ನಿಗೂಢ ಸಮಾದಿಗಳಲ್ಲಿ ಇಂದು ಪತ್ತೆಯಾಗಿದ್ದೇನು? – ಅನಾಮಿಕನ ಮಾಸ್ಕ್ ನಲ್ಲೂ ರಹಸ್ಯವಿತ್ತಾ?

ನಿಗೂಢ ಸಮಾದಿಗಳಲ್ಲಿ ಇಂದು ಪತ್ತೆಯಾಗಿದ್ದೇನು?  – ಅನಾಮಿಕನ ಮಾಸ್ಕ್ ನಲ್ಲೂ ರಹಸ್ಯವಿತ್ತಾ?

ಧರ್ಮಸ್ಥಳ ತಲೆಬರುಡೆ ಕೇಸ್‌ನಲ್ಲಿ ಅತ್ಯಂತ ಮಹತ್ವದ ಮತ್ತು ಪ್ರಮುಖ ಬೆಳವಣಿಗೆ ಆಗ್ತಿದೆ.. SIT ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆ ಧರ್ಮಸ್ಥಳದ ಸುತ್ತಲೂ ಶವ ಶೋಧ ಜೋರಾಗಿ ನಡೆಯುತ್ತಿದೆ.. 20 ವರ್ಷಗಳ ಹಿಂದೆ ಹೂದುಗಿ ಹೋಗಿದ್ದ ಸತ್ಯವನ್ನ ಆಚೆ ಹಾಕೋ ಕೆಲಸ ಮಳೆಯ ನಡುವೆ ಭರ್ಜರಿಯಾಗಿ ಸಾಗುತ್ತಿದೆ. ಈ ಕೇಸ್‌ನಲ್ಲಿ ಏನೆಲ್ಲಾ ಕಾನೂನು ಪ್ರಕ್ರಿಯೇ ನಡೆಯಬೇಕೋ ಅದೆಲ್ಲವೂ ನಡೆಯುತ್ತಿದೆ.

ಮೊದಲ ದಿನ ಅಂದ್ರೆ 28 ರಂದು  ಧರ್ಮಸ್ಥಳದಲ್ಲಿ ಎಸ್‌ಐಟಿ ಜೊತೆ ಪ್ರತ್ಯೇಕ್ಷ ಆದ ಮಾಸ್ಕ್ ಮ್ಯಾನ್ ನಾನು ಎಲ್ಲೆಲ್ಲೆ ಶವವನ್ನ ಹೂತಿಟ್ಟಿದ್ದೇನೆ ಅನ್ನೋ ಜಾಗವನ್ನ ಗುರುತಿಸಿದ್ದ,  ಆ ಜಾಗಕ್ಕೆ ನಂಬರ್ ಹಾಕಿ, ಟೇಪ್ ಹಾಕಿ ಸೆಕ್ಯೂರಿಟಿ ಕೂಡ ನೀಡಲಾಗಿತ್ತು.. ಎರಡನೇ ದಿನ ಅಂದ್ರೆ 29 ರಂದು ಮಾಸ್ಕ್ ಮ್ಯಾನ್ ತೋರಿಸಿದ ಜಾಗಗಳಲ್ಲಿ ಶವಗಳ ಉತ್ಖನನ ಕಾರ್ಯ ಮಾಡಲಾಯ್ತು.. ಮೊದಲ ಜಾಗಲ್ಲಿ ಏನೂ ಸಿಕ್ಕಿಲ್ಲ.. ಹೀಗಾಗಿ ಹಿಟಾಚಿ ಮೂಲಕ ಉತ್ಖನನ ನಡೆಸಲಾಯ್ತು.. ಆದ್ರೆ ಅದ್ದಕ್ಕೆ ಮಳೆ ಅಡ್ಡಿ ಆಯ್ತು..

