RCB ಪ್ಲೇಯರ್‌ ಗೆ ನಟಿ ಕ್ಲೀನ್ ಬೌಲ್ಡ್? – ದೇವದತ್ ಜೆರ್ಸಿ ತೊಟ್ಟ ದೊಡ್ಮನೆ ಹುಡ್ಗಿ!

RCB ಪ್ಲೇಯರ್‌ ಗೆ ನಟಿ ಕ್ಲೀನ್ ಬೌಲ್ಡ್? – ದೇವದತ್ ಜೆರ್ಸಿ ತೊಟ್ಟ ದೊಡ್ಮನೆ ಹುಡ್ಗಿ!

ಐಪಿಎಲ್ 2025ರ ಆವೃತ್ತಿಯಲ್ಲಿ ಆರ್‌ಸಿಬಿ ಸಖತ್ ಫಾರ್ಮ್‌ನಲ್ಲಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲೂ ಬೆಂಗಳೂರು ಟೀಮ್‌ ಸ್ಟ್ರಾಂಗ್‌ ಎನಿಸಿಕೊಂಡಿದೆ. ಈ ಸೀಸನ್‌ ನಲ್ಲಿ ಆರ್‌ಸಿಬಿ ಯಶಸ್ಸಿನ ಹಿಂದೆ ನಮ್ಮ ಹೆಮ್ಮಯ ಕನ್ನಡಿ ದೇವದತ್​ ಪಡಿಕ್ಕಲ್ ಕೊಡುಗೆ ಕೂಡ ಇದೆ. ಆನ್​ಫೀಲ್ಡ್​​ನಲ್ಲಿ ಘರ್ಜಿಸ್ತಿರೋ ಪಡಿಕ್ಕಲ್​ ಆಟಕ್ಕೆ ಎದುರಾಳಿಗಳು ಥಂಡಾ ಹೊಡೆದಿದ್ದಾರೆ. ಕ್ಲಾಸ್​ ಆಟಕ್ಕೂ ಸೈ.. ಮಾಸ್​ ಆಟಕ್ಕೂ ಜೈ ಎಂಬಂತಿದೆ ಕನ್ನಡಿಗನ ಆರ್ಭಟ. ಆದ್ರೀಗ ಪಡಿಕ್ಕಲ್‌ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಇದೀಗ ಸ್ಯಾಂಡಲ್‌ ವುಡ್‌ ನಟಿಯೊಂದಿಗೆ ಪಡಿಕ್ಕಲ್‌ ಹೆಸ್ರು ತಳುಕುಹಾಕಿಕೊಂಡಿದೆ.

ಇದನ್ನೂ ಓದಿ: RCB Vs CