ಸಿನಿಮಾದಲ್ಲಿ ಹೀರೋ ಆಗಲು ಕ್ಯಾಪ್ಟನ್ ಕೂಲ್ ರೆಡಿ -‘ಆ್ಯಕ್ಷನ್’ ಸಿನಿಮಾ ಓಕೆ ಎಂದ ಧೋನಿ ಪತ್ನಿ ಸಾಕ್ಷಿ

ಸಿನಿಮಾದಲ್ಲಿ ಹೀರೋ ಆಗಲು ಕ್ಯಾಪ್ಟನ್ ಕೂಲ್ ರೆಡಿ -‘ಆ್ಯಕ್ಷನ್’ ಸಿನಿಮಾ ಓಕೆ ಎಂದ ಧೋನಿ ಪತ್ನಿ ಸಾಕ್ಷಿ

ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಮಹಿ ಈಗಾಗಲೇ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಈಗಾಗಲೇ ‘ಧೋನಿ ಎಂಟರ್‌ಟೈನ್‌ಮೆಂಟ್’  ಮೂಲಕ ಎಲ್‌ಜಿಎಂ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ಜುಲೈ 28ಕ್ಕೆ ತೆರೆಮೇಲೆ ಬರಲಿದೆ. ಇದರ ಮಧ್ಯೆ ಮಹಿ ಪತ್ನಿ ಸಾಕ್ಷಿ ಧೋನಿ ಮತ್ತೊಂದು ವಿಚಾರವನ್ನು ಹೇಳಿದ್ದಾರೆ. ಕ್ರಿಕೆಟ್ ಜಗತ್ತಿನ ಹೀರೋ ಧೋನಿ ಬೆಳ್ಳಿತೆರೆ ಮೇಲೆ ಹೀರೋ ಆಗಲಿದ್ದಾರೆ ಅನ್ನೋ ಶುಭ ಸುದ್ದಿ ನೀಡಿದ್ದಾರೆ.

ಇದನ್ನೂ ಓದಿ:  ಎಂ.ಎಸ್ ಧೋನಿಗೆ ಜಗತ್ತಿನಾದ್ಯಂತ ಅಭಿಮಾನಿಗಳು – ಧೋನಿ ಪತ್ನಿ ಮಾತ್ರ ‘ಅಲ್ಲು ಅರ್ಜುನ್ ‘ಅಭಿಮಾನಿಯಂತೆ..!

‘ಧೋನಿ ಎಂಟರ್‌ಟೈನ್‌ಮೆಂಟ್’  ಮೂಲಕ ತಮಿಳಿನಲ್ಲಿ ‘ಎಲ್‌ಜಿಎಂ’ (ಲೆಟ್ಸ್ ಗೆಟ್ ಮ್ಯಾರೀಡ್) ಸಿನಿಮಾ ನಿರ್ಮಾಣ ಮಾಡಲಾಗಿದೆ. ಈ ಚಿತ್ರ ಜುಲೈ 28ರಂದು ರಿಲೀಸ್ ಆಗಲಿದೆ. ಈ ಚಿತ್ರವನ್ನು ರಮೇಶ್ ತಮಿಳ್ಮಣಿ ನಿರ್ದೇಶನ ಮಾಡಿದ್ದಾರೆ. ನದಿಯಾ, ಹರೀಶ್ ಕಲ್ಯಾಣ್, ಆರ್ಜೆ ವಿಜಯ್, ಯೋಗಿ ಬಾಬು ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ವೇಳೆ ಸಾಕ್ಷಿ ಧೋನಿ ಅವರು ಅಚ್ಚರಿಯ ಮಾಹಿತಿ ಒಂದನ್ನು ಬಿಚ್ಚಿಟ್ಟಿದ್ದಾರೆ. ಎಂ.ಎಸ್ ಧೋನಿ ತಮಿಳಿನಲ್ಲಿ ತಮ್ಮ ಮೊದಲ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಹೀರೋ ಕೂಡ ಆಗಲಿದ್ದಾರೆ. ಇದಕ್ಕೆ ಸಮಯ ಕೂಡಿಬರಬೇಕು ಎಂದು ಸಾಕ್ಷಿ ಹೇಳಿದ್ದಾರೆ. ‘ಒಳ್ಳೆಯ ಸ್ಕ್ರಿಪ್ಟ್ ಬಂದರೆ ಧೋನಿ ನಟಿಸುತ್ತಾರೆ. ಅವರಿಗೆ ಕ್ಯಾಮೆರಾ ಎದುರು ನಿಲ್ಲೋಕೆ ಅಂಜಿಕೆ ಇಲ್ಲ. 2006ರಿಂದ ಧೋನಿ ಅನೇಕ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಕ್ಯಾಮೆರಾ ಎದುರಿಸಿ ಅವರಿಗೆ ಅಭ್ಯಾಸ ಇದೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಅವರು ನಟಿಸುತ್ತಾರೆ’ ಎಂದಿದ್ದಾರೆ ಸಾಕ್ಷಿ. ಹಾಗಾದರೆ ಅವರು ಮಾಡಲಿರುವ ಸಿನಿಮಾ ಯಾವ ರೀತಿಯಲ್ಲಿ ಇರುತ್ತದೆ? ಇದಕ್ಕೂ ಸಾಕ್ಷಿ ಬಳಿ ಉತ್ತರ ಇದೆ. ‘ಆ್ಯಕ್ಷನ್ ಸಿನಿಮಾ ಮಾಡುತ್ತಾರೆ. ಧೋನಿ ಯಾವಾಗಲೂ ಆ್ಯಕ್ಷನ್ ಮೋಡ್ನಲ್ಲಿ ಇರುತ್ತಾರೆ’ ಎಂದು ಸಾಕ್ಷಿ ಹೇಳಿದ್ದಾರೆ. ‘ಎಲ್ಜಿಎಂ’ ನಿರ್ದೇಶಕ ರಮೇಶ್ ಅವರ ಉತ್ತರವೇ ಬೇರೆ. ‘ಅವರು ನಿಜ ಜೀವನದ ಸೂಪರ್ ಹೀರೋ. ಹೀಗಾಗಿ ಅವರು ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು’ ಎನ್ನುವ ಬೇಡಿಕೆ ಇಟ್ಟಿದ್ದಾರೆ.

suddiyaana