ಸಿಗಬಹುದೇ ಕಾಣೆಯಾದ ಅನನ್ಯ? ತಾಯಿಗೇಕೆ ಅಸ್ಥಿಪಂಜರದ ನಿರೀಕ್ಷೆ?
ಧರ್ಮಸ್ಥಳದಲ್ಲಿ ಹೂತಿಟ್ಟಿರುವುದು ಖಾತ್ರಿಯೇ?

ಸಿಗಬಹುದೇ ಕಾಣೆಯಾದ ಅನನ್ಯ? ತಾಯಿಗೇಕೆ ಅಸ್ಥಿಪಂಜರದ ನಿರೀಕ್ಷೆ?ಧರ್ಮಸ್ಥಳದಲ್ಲಿ ಹೂತಿಟ್ಟಿರುವುದು ಖಾತ್ರಿಯೇ?

ಕಣ್ಣೀರು.. ದುಖ.. ಹತಾಶೆ.. 22 ವರ್ಷಗಳ ಹಿಂದೆ ನಡೆದ ಕಹಿ ನೆನಪು ಬಿಟ್ಟು ಈ ತಾಯಿ ಬಳಿ ಇನ್ನೇನು ಉಳಿದಿಲ್ಲ.. ಅದ್ಯಾರ ಭಯದಿಂದಲೋ.. ಪೊಲೀಸರ ದರ್ಪದಿಂದಲೋ ತನ್ನ ಮಗಳಿಗಾದ ಅನ್ಯಾಯವನ್ನ ತನ್ನ ಒಡಲಲ್ಲಿ ಬಚ್ಚಿಕೊಂಡಿದ್ದ ಈ ತಾಯಿ ಈಗ ತನ್ನ ನೋವನ್ನು ಹೊರಹಾಕುತ್ತಿದ್ದಾರೆ ಸುಜಾತ ಭಟ್.. ಸುಜಾತ ಭಟ್‌ ಅವರ ನೋವಿನ ಕತೆಯ ಕೇಂದ್ರ ಬಿಂದುವೇ ಅವರ ಮಗಳು ಅನನ್ಯ ಭಟ್.. ಎಂಬಿಬಿಎಸ್‌ ವಿದ್ಯಾರ್ಥಿನಿಯಾಗಿದ್ದ ಅನನ್ಯ ಭಟ್‌ ಬರೋಬ್ಬರಿ 22 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕಾಣೆಯಾಗ್ತಾಳೆ.. ನಂತರ ಏನಾದಳು.. ಎಲ್ಲಿಗೆ ಹೋದಳು.. ಬದುಕಿದ್ದಾಳಾ.. ಆಕೆಯನ್ನು ಯಾರಾದರೂ ಕಡೆಯದ್ದಾಗಿ ನೋಡಿದ್ದಾರಾ? ಯಾವುದೂ ಯಾರಿಗೂ ಗೊತ್ತಿಲ್ಲ.. ಯಾಕಂದ್ರೆ ಪ್ರಕರಣ ಇನ್ನು ಹಸಿ ಹಸಿಯಾಗಿದ್ದಾಗಲೇ ಸುಜಾತಾ ಭಟ್‌ ಅವರು ಹೇಳುವಂತೆ ಪೊಲೀಸರು ದೂರು ದಾಖಲಿಸಿರಲಿಲ್ಲ.. ಆದ್ರೆ 22 ವರ್ಷದ ಹಳೆಯ ಘಟನೆ ಈಗ ಮೇಲಕ್ಕೆ ಬಂದಿರೋದ್ರಿಂದ, ಯಾವ ಸ್ವರೂಪದಲ್ಲಿ ನ್ಯಾಯ ಸಿಗಬಹುದು.. ಇಷ್ಟಕ್ಕೂ ಅನನ್ಯಭಟ್‌ಗೆ ನ್ಯಾಯ ಸಿಗೋದಿಕ್ಕೆ ಸಾಧ್ಯವಿದೆಯೇ ಎಂಬಾ ಪ್ರಶ್ನೆಗೆ  ಈ ಸ್ಟೋರಿ ಓದಿದ್ರೆ ನಿಮ್ಗ ಗೊತ್ತಾಗುತ್ತೆ.

