ಐಷಾರಾಮಿ ಆಫ್ ರೋಡ್ ಕಾರು ಖರೀದಿಸಿದ ಧೋನಿ – ಹೊಸ ಕಾರಿಗೆ ಸಿಕ್ತು ಧೋನಿಯ ಫೆವರೇಟ್ ನಂಬರ್

ಐಷಾರಾಮಿ ಆಫ್ ರೋಡ್ ಕಾರು ಖರೀದಿಸಿದ ಧೋನಿ – ಹೊಸ ಕಾರಿಗೆ ಸಿಕ್ತು ಧೋನಿಯ ಫೆವರೇಟ್ ನಂಬರ್

ಮಹೇಂದ್ರ ಸಿಂಗ್ ಧೋನಿಗೆ ಹೊಸ ವಾಹನಗಳ ಕ್ರೇಜ್ ಎಷ್ಟಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ತಮ್ಮ ಇಷ್ಟದ ವಾಹನಗಳ ಸಂಗ್ರಹಕ್ಕಾಗಿಯೇ ದೊಡ್ಡದಾದ ಗ್ಯಾರೇಜ್ ಮಾಡಿಕೊಂಡಿದ್ದಾರದೆ. ಇದರಲ್ಲಿ ಹತ್ತಾರು ಐಷಾರಾಮಿ ಕಾರುಗಳು ಮತ್ತು ಸೂಪರ್ ಬೈಕ್ ಗಳು ಇವೆ. ಇದೀಗ ಧೋನಿ ಬಲಿಷ್ಠವಾಗಿರುವ ಆಫ್ ರೋಡ್ ಎಸ್ ಯುವಿ ಮರ್ಸಿಡಿಸ್-ಎಎಂಜಿ ಜಿ63 ಖರೀದಿಸಿದ್ದು, ಇದು ಆಫ್ ರೋಡ್ ಕೌಶಲ್ಯತೆಯಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿದೆ.

ಇದನ್ನೂ ಓದಿ: ಬ್ಯಾಟ್ ಬೀಸೋಕೂ ಸೈ.. ಸ್ಟೇರಿಂಗ್ ಹಿಡಿಯೋಕೂ ಜೈ – ಧೋನಿಯ ಟ್ರ್ಯಾಕ್ಟರ್ ರೈಡಿಂಗ್ ಹೇಗಿದೆ ನೋಡಿ!?

ಬರೋಬ್ಬರಿ 3.30 ಕೋಟಿ ಬೆಲೆಯ ಮರ್ಸಿಡಿಸ್-ಎಎಂಜಿ ಜಿ63 ಕಾರನ್ನು ಮಹೇಂದ್ರ ಸಿಂಗ್ ಧೋನಿ ಖರೀದಿಸಿದ್ದಾರೆ. ವಿಶೇಷ ಎಂದರೆ ಇದರ ನಂಬರ್ ಪ್ಲೇಟ್ 0007 ಆಗಿದೆ. ಧೋನಿ 70ಕ್ಕೂ ಅಧಿಕ ಬೈಕ್‌ಗಳವೆ, ಕಾರುಗಳ ಕಲೆಕ್ಷನ್ ಕೂಡ ತುಂಬಾ ಇದೆ. ವಿಶ್ವದ ಅತಿ ಹೆಚ್ಚು ಐಷಾರಾಮಿ ಬೈಕ್ ಮತ್ತು ಕಾರು ಸಂಗ್ರಹವನ್ನು ಎಂಎಸ್ ಧೋನಿ ಹೊಂದಿದ್ದಾರೆ. ಇದೀಗ ಧೋನಿ ಖರೀದಿಸಿರುವ ಮರ್ಸಿಡಿಸ್-ಎಎಂಜಿ ಜಿ63 ಕಾರು, ವಿಶೇಷವಾಗಿ ಆಫ್ ರೋಡ್ ಕೌಶಲ್ಯತೆಗಾಗಿ ಅಭಿವೃದ್ದಿಗೊಂಡಿದೆ. ಈ ಮರ್ಸಿಡಿಸ್-ಎಎಂಜಿ ಜಿ63 ಬೆಲೆ ಬರೋಬ್ಬರಿ 3.30 ಕೋಟಿ ಆಗಿದೆ. ವಿಶೇಷ ಅಂದರೆ ಈ ಕಾರಿಗೂ ಜೇಮ್ಸ್ ಬಾಂಡ್‌ಗೂ ಲಿಂಕ್ ಇದೆ. ಹಾಲಿವುಡ್ ಸಿನಿಮಾದ ಅತ್ಯಂತ ಜನಪ್ರಿಯ ಪಾತ್ರ ಜೇಮ್ಸ್ ಬಾಂಡ್‌ ಗೂ ನಂಟಿದೆ. ಧೋನಿ  ಕಾರಿನ ನಂಬರ್ ಪ್ಲೇಟ್ 0007.  ಈ  007 ನಂಬರ್ ಜೇಮ್ಸ್ ಬಾಂಡ್ ಚಿತ್ರದಲ್ಲಿನ ನಂಬರ್. ಬಾಂಡ್ ಚಿತ್ರದಲ್ಲಿ ಎಲ್ಲವೂ 007. ಇದೇ ನಂಬರ್ ಇದೀಗ ಧೋನಿ ತಮ್ಮ ಮರ್ಸಿಡಿಸ್ ಬೆಂಜಿ ಜಿಕ್ಲಾಸ್ ಕಾರಿಗೂ ಪಡೆದಿದ್ದಾರೆ. ಹಾಗಂತ ಧೋನಿ ಜೇಮ್ಸ್ ಬಾಂಡ್ ಅಭಿಮಾನಿಯಾಗಿ ಈ ನಂಬರ್ ಪಡೆದಿಲ್ಲ. ಇದಕ್ಕೆ ಮುಖ್ಯ ಕಾರಣ ಧೋನಿ ಜರ್ಸಿ ನಂಬರ್ 7. ಧೋನಿ ಹುಟ್ಟಿದ ದಿನಾಂಕ 7. ಹೀಗಾಗಿ ಧೋನಿ ತಮ್ಮ ಜರ್ಸಿಗೆ ನಂಬರ್ 7 ಇಟ್ಟುಕೊಂಡಿದ್ದರು. ಇದೀಗ ಇದೇ ನಂಬರ್‌ನ್ನು ತಮ್ಮ ಕಾರಿಗೆ ಪಡೆದುಕೊಂಡಿದ್ದಾರೆ. JH01 FB0007 ನಂಬರ್ನ್ನು ಧೋನಿ ಪಡೆದುಕೊಂಡಿದ್ದಾರೆ. ಮರ್ಸಿಡಿಸ್ ಬೆಂಜ್ ಜಿಕ್ಲಾಸ್ ಕಾರು ಐಷಾರಾಮಿ ಜೊತೆ ಅಡ್ವೆಂಚರ್ ಕಾರು. ಧೋನಿ ಎಸ್ಯುವಿ ಕಾರುಗಳನ್ನು ಹೆಚ್ಚಾಗಿ  ಇಷ್ಟಪಡುತ್ತಾರೆ. ಇದು ಭಾರತದ ಯಾವುದೇ ರಸ್ತೆ, ಆಫ್ ರೋಡ್ ಡ್ರೈವಿಂಗ್‌ಗೆ ಸಹಕಾರಿಯಾಗಿದೆ.

Sulekha