ಆರ್ ಸಿಬಿಯಲ್ಲಿ ಸಾಲ್ಟ್.. ಮುಂಬೈನಲ್ಲಿ ಸೂರ್ಯ – ಸ್ಟಂಪಡ್ ಸುಲ್ತಾನ ಧೋನಿ!

ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ್ದೇ ಹೇಳಿದ್ದು. ಅಂದಿನಿಂದ ಇಂದಿನವರೆಗೆ ಪ್ರತಿ ಬಾರಿ ಐಪಿಎಲ್ ಆರಂಭ ಆದಾಗ್ಲೂ ಧೋನಿಗೆ ಇದೇ ಲಾಸ್ಟ್ ಐಪಿಎಲ್ ಅನ್ನೋ ಟಾಕ್ ಶುರುವಾಗುತ್ತೆ. ಈ ಬಾರಿಯ ಐಪಿಎಲ್ನಲ್ಲೂ ಧೋನಿಯೇ ಅತ್ಯಂತ ಹಿರಿಯ ಆಟಗಾರ. ಬಟ್ ಏಜ್ ಅನ್ನೋದು ಜಸ್ಟ್ ನಂಬರ್ ಅನ್ನೋ ಹಾಗೇ ಕಿಪಿಂಗ್ ಮಾಡೋ ಅವ್ರ ಸ್ಟ್ರಾಮಿನಾ ಮೆಚ್ಚಲೇಬೇಕು. ಫ್ರಾಕ್ಷನ್ ಆಫ್ ಸೆಕೆಂಡ್ಸ್ನಲ್ಲೇ ಬೇಲ್ ಎಗರಿಸಿ ಬ್ಯಾಟ್ಸ್ಮನ್ನ ಪೆವಿಲಿಯನ್ ಸೇರಿಸಿ ಬಿಡ್ತಾರೆ. ಆರ್ಸಿಬಿ ವಿರುದ್ಧದ ಪಂದ್ಯದಲ್ಲೂ ಅಂಥದ್ದೇ ಕೈಚಳಕ ತೋರಿಸಿದ್ರು.
ವಯಸ್ಸಾದಂತೆಲ್ಲಾ ತನ್ನ ಆಟದಲ್ಲಿ ಇನ್ನಷ್ಟು ಚುರುಕುತನ ತೋರಿಸುತ್ತಿರೋ ಧೋನಿ, ನನ್ನ ಆಟಕ್ಕೆ ಇನ್ನು ಕೊನೆ ಬಂದಿಲ್ಲ ಅನ್ನುವಂತೆ ಪರ್ಫಾಮ್ ಮಾಡ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿ ಸೂರ್ಯಕುಮಾರ್ ಯಾದವ್ ಪೆವಿಲಿಯನ್ ಸೇರುವಂತೆ ಮಾಡಿದ್ರು. ಸೂರ್ಯನನ್ನ 0.12 ಸೆಕೆಂಡ್‌ನಲ್ಲಿ ಅದ್ಭುತವಾಗಿ ಸ್ಟಂಪ್ ಮಾಡಿದ್ದ ಧೋನಿ ವಿಕೆಟ್ ಪಡೆದಿದ್ರು. ಅದೆಂಥಾ ಪರ್ಫೆಕ್ಟ್ ಆಗಿ ವಿಕೆಟ್ ಎಗರಿಸಿದ್ರು ಅಂದ್ರೆ ಸೂರ್ಯ ರಿವ್ಯೂ ನೋಡೋಕೆ ಹೋಗ್ಲೇ ಇಲ್ಲ. ಅಂಪೈರ್ ಔಟ್ ಕೊಡೋ ಮುನ್ನವೇ ಪೆವಿಲಿಯನ್ ದಾರಿ ಹಿಡಿದಿದ್ರು. ಇದೀಗ ಬೆಂಗಳೂರು ವಿರುದ್ಧದ ಪಂದ್ಯದಲ್ಲೂ ಅಂಥದ್ದೇ ಕರಾಮತ್ತು ಮಾಡಿದ್ರು. ಬೆಂಗಳೂರು ಪರ ಸ್ಫೋಟಕ ಬ್ಯಾಟಿಂಗ್ ಆಡ್ತಿದ್ದ ಫಿಲ್ ಸಾಲ್ಟ್ರನ್ನ ಸ್ಟಂಪ್ ಔಟ್ ಮಾಡುವ ಮೂಲಕ ಮತ್ತೆ ಮೋಡಿ ಮಾಡಿದ್ದಾರೆ. ಸಾಲ್ಟ್ ಅವರನ್ನು 0.14 ಸೆಕೆಂಡ್‌ನಲ್ಲಿ ಸ್ಟಂಪ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದ್ದಾರೆ.
ಎಂಎಸ್ ಧೋನಿ ಐಪಿಎಲ್ನಲ್ಲಿ ಇದುವರೆಗೆ 236 ಪಂದ್ಯಗಳನ್ನ ಆಡಿದ್ದಾರೆ. ಈ ವೇಳೆ ವಿಕೆಟ್ ಕೀಪಿಂಗ್ ನಲ್ಲಿ 191 ಔಟ್ ಪಡೆದಿದ್ದಾರೆ. ಅದ್ರಲ್ಲಿ 148 ಕ್ಯಾಚ್ಗಳನ್ನ ಹಿಡಿದಿದ್ರೆ 43 ಬಾರಿ ಸ್ಟಂಪ್ಔಟ್ ಮಾಡಿದ್ದಾರೆ.. ಹಾಗೇ ಟೀಂ ಇಂಡಿಯಾ ಪರವೂ ಇತಿಹಾಸ ಸೃಷ್ಟಿಸಿದ್ದಾರೆ. ಟೀಂ ಇಂಡಿಯಾದ ದಂತಕಥೆಯಾಗಿರುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ, ಏಕದಿನ ಪಂದ್ಯಗಳಲ್ಲಿ 444 ಔಟ್‌ಗಳನ್ನ ಮಾಡಿದ್ದಾರೆ. ಅದ್ರಲ್ಲಿ 321 ಕ್ಯಾಚ್‌ಗಳು ಮತ್ತು 123 ಸ್ಟಂಪಿಂಗ್‌ಗಳು ಸೇರಿವೆ. ಎಲ್ಲಾ ಸ್ವರೂಪಗಳಲ್ಲಿ ಅಂದ್ರೆ ಟೆಸ್ಟ್, ಏಕದಿನ ಮತ್ತು ಟಿ20ಐ ಸೇರಿ ಒಟ್ಟು 829 ಔಟ್‌ಗಳನ್ನು ಮಾಡಿದ್ದಾರೆ. ಇನ್ನು ಮಾಹಿ ಎದುರಾಳಿಯ ವಿರುದ್ಧ ಗೆದ್ದ ತಕ್ಷಣ, ಅವರು ಸ್ಟಂಪ್‌ಗಳನ್ನು ಕೈಗೆತ್ತಿಕೊಂಡು ಸಂಭ್ರಮಿಸೋದು ಅವ್ರ ಸ್ಪೆಷಾಲಿಟಿ.