ಅನನ್ಯ ಭಟ್‌  ಮಣಿಪಾಲದಲ್ಲಿ ಮೆಡಿಕಲ್‌ ಓದುತ್ತಿದ್ದ ಹುಡುಗಿ.. ಫಸ್ಟ್‌ ಇಯರ್‌ ಎಂಬಿಬಿಎಸ್‌ ಓದುತ್ತಿದ್ದಾಗ ತನ್ನ ಫ್ರೆಂಡ್ಸ್‌ ಜೊತೆ ಧರ್ಮಸ್ಥಳಕ್ಕೆ ಬಂದಿರುತ್ತಾಳೆ.. ಅದೇ ಕೊನೆ.. ಅಲ್ಲಿಂದ ಆಕೆ ವಾಪಸ್‌ ಬಂದಿಲ್ಲ.. ಆಕೆಗೆ ಏನಾಯ್ತು ಎಂಬುದು ಆಕೆಯ ಫ್ರೆಂಡ್ಸ್‌ಗೂ ಗೊತ್ತಿಲ್ಲ.. ಯಾಕಂದ್ರೆ, ಧರ್ಮಸ್ಥಳದಲ್ಲಿ ಅನನ್ಯ ಭಟ್‌ಳನ್ನು ಬಿಟ್ಟು ಆಕೆಯ ಫ್ರೆಂಡ್ಸ್‌ ಬಟ್ಟೆ ತರೋಕೆ ಅಂತ ಮನೆಗೆ ಹೋಗಿದ್ದರಂತೆ.. ವಾಪಸ್‌ ಬಂದು ನೋಡಿದ್ರೆ ಅನನ್ಯ ಭಟ್‌ ಅಲ್ಲಿ ಇರಲಿಲ್ಲ.. ಆಗ ಸುತ್ತ ಮುತ್ತ ಹುಡುಕಿದ್ದಾರೆ.. ಅನನ್ಯ ಏನಾದಳು ಎಂಬುದು ಕಡೆಗೂ ಗೊತ್ತಾಗಿಲ್ಲ.. ಆ ಸಮಯದಲ್ಲಿ ಅನನ್ಯಳ ತಾಯಿ ಸುಜಾತಾ ಭಟ್‌ ಕೊಲ್ಕೊತ್ತಾದಲ್ಲಿ ಕೆಲಸ ಮಾಡ್ತಿದ್ದರು.. ಅನನ್ಯಳ ಫ್ರೆಂಡ್ಸ್‌, ಸುಜಾತಾ ಅವರಿಗೆ ವಿಷಯ ಮುಟ್ಟಿಸಿದ ಮೇಲೆ ಅವರು ಧರ್ಮಸ್ಥಳಕ್ಕೆ ಬಂದಿದ್ದಾರೆ.. ಹಾಗೆ ಬಂದವರು ಮಗಳ ಬಗ್ಗೆ ದೂರು ಕೊಡಲು ಪೊಲೀಸ್‌ ಠಾಣೆಗೆ ಹೋದರೆ, ಅವರು ಬೈದು ಕಳಿಸ್ತಾರೆ.. ದೂರು ದಾಖಲಾಗೋದೇ ಇಲ್ಲ.. ಅಂದ್ರೆ ಪೊಲೀಸರು ಒಬ್ಬಳು ಯುವತಿ ಕಾಣೆಯಾಗಿದ್ದಾಳೆ ಎಂಬ ವಿಷಯವನ್ನು ಸೀರಿಯಸ್ಸಾಗಿ ತೆಗೆದುಕೊಳ್ಳೋದೇ ಇಲ್ಲ ಎನ್ನುವುದು ಸುಜಾತಾ ಅವರು ಮಾಡುತ್ತಿರುವ ಆರೋಪ ಕೇಳಿದ್ರೆ ಗೊತ್ತಾಗುತ್ತದೆ.. ಮಗಳಿಗಾಗಿ ತನಗೆ ಗೊತ್ತಿರುವ ಕಡೆಗಳಲ್ಲಿ ಹುಡುಕಿದ್ಮೇಲೆ ಸುಜಾತಾ ಭಟ್‌, ಪೊಲೀಸ್‌ ಠಾಣೆಗೆ ಮೆಟ್ಟಿಲೇರಿದ್ದರು ಎನ್ನುವುದು ಅವರೇ ಹೇಳಿರುವ ಮಾತು.. ಅಲ್ಲದೆ, ಹಾಗೆ ಪೊಲೀಸರ ಬಳಿಗೆ ಹೋದಾಗ ಅವರು ಕೇಸ್‌ ದಾಖಲಿಸಿಕೊಳ್ಳದೆ, ಬೈದು ಕಳಿಸಿದ್ದಾರೆ.. ನಂತರ ಧರ್ಮಸ್ಥಳದಲ್ಲಿ ಅವರ ಮೇಲೆ ಹಲ್ಲೆಯೂ ನಡೆದಿದೆ ಎನ್ನುವುದನ್ನು ಸುಜಾತಾ ಈಗಾಗ್ಲೇ ಹೇಳಿಕೊಂಡಿದ್ದಾರೆ..