ಅನಾಮಿಕ ವ್ಯಕ್ತಿ ನಾನು ಧರ್ಮಸ್ಥಳದಲ್ಲಿ ದೊಡ್ಡವರು ಹೇಳಿದ್ದಂತೆ ನೂರಾರು ಶವಗಳನ್ನ ಹೂತಿಟ್ಟಿದ್ದೇನೆ.. ಅವುಗಳನ್ನ ತೋರಿಸುತ್ತೇನೆ ಅಂದ ಮೇಲೆ ಈ ಕೇಸ್‌ ರಾಜ್ಯದಲ್ಲಿ ಸಂಚನ ಸೃಷ್ಟಿಸಿತ್ತು. ಎಸ್‌ಐಟಿ ರಚನೆ ಆಗೋ ತರ ಆಯ್ತು. ನಾವ್ ಇಲ್ಲಿ ಇವನ ಜ್ಞಾಪಕ ಶಕ್ತಿಯನ್ನ ಮೆಚ್ಚಲೇ ಬೇಕು.. ನೋಡಿ ಇವ್ನು ಶವ ಹೂತಿಟ್ಟಿದ್ದು 20 ವರ್ಷಗಳ ಹಿಂದೆ.. ಆದ್ರೆ ಇವನ್ ಆ ಜಾಗವನ್ನ  ಬಹಳ ಕಾನ್ಫಿಡೆನ್ಸ್‌ನಲ್ಲಿ  ತೋರಿಸಿದ್ದಾನೆ.. ಇದು ಒಂದ್ಕಡೆಯಾದ್ರೆ ಇವ್ನು ಧರ್ಮಸ್ಥಳವನ್ನ 2014 ರಲ್ಲೇ ಬಿಟ್ಟು ಹೋಗ್ತಾನೆ.. ಹೀಗಾಗಿ ಇವನನ್ನ ಯಾರು ಕೂಡ ಸರಿಯಾಗಿ ನೋಡಿಲ್ಲ.. ಹಾಗೇ ಇವ್ನ್ ಏನ್ ಕೆಲಸ ಮಾಡ್ತಿದ್ದ ಅನ್ನೋ ಮಾಹಿತಿ ಕೂಡ ಯಾರಿಗೂ ಇಲ್ಲ.. ಇವ್ನ ಫ್ಯಾಮೀಲಿ ಎಲ್ಲಿದೆ? ಇವ್ನ್ ಸ್ವಂತ ಊರು ಯಾವುದು ಅನ್ನೋದು ಶವಗಳ ರಹಸ್ಯದಂತೆ ರಹಸ್ಯವಾಗಿದೆ.. ಆದ್ರೆ ನಾವ್ ಇವ್ನು ಮುಖ ನೋಡೋಣ ಅಂತ ಪರೀಕ್ಷೆ ಮಾಡೋಕೆ ಟೈ ಮಾಡಿದ್ವಿ.. AI ನಲ್ಲಿ ಫೋಟೋ ಹಾಕಿ .. ಇವನ ಮುಖವನ್ನ ಗುರುತಿಸಿ ಅಂತ ಕೇಳಿದ್ದಾಗ.  AI ಏನ್ ಹೇಳ್ತು ಅಂದ್ರೆ ಇವನು ಕಪ್ಪು ಮಾಸ್ಕ್ ಹಾಕಿದ್ರಿಂದ ಆಗಲ್ಲ..  ಆ ಮಾಸ್ಕ್ ಮೇಲೆ ಗೆರೆ ಎಳೆದಿದ್ರಿಂದ ಮುಖದ ಬಗ್ಗೆ ಹೇಳಕ್ಕೆ ಆಗಲ್ಲ ಅನ್ನೋದ್ದನ್ನ ಹೇಳ್ತಿದೆ.. ಎಸ್ಐಟಿ ಅಧಿಕಾರಿಗಳು ಇಲ್ಲಿ ಇವನ ಮುಖದ ಗುರುತು ಸಿಗಬಾರದು..  ಆ್ಯಪ್‌ಗಳಲ್ಲಿ ಅಥವಾ ಸ್ಕೆಚ್ ಹಾಕಿ ಅವನ ಮುಖವನ್ನ ಕಂಡು ಹಿಡಿಯಬಹುದು ಅನ್ನೋ ಕಾರಣಕ್ಕೆ ಮಾಸ್ಕ್ ಮೇಲೆ ವೈಟ್ ಲೈನ್‌ಗಳನ್ನ ಹಾಕಿದ್ದಾರೆ.  ಹೇಗೆ ಶವಗಳು ರಹಸ್ಯ ಅಡಗಿದ್ಯೋ ಹಾಗೇ ಮಾಸ್ತ್ ಮ್ಯಾನ್ ಮಾಹಿತಿ ಕೂಡ ನಿಗೂಢವಾಗಿದೆ..

