಚ್ ಹಿಡಿದು ಮಿಂಚಿದ ಡೇರಿಲ್ ಮಿಚೆಲ್

ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಇತಿಹಾಸ ಬರೆದಿದ್ದಾರೆ. ಚೆನ್ನೈನ ಚೆಪಾಕ್​ ಮೈದಾನದಲ್ಲಿ ಎಸ್​ಆರ್​ಹೆಚ್​ ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ತಂಡ 78 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಐಪಿಎಲ್​ನಲ್ಲಿ 150 ಪಂದ್ಯಗಳಲ್ಲಿ ವಿಜಯದ ಭಾಗವಾದ ಏಕೈಕ ಆಟಗಾರನಾಗಿ ಮಹೇಂದ್ರ ಸಿಂಗ್ ಧೋನಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಎಸ್‌ಆರ್‌ಹೆಚ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸಿಎಸ್‌ಕೆ – ಋತುರಾಜ್‌ ಅಬ್ಬರದ ಆಟಕ್ಕೆ ಮಂಕಾದ ಸನ್ ರೈಸರ್ಸ್!

ಚೆನ್ಮೈ ಸೂಪರ್ ಕಿಂಗ್ಸ್ ತಂಡದ ಆಧಾರಸ್ತಂಭವೇ ತಲಾ ಧೋನಿ. ಇದೀಗ ಧೋನಿ ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ. ಐಪಿಎಲ್​ನಲ್ಲಿ 150 ಪಂದ್ಯಗಳಲ್ಲಿ ವಿಜಯದ ಭಾಗವಾದ ಏಕೈಕ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನು ಧೋನಿಯನ್ನು ಹೊರತುಪಡಿಸಿ ಐಪಿಎಲ್ ಪಂದ್ಯಗಳಲ್ಲಿ ಅತೀ ಹೆಚ್ಚು ಬಾರಿ​ ಗೆಲುವಿನ ಭಾಗವಾಗಿರುವ ಆಟಗಾರರೆಂದರೆ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ. ಈ ಇಬ್ಬರು ಆಟಗಾರರು ಈವರೆಗೆ 133 ಪಂದ್ಯಗಳಲ್ಲಿ ಯಶಸ್ಸಿನ ರುಚಿ ನೋಡಿದ್ದಾರೆ. ವಿಶೇಷ ಎಂದರೆ ಮಹೇಂದ್ರ ಸಿಂಗ್ ಧೋನಿ ತಮ್ಮ ನಾಯಕತ್ವದಲ್ಲಿ 133 ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದರು. ಇದೀಗ ಇತರೆ ಕ್ಯಾಪ್ಟನ್​ಗಳ ಕೆಳಗೆ 13 ಗೆಲುವಿನ ಭಾಗವಾಗುವ ಮೂಲಕ ಧೋನಿ ಐಪಿಎಲ್​ನಲ್ಲಿ 150 ಪಂದ್ಯಗಳಲ್ಲಿ ಗೆಲುವು ಕಂಡು ಮೊದಲ ಆಟಗಾರನೆಂಬ ವಿಶೇಷ ದಾಖಲೆ ಬರೆದಿದ್ದಾ. ರೆಅಂದರೆ ಐಪಿಎಲ್​ನಲ್ಲಿ ಈವರೆಗೆ 259 ಪಂದ್ಯಗಳನ್ನಾಡಿರುವ ಧೋನಿ 150 ಬಾರಿ ಗೆಲುವು ನೋಡಿದ್ದಾರೆ.

ಧೋನಿ ಈ ಬಾರಿ ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಸೀಸನ್‌ನಲ್ಲಿ ಆಡಿದ ಎಲ್ಲಾ 7 ಇನ್ನಿಂಗ್ಸ್‌ಗಳಲ್ಲಿ ಧೋನಿ ನಾಟೌಟ್ ಆಗಿದ್ದಾರೆ. 259 ಸ್ಟ್ರೈಕ್ ರೇಟ್‌ನಲ್ಲಿ 96 ರನ್ ಗಳಿಸಿದ್ದಾರೆ. ಇದುವರೆಗೆ ಧೋನಿ 259 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಮತ್ತು 94 ಇನ್ನಿಂಗ್ಸ್‌ಗಳಲ್ಲಿ ನಾಟೌಟ್ ಆಗಿದ್ದಾರೆ.

ಒಂದೇ ಪಂದ್ಯದಲ್ಲಿ ಐದು ಕ್ಯಾಚ್ ಹಿಡಿದ ಡೇರಿಲ್ ಮಿಚೆಲ್

ಮತ್ತೊಂದೆಡೆ ಚೆನ್ನೈನ ಚೆಪಾಕ್ ಸ್ಟೇಡಿಯನಂ ನಲ್ಲಿ ಸಿಎಸ್‌ಕೆ ಟೀಮ್ ಗೆದ್ದಿದ್ದು ಒಂದ್ ಕಡೆಯಾದ್ರೆ, ಸ್ಟೇಡಿಂಯನಲ್ಲಿ ಮ್ಯಾಜಿಕ್ ಮಾಡಿದ್ದು ಡೇರಿಲ್ ಮಿಚೆಲ್ ಅಂದ್ರೂ ತಪ್ಪಾಗಲ್ಲ. ಡೇರಿಲ್ ಮಿಚೆಲ್ ಅವರು ಎಸ್ ಆರ್‌ಎಚ್ ಟೀಮ್ ವಿರುದ್ಧ ಒಟ್ಟು ಐದು ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಎಸ್ ಆರ್‌ಎಚ್ ನ ಸ್ಟಾರ್ ಬ್ಯಾಟರ್ ಹೆಡ್ ಅವರ ಕ್ಯಾಚ್ ಪಡೆದ ಮಿಚೆಲ್ ನಂತರ ಒಂದಾದ ಮೇಲೆ ಒಂದರಂತೆ ಒಂದೇ ಪಂದ್ಯದಲ್ಲಿ ಒಟ್ಟು 5 ಕ್ಯಾಚ್ ಪಡೆದು ದಾಖಲೆ ಮಾಡಿದ್ರು. ಮಿಚೆಲ್ ಅವರ ಕೈಯಲ್ಲಿ ಬಾಲ್ ಮ್ಯಾಗ್ನೈಟ್ ಇದೆ ಅಂತಾ ಈ ಸಂದರ್ಭದಲ್ಲಿ ದಿಗ್ಗಜ ಕ್ರಿಕೆಟರ್ಸ್ ಹೊಗಳಿದ್ದಾರೆ.

Sulekha

Leave a Reply

Your email address will not be published. Required fields are marked *