ಕ್ಯಾಪ್ಟನ್ ಕೂಲ್ ಧೋನಿಗೆ ಕೃಷಿಯೆಂದರೆ ಖುಷಿ – ಹೈನುಗಾರಿಕೆಯೆಂದರೆ ಮಾಹಿಗೆ ಇಷ್ಟ..!

ಕ್ಯಾಪ್ಟನ್ ಕೂಲ್ ಧೋನಿಗೆ ಕೃಷಿಯೆಂದರೆ ಖುಷಿ – ಹೈನುಗಾರಿಕೆಯೆಂದರೆ ಮಾಹಿಗೆ ಇಷ್ಟ..!

ಟೀಮ್ ಇಂಡಿಯಾ ಮಾಜಿ ನಾಯಕ ಕ್ಯಾಪ್ಟಲ್ ಕೂಲ್ ಎಂ.ಎಸ್ ಧೋನಿ ಜುಲೈ 7ರಂದು 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಧೋನಿ ಲೆಜೆಂಡರಿ ಕ್ರಿಕೆಟರ್ ಅನ್ನೋದು ನಿಜ. ಹಾಗೆಯೇ ಧೋನಿಗೆ ಕೃಷಿ ಚಟುವಟಿಕೆ ಮಾಡುವುದರಲ್ಲೂ ಆಸಕ್ತಿಯಿದೆ ಅನ್ನೋದು ಕೂಡಾ ಅಷ್ಟೇ ಸತ್ಯ. ಸಾವಯವ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಧೋನಿ ರಾಂಚಿಯ ಸೆಂಬೋ ಗ್ರಾಮದಲ್ಲಿ 43 ಎಕರೆ ಪ್ರದೇಶದಲ್ಲಿ ಈಜಾ ಫಾರ್ಮ್ ಎಂಬ ಹೆಸರಿನಲ್ಲಿ ಸಾವಯವ ಕೃಷಿಯನ್ನು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: ಕ್ಯಾಪ್ಟನ್ ಕೂಲ್ @42 – ಹ್ಯಾಪಿ ಬರ್ತ್‌ಡೇ ಎಂ.ಎಸ್ ಧೋನಿ

ಮಾಹಿಗೆ ಬೈಕ್ ಕ್ರೇಜ್ ಇರುವುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರವೇ. ಇದಾದ ಮೇಲೆ ಕೃಷಿಯಲ್ಲೂ ಈಗ ಧೋನಿ ಆಸಕ್ತಿ ತೋರುತ್ತಿದ್ದಾರೆ. ಸಾವಯವ ಕೃಷಿಯನ್ನು ಉತ್ತೇಜಿಸಲು ಸ್ವತಃ ತಾವೇ ಕೃಷಿಕಾರ್ಯ ಮಾಡಿಸುತ್ತಿದ್ದಾರೆ. 43 ಎಕರೆ ಕೃಷಿ ಪ್ರದೇಶದಲ್ಲಿ ಸ್ಟ್ರಾಬೆರಿ, ಕ್ಯಾಪ್ಸಿಕಂ, ಡ್ರ್ಯಾಗನ್ ಫ್ರೂಟ್, ಕಲ್ಲಂಗಡಿ, ಸೋರೆಕಾಯಿ, ಬೆಂಡೆಕಾಯಿ, ಬ್ರೊಕೊಲಿ ಸೇರಿದಂತೆ ಹಲವು ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.

ಕೃಷಿಯಲ್ಲಿ ಖುಷಿಯನ್ನು ಕಾಣುತ್ತಿರುವ ಧೋನಿ ಈ ಹಿಂದೆ ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಇದನ್ನು ನೋಡಿ ಅಭಿಮಾನಿಗಳು ಕೂಡಾ ಖುಷಿಪಟ್ಟಿದ್ದರು.

ಇನ್ನು ಧೋನಿ ಡೈರಿ ಉತ್ಪನ್ನಗಳ ಬಗ್ಗೆಯೂ ಹೆಚ್ಚಿನ ಒಲವು ಹೊಂದಿದ್ದಾರೆ. ತಮ್ಮ ಫಾರ್ಮ್‌ಹೌಸ್‌ನಲ್ಲಿ ಡೈರಿ ಕೂಡಾ ಓಪನ್ ಮಾಡಿದ್ದಾರೆ. ಆರಂಭದಲ್ಲಿ ಕೇವಲ 25 ಹಸುಗಳನ್ನು ಹೊಂದಿದ್ದ ಡೈರಿಯಲ್ಲಿ ಈಗ ಹಸುಗಳ ಸಂಖ್ಯೆ 130ಕ್ಕೇರಿದೆ.

suddiyaana