ಧರ್ಮಸ್ಥಳ ಕೇಸ್‌ಗೆ ಬಿಗ್ ಟ್ವಿಸ್ಟ್! – ಶಾಕಿಂಗ್ ಹೇಳಿಕೆ ಕೊಟ್ಟ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ಹೊಸ ಹೊಸ ಟ್ವಿಸ್ಟ್ ಎದುರಾಗುತ್ತಿದೆ. ಇತ್ತೀಚೆಗಷ್ಟೇ ಶವ ಹೂತಿಟ್ಟ ಪ್ರಕರಣದ ತನಿಖೆ ಮುಕ್ತಾಯ ಆಗಿದೆ. ಸರ್ಕಾರಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ ಎಂದು ವರದಿಯಾಗಿತ್ತು. ಆದ್ರೀಗ ಎಸ್‌ಐಟಿ ಮುಖ್ಯಸ್ಥರೇ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಇಂಡಿಗೋ ವಿಮಾನ ಹಾರಾಟ ರದ್ದು ಬೆನ್ನಲ್ಲೇ ಪ್ರಯಾಣಿಕರ ಆಕ್ರೋಶ – ಪೈಲಟ್ ರಜೆ ನಿಯಮಗಳನ್ನು ಸಡಿಲಿಸಿದ DGCA
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟಿದ್ದೇನೆ ಎಂದು ಹೇಳಿಕೊಂಡು ಮಾಸ್ಕ್ ಮ್ಯಾನ್ ಚಿನ್ನಯ್ಯ ಎಂಟ್ರಿಕೊಟ್ಟಿದ್ದ. ಈ ಬೆನ್ನಲ್ಲೇ ಸರ್ಕಾರ ಎಸ್‌ಐಟಿ ತಂಡ ರಚನೆ ಮಾಡಿ, ತನಿಖೆ ನಡೆಸಲು ಆದೇಶಿಸಿತ್ತು. ಮಾಸ್ಕ್ ಮ್ಯಾನ್ ಹೇಳಿದ ಸ್ಥಳದಲ್ಲಿ ಉತ್ಖನನ ಕೂಡ ಮಾಡಲಾಗಿತ್ತು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನ ವಿಚಾರಣೆ ನಡೆಸಲಾಗಿದೆ. ಬಳಿಕ ದೂರು ಕೊಟ್ಟ ಚಿನ್ನಯ್ಯನನ್ನು ಬಂಧಿಸಿ ವಿಚಾರಣೆ ನಡೆಸಿದ್ರು. ಅಲ್ಲದೇ ಧರ್ಮಸ್ಥಳ ಕೇಸ್ ತನಿಖೆ ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲೇ ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದ್ರೆ ಇದೀಗ ಎಸ್ಐಟಿ ಮುಖ್ಯಸ್ಥರೇ ಪ್ರಣಬ್ ಮೊಹಂತಿ ಬಿಗ್ ಟ್ವಿಸ್ಟ್ ಕೊಟ್ಟಿದ್ದು, ತನಿಖೆ ಇನ್ನು ಮುಗಿದಿಲ್ಲ ಎಂದಿದ್ದಾರೆ.
ಈ ಬಗ್ಗೆ ಬೆಂಗಳೂರಲ್ಲಿ ಮಾತಾಡಿದ ಪ್ರಣಬ್ ಮೊಹಂತಿ, ಧರ್ಮಸ್ಥಳ ಕೇಸ್ ಇನ್ನೂ ತನಿಖೆ ಹಂತದಲ್ಲಿದೆ. ಚಾರ್ಜ್ ಶೀಟ್ ಅಲ್ಲ ಅದು, ರಿಪೋರ್ಟ್ ಅಂತಾ ಡಿಜಿಯವರೇ ಹೇಳ್ತಾ ಇದ್ದಾರೆ. ‘ಅರೆಸ್ಟ್ ಮಾಡೋದೆ ತನಿಖೆಯಲ್ಲ’ ಚಾರ್ಜ್ ಶೀಟ್ ಸಿದ್ಧಗೊಂಡಿದೆ ಅಂತ ಯಾರು ಹೇಳಿದ್ದು, ಪ್ರಕರಣ ಇನ್ನೂ ಇನ್ನೂ ತನಿಖೆ ಹಂತದಲ್ಲಿದೆ. ತನಿಖೆ ಪೂರ್ಣಗೊಂಡಿಲ್ಲ. ಅರೆಸ್ಟ್ ಮಾಡೋದೇ ತನಿಖೆಯಲ್ಲ ಎಂದು ಪ್ರಣಬ್ ಮೊಹಂತಿ ಹೇಳಿದ್ದಾರೆ.

ನೋಡಿರಿ