22 ವರ್ಷಗಳ ನಂತರ ಅನನ್ಯ ಭಟ್‌ ಸಿಗ್ತಾಳಾ?

2003ರಲ್ಲಿ ತನ್ನ ಮೇಲೆ ಹಲ್ಲೆಯಾದ ನಂತರ ತಾನು ಈ ಪ್ರಕರಣವನ್ನು ಮುಂದುವರೆಸಲು ಸಾಧ್ಯವಾಗಿಲ್ಲ ಎಂದು ಅನನ್ಯಳ ತಾಯಿ ಸುಜಾತಾ ಹೇಳ್ತಿದ್ದಾರೆ.. ಬೆಳೆದು ನಿಂತ ಮಗಳನ್ನು ಕಳೆದುಕೊಂಡ ಆ ತಾಯಿಯ ದುಃಖ.. ಆಕೆಯನ್ನು ಆವರಿಸಿರಬಹುದಾಗಿರುವ ಆತಂಕ.. ಅದ್ಯಾವ ಮಟ್ಟಿನದ್ದು ಎನ್ನುವುದು ಈಗ ಊಹಿಸೋದು ಕಷ್ಟ.. ಸುಜಾತಾ ಅವರ ಮಾತಿನ ಪ್ರಕಾರ, ಅವರು ತಮ್ಮ ಮಗಳು ಬದುಕಿ ಉಳಿದಿದ್ದಾಳೆ ಎಂಬ ಆಸೆಯನ್ನು ಬಿಟ್ಟುಬಿಟ್ಟಿದ್ದಾರೆ.. ಅವರು ಈಗ ತಮ್ಮ ಮಗಳನ್ನು ಹುಡುಕಿ ಬಂದಿಲ್ಲ.. ಬದಲಿಗೆ ಮಗಳ ಅಸ್ಥಿಪಂಜರ ಏನಾದ್ರೂ ಸಿಗಬಹುದೇ ಎಂಬ  ದೂರದ ಆಸೆ ಅವರಿಗಿದೆ.. ಒಂದು ವೇಳೆ ಹಾಗೇನಾದರೂ ಅಸ್ಥಿಪಂಜರ ಸಿಕ್ಕರೆ ಮಗಳಿಗೆ ಶ್ರಾದ್ಧ ಮಾಡಬಹುದು.. ಅಂತ್ಯಸಂಸ್ಕಾರ ಪೂರೈಸಬಹುದು ಎಂಬ ದೂರದ ಆಸೆ ಈ ಹಿರಿಯ ಜೀವಕ್ಕಿದೆ.. ಇಂತಹ ದುಸ್ಥಿತಿ ಯಾವುದೇ ತಂದೆ ತಾಯಿಗೂ ಬರಬಾರದು..

ಇಷ್ಟಕ್ಕೂ ಧರ್ಮಸ್ಥಳ ಪರಿಸರದಲ್ಲಿ ಹಲವರ ಶವಗಳನ್ನು ತಾನು ಹೂತಿಟ್ಟಿದ್ದೇನೆ ಎಂಬ ಹೇಳಿಕೆಯನ್ನು ಧರ್ಮಸ್ಥಳದ ವ್ಯಕ್ತಿಯೊಬ್ಬರು ಮೊನ್ನೆ ಬೆಳ್ತಂಗಡಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.. ತಮ್ಮ ಹೇಳಿಕೆಗೆ ಪೂರಕವಾಗಿ ಅವರು ಒಂದು ಅಸ್ತಿಪಂಜರದ ಅವಶೇಷಗಳನ್ನು ಒಪ್ಪಿಸಿದ್ದಾರೆ.. ಈ ಅಸ್ಥಿಪಂಜರವನ್ನು ತಾವೇ ಹೊರತೆಗೆದಿರುವುದಾಗಿ ಹೇಳಿದ್ದಾರೆ.. ಇದೊಂದು ಅಸ್ಥಿಪಂಜರದ ರೀತಿಯಲ್ಲಿ ಇನ್ನೂ ಬೇರೆ ಅಸ್ಥಿಪಂಜರಗಳು ಇದ್ದಾವಾ ಎನ್ನುವುದರ ಬಗ್ಗೆ ಇದುವರೆಗೆ ಪೊಲೀಸರಿಂದ ಸ್ಪಷ್ಟತೆ ಸಿಕ್ಕಿಲ್ಲ.. ಇದರ ನಡುವೆಯೇ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಪತ್ರ ಬರೆದು, ತನಿಖೆ ನಡೆಸಲು ವಿಶೇಷ ತನಿಖಾ ದಳವನ್ನ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.. ಎಸ್‌ಐಟಿ ರಚನೆಯ ಮೂಲಕ ನ್ಯಾಯ ಕೊಡಿಸಬೇಕು ಎನ್ನುವ ಮನವಿ ಬಂದಿದೆ. ವಕೀಲರ ತಂಡ ಪ್ರತ್ಯೇಕವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಇದೇ ಮಾದರಿಯ ಒತ್ತಾಯವನ್ನು ಮಾಡಿದೆ.. ಆದರೆ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲು ಮಾಡಿರುವುದರಿಂದ,  ಶವ ಹೂತಿಟ್ಟಿದ್ದಾರೆ ಎಂಬ ಆರೋಪಗಳಿಗೆ ಜೀವ ಬಂದಿದೆ. ಹಾಗಿದ್ದರೂ ತನಿಖೆ ಇನ್ನಷ್ಟೇ ಆರಂಭ ಆಗಬೇಕಿದೆ.. ಹಾಗೊಂದು ವೇಳೆ ತನಿಖೆ ಆರಂಭಗೊಂಡರೂ ಅಲ್ಲೇನಾದರೂ ಅಸ್ಥಿಪಂಜರಗಳು ಸಿಗುತ್ತವಾ ಎಂಬ ಪ್ರಶ್ನೆ ಇದ್ದೇ ಇದೆ.. ಈಗ ಅನನ್ಯ ಭಟ್‌ ಪ್ರಕರಣದಲ್ಲೂ ಆಕೆ ನಿಜಕ್ಕೂ ಧರ್ಮಸ್ಥಳದಲ್ಲಿ ಸಾವಿಗೀಡಾಗಿದ್ದು, ಆಕೆಯನ್ನು ಅವರ ತಾಯಿಯ ಅನುಮಾನದಂತೆ ಹೂತಿಟ್ಟಿದ್ದರೆ ಮಾತ್ರ ಅಸ್ಥಿಪಂಜರ ಸಿಗಬಹುದೇನೋ ಎಂಬ ದೂರ ನಿರೀಕ್ಷೆಯಷ್ಟೇ ಈಗಿದೆ..  ನಿಜ್ಕಕೂ ಈಗಾಗ್ಲೇ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿರುವ ವ್ಯಕ್ತಿಯೇ ಹೇಳಿರುವಂತೆ, ಅಸ್ಥಿಪಂಜರಗಳು ಸಿಕ್ಕರೆ ಮಾತ್ರ ಈ ಎಲ್ಲಾ ನಿರೀಕ್ಷೆಗಳಿಗೆ ಉತ್ತರ ಸಿಗಬಹುದು.. ಇಲ್ಲದೇ ಹೋದ್ರೆ ನೇತ್ರಾವತಿ ನದಿಯಲ್ಲಿ ಹರಿದುಹೋಗುವ ನೀರಿನಂತೆ, ಈಗ ಎದ್ದಿರುವ ಆರೋಪಗಳು ಕೂಡ ಕಾಲಚಕ್ರದಡಿಯಲ್ಲಿ ಹರಿದುಹೋಗುವ ಸಾಧ್ಯತೆಗಳು ಇದ್ದೇ ಇವೆ.. ಏನೇ ಆದರೂ ಈಗ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ.. ನಿಜಕ್ಕೂ ಸಿದ್ದರಾಮಯ್ಯ ಸರ್ಕಾರ, ಈಗ ಕೇಳಿಬರುತ್ತಿರುವ ಆರೋಪಗಳನ್ನೇ ಆಧರಿಸಿ, ತನಿಖೆಗೆ ವಿಶೇಷ ತಂಡ ರಚಿಸುತ್ತಾ? ಹಾಗೊಂದು ವೇಳೆ ತಂಡ ರಚನೆಯಾದರೂ, ಅವರು ಯಾವುದೇ ಒತ್ತಡಗಳಿಗೆ ಮಣಿಯದೆ ಕೆಲಸ ಮಾಡ್ತಾರಾ ಎಂಬ ಪ್ರಶ್ನೆಗಳಿಗೂ ಸದ್ಯಕ್ಕೆ ಉತ್ತರವಿಲ್ಲ.

 

 

 

 

 

Kishor KV