ಇನ್ನೂ ಈಗ ಶವ ಹೂತಿಟ್ಟ ವಿಚಾರಕ್ಕೆ ಬಂದ್ರೆ..  ಇನ್ನೂ ಇವನ್ ಹೇಳ್ದ್ ಅಂದ್ ಕೂಡ್ಲೇ ಇವನ್ ಕರ್ಕೋಂಡ್ ಬಂದ್ ಎಸ್‌ಐಟಿ ಉತ್ಖನ ಮಾಡ್ತಿಲ್ಲ..  ಎಸ್‌ಐಟಿ ಇವನನ್ನ 15 ಗಂಟೆಗಳ ವಿಚಾರಣೆ ನಡೆಸಿದೆ.. ಇದ್ದಕ್ಕೆ ಸಂಬಂಧ ಪಟ್ಟ ಕೆಲ ಮಾಹಿತಿಯನ್ನ ಕಲೆ ಹಾಕಿದ ನಂತ್ರ ಈ ಒಂದು ಉತ್ಖನದ ಕೆಲಸ ಶುರುವಾಗಿದೆ. ಸುಮಾರ 12 ಜನರ ತಂಡ ಶವ ಹೂತಿಟ್ಟ ಜಾಗವನ್ನ ಅಗೆಯೋ ಕೆಲಸ ಮಾಡ್ತು.. ಆದ್ರೆ ಒಂದನೇ ಜಾಗದಲ್ಲಿ ಏನೂ ಸಿಕ್ಕಿಲ್ಲ.. ಮೊದಲ ಜಾಗದಲ್ಲಿ ಈಗ ಯಾವುದೇ ಅಸ್ಥಿಪಂಜರ ಸಿಕ್ಕಿಲ್ಲ. ಅವನು ಹೇಳ್ದ ಅಂತ JCB  ಮೂಲಕ   ಮಾಡಲಾಗುತ್ತಿದೆ. ಇನ್ನೂ 2-3 ಜಾಗದಲ್ಲೂ ಶವ ಸಿಕ್ಕಿಲ್ಲ ಅಂತ ಉಳಿದ ಜಾಗವನ್ನ ಹಾಗೇ ಬಿಡ್ತಾರಾ ಅನ್ನೋ ಪ್ರಶ್ನೆ ಕೂಡ ಇಲ್ಲಿ ಎಳುತ್ತೆ. ಅನ್ನ ಆದ್ರೆ ಒಂದೆರೆಡು ಕಾಳು ನೋಡಿದ್ರೆ ಬೆಂದಿದ್ಯಾ ಬೆಂದಿಲ್ವಾ ಅನ್ನೋದು ಗೊತ್ತಾಗುತ್ತೆ.. ಬಟ್ ಇದು ಅನ್ನ ಅಲ್ಲ ಅಲ್ವಾ… 2-3 ಗುಂಡಿ ತೆೆಗೆದು ಬಾಡಿ ಸಿಕ್ಕಿಲ್ಲ ಅಂದ್ರೆ ಉಳಿದ ಜಾಗದಲ್ಲೂ ಇಲ್ಲ ಅನ್ನೋ ತಿರ್ಮಾನಕ್ಕೆ ಬರೋಕೆ ಆಗಲ್ಲ..   2-3 ಅಡಿ ವ್ಯಾತಾಸ ಆಗಿ ಅಸ್ಥಿಪಂಜರ ಸಿಗದೇ ಇರಬಹುದು.  ಅಲ್ಲದೇ 20 ವರ್ಷಗಳ ಹಿಂದೆ ಹೂಗಿದಿರೋದ್ರಿಂದ ಕಾಡು ಬೆಳದಿದೆ ಮರೆತು ಕೂಡ ಹೋಗಿರಬಹುದು.. ಹೀಗಾಗಿ 3-4 ಜಾಗದಲ್ಲಿ ಸಿಕ್ಕಿಲ್ಲ ಅಂತ ಇನ್ನೂಳಿದ ಪ್ಲೇಸ್‌ಗಳನ್ನ ಹಾಗೇ ಬಿಡೋಕೆ ಆಗಲ್ಲ.. ಯಾಕಂದ್ರೆ ಈತ ಹೇಳಿದ್ದು 200 ರಿಂದ 300 ಶವ ನಾನು ಹೂತು ಹಾಕಿದ್ದೇನೆ ಅನ್ನೋದ್ದನ್ನ.. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಎಲ್ಲಾ ಜಾಗದಲ್ಲೂ ಶವ ಶೋಧ ಮಾಡಲೇಬೇಕಾಗುತ್ತೆ.. ಆದ್ರೆ ಎಸ್‌ಐಟಿ 10 ಜಾಗ ಅಗೆದು ಏನೂ ಸಿಕ್ಕಿಲ್ಲ ಅಂದ್ರೆ ಯಾವ ನಿರ್ಧಾರಕ್ಕೆ ಬರುತ್ತೆ ಅನ್ನೋದು ಕೂಡ ಕುತೂಹಲ ಮೂಡಿಸಿದೆ. ಒಂದು ವೇಳೆ ಅವನು ತೋರಿಸಿದ ಎಲ್ಲಾ ಜಾಗ ಅಗೆದ ನಂತ್ರ ಶವ ಸಿಕ್ಕಿಲ್ಲ ಅಂದ್ರೆ ಮಾಸ್ಕ್ ಮ್ಯಾನ್ ಹೇಳಿದ್ದು ಸುಳ್ಳು ಅನ್ನೋದು ಪಕ್ಕಾ ಆಗುತ್ತೆ.. ಆಮೇಲೆ ಈತನ ಮೇಲೆ ವಿಚಾರಣೆ ನಡೆಯುತ್ತೆ.. ಹೀಗಾಗಿ ಮೊದಲು SIT ಅವನು ತೋರಿಸಿದ ಜಾಗವನ್ನ ಅಗೆಯೋ ಕೆಲಸ ಮಾಡಬೇಕಾಗುತ್ತೆ.

ಇನ್ನೂಂದು ವಿಷ್ಯ ಚರ್ಚೆಯಲ್ಲಿರೋದು ಅಂದ್ರೆ ನಾವೇ ಸುಮಾರು 20 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಅನಾಥ ಶವಗಳನ್ನ ಸಮಾಧಿ ಮಾಡಿದ್ದೇವೆ. ಅದೇ ಶವಗಳನ್ನ ಈಗ ತೋರಿಸಲಾಗ್ತಿದೆ ಅನ್ನೋ ಬಗ್ಗೆ ಚರ್ಚೆ ಆಗ್ತಿದೆ.. ಆ ಟೈಂನಲ್ಲಿ  ಸ್ಮಶಾನ ಇರಲಿಲ್ಲ ಹಾಗಾಗಿ, ಧರ್ಮಸ್ಥಳಕ್ಕೆ ಬಂದು ಮೃತಪಟ್ಟ ಅನಾಥ ಶವಗಳನ್ನ ಅರಣ್ಯ ಭಾಗದಲ್ಲಿ ಹೂತಿದ್ದೇವೆ ಅನ್ನೋದ್ದನ್ನ ಅಲ್ಲಿನ ಗ್ರಾಮ ಪಂಚಾಯ್ತಿ ಸದಸ್ಯರೇ ಹೇಳಿದ್ದಾರೆ.. ಆದ್ರೆ ಇವರು ಹೇಳಿದ್ದಂತೆ ಅನಾಥ ಶವಗಳು ಸಿಕ್ಕಾಗ ಅದ್ದಕ್ಕೆ ಕಾನೂನು ಪ್ರಕ್ರಿಯೆಗಳು ಸರಿಯಾಗಿ ಆಗಿದ್ಯಾ ಅನ್ನೋ ಪ್ರಶ್ನೆ ಎಳುತ್ತೆ.. ಯಾಕಂದ್ರೆ ಅನಾಥ ಶವ ಸಿಕ್ಕಾಗ ಮೊದಲು ಅವರ ಸಂಬಂಧಿಕರ ಸಂಪರ್ಕ ಮಾಡಬೇಕು ಅವರು ಸಿಕ್ಕಿದ್ರೆ ಅವರಿಗೆ ಬಾಡಿ ನೀಡಬೇಕು.. ಯಾರು ಇಲ್ಲ ಅಂದ್ರೆ ಪೊಲೀಸರ ಸಮ್ಮುಖದಲ್ಲೇ ಶವಸಂಸ್ಕಾರ ಮಾಡಲಾಗುತ್ತೆ.. ಹೀಗಾಗಿ ಅನಾಥ ಶವವಾಗಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲೆ ಇದ್ಯಾ? ಪೊಲೀಸ್ ರೆಕಾರ್ಡ್‌ನಲ್ಲಿ ಶವ ಸಂಸ್ಕಾರದ ಜಾಗದ ಹೆಸರು ಉಲ್ಲೇಖೆ ಆಗಿದ್ಯಾ ಅನ್ನೋ ನಿಟ್ಟಿನಲ್ಲೂ ನೋಡಬೇಕು ಆಗುತ್ತೆ.. ಇನ್ನೂ ವಿಷ್ಯ ಅಂದ್ರ ಅನಾಥ ಶವ ಸಿಕ್ತು ಅಂತ ಎಲೆಲ್ಲೋ ಹುಳುವುದ್ದಕ್ಕೆ ಆಗಲ್ಲ.. ಅದ್ದಕ್ಕೆ ಒಂದು ಸರ್ಕಾರಿ ಜಾಗ ಗುರುತಿಸಿ ಹುಳಬೇಕಾಗುತ್ತೆ.. ಹೀಗಾಗಿ ಅನಾಥ ಶವ ಹುಳುವಾಗ ಕಾನೂನು ಪಾಲನೆ ಆಗಿದ್ಯಾ ಅನ್ನೋದ್ದನ್ನ ನೋಡಬೇಕಾಗುತ್ತೆ.  ಒಂದು ವೇಳೆ ಈ ಪ್ರದೇಶದಲ್ಲಿ ಶವ ಹೂತಿದ್ದ ದಾಖಲೆಗಳು ಇಲ್ಲ ಅಂತ ಆದ್ರೆ ಅದು ಅಪರಿಚಿತ ಶವಗಳು.. ಕಾನೂನು ಉಲ್ಲಂಘನೆ ಮಾಡಿ ಸಮಾಧಿ ಮಾಡಿರೋ ಶವಗಳು ಅನ್ನಬಹುದು..

ಇನ್ನೂ ಸದ್ಯಕ್ಕೆ ಯಾವುದೇ ಶವ ಸಿಕ್ಕಿಲ್ಲ. ಮುಂದೆ ಮಾಸ್ಕ್ ಮ್ಯಾನ್ ಹೇಳಿದ ಜಾಗದಲ್ಲಿ ಶವ ಸಿಕ್ಕಿದ್ರೆ ಅದು ಬಗ್ಗೆ ತನಿಖೆ ಆಗುತ್ತೆ.. ಆ ವ್ಯಕ್ತಿ ಕೊಲೆ ಆಗಿದ್ದಾನಾ ಅನ್ನೋದು ಕೂಡ ತನಿಖೆ ಆಗುತ್ತೆ. ಮೊದಲ ಅಸ್ತಿಪಂಜರವನ್ನ ಮನುಷ್ಯ ರೂಪದಲ್ಲೇ ಜೋಡಿಸಿ ತನಿಖೆ ಮಾಡಲಾಗುತ್ತೆ. ಗನ್ ಶೂಟ್‌ನಿಂದ ಆಗಿದ್ಯಾ. ಕತ್ತರಿಸಿ ಕೊಲೆ ಮಾಡಲಾಗಿದ್ಯಾ ಅನ್ನೋದು ಅಸ್ಥಿ ಪಂಜರದಿಂದಲೇ ಮಾಹಿತಿ ಸಿಗೋ ಚಾನ್ಸ್ ಇದೆ. ಅಸ್ಥಿ ಪಂಜರದ ಮೇಲೆ ಆ ಗುರುತು ಪತ್ತೆಯಾದ್ರೂ ಆಗಬಹುದು..  ಆದ್ರೆ  ಅತ್ಯಾಚಾರ ಮಾಡಿದ್ರೆ, ಉಸಿರುಗಟ್ಟಿಸಿ ಕೊಲೆ ಮಾಡಿದ್ರೆ ಅದ್ದಕ್ಕೆ ಬೇಕಾದ ಕುರೂಹುಗಳು ಸಿಗೋದು ಕಷ್ಟ . ಆದ್ರೆ ಆ ಅಸ್ತಿಪಂಜರ ಮಹಿಳೆಯದ್ದ ಪುರುಷನದ್ದ ಅನ್ನೋದು ಗೊತ್ತಾಗುತ್ತೆ.. ಆದ್ರೆ ಅತ್ಯಾಚಾರ ಆಗಿದೆ ಅನ್ನೋ ಬಗ್ಗೆ ಕುರೂಹುಗಳು ಸಿಗೋದು ತುಂಬಾ ಕಷ್ಟ.. ಯಾಕಂದ್ರೆ 20 ವರ್ಷದ ಹಳೆಯ ಅಸ್ತಿ ಪಂಜರ ಆಗಿರೋದ್ರಿಂದ ಅದ್ದಕ್ಕೆ ಸಂಬಂಧ ಪಟ್ಟ ಕುರೂಹುಗಳು ಉಳಿದಿರೋದಿಲ್ಲ.. ಆದ್ರೆ ಆ ಅಸ್ತಿ ಪಂಜರಕ್ಕೆ  ಎಷ್ಟು ವಯಸ್ಸಾಗಿದೆ ಅನ್ನೋದು ಗೊತ್ತಾಗುತ್ತೆ..  ಆದ್ರೆ ಯಾವ ಟೈಂನಲ್ಲಿ ಇದ್ದನ್ನ ಹೂತು ಹಾಕಿದ್ದಾರೆ ಅನ್ನೋದು ಗೊತ್ತಾಗಲ್ಲ.. ಅಂದಾಜಿನ ಮೇಲೆ ಒಂದಷ್ಟು ವರ್ಷ ಅಂತ ಹೇಳಬಹುದು.. ಆದ್ರೆ ಹೆಣದ ಜೊತೆ ಆ ವ್ಯಕ್ತಿಯ ಚೈನ್, ವಾಚ್ ಅಥವಾ ಯಾವುದಾದ್ರೂ  ವಸ್ತು ಸಿಕ್ಕಿದ್ರೆ ಆ ಎವಿಡೆನ್ಸ್ ಹಿಡ್ಕೊಂಡು ತನಿಖೆ ಮಾಡಬಹುದು.. ಹಾಗಂತ ಅಸ್ತಿ ಪಂಜರ ಸಿಕ್ಕಿದ ತಕ್ಷಣ ಇಲ್ಲಿ ಕೊಲೆ ಆಗಿದೆ.. ಅತ್ಯಾಚಾರ ಆಗಿದೆ ಅನ್ನೋದ್ದಕ್ಕೆ ಹೇಳುವುದ್ದಕ್ಕೆ ಬರಲ್ಲ.. ಅದ್ರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕಾತ್ತೆ..  ಅದ್ದಕ್ಕೆ ಸಂಬಂಧಪಟ್ಟವರು ಕಂಪ್ಲೆಂಟ್ ಕೊಟ್ರೆ, ಡಿಎನ್‌ಎ ಮ್ಯಾಚಿಂಗ್ ಮಾಡಬೇಕಾಗುತ್ತೆ.. ಹೀಗಾಗಿ ಸಾಕಷ್ಟು ರೀತಿಯಲ್ಲಿ ತನಿಖೆ ಮಾಡಬೇಕಾಗುತ್ತೆ..

 

Kishor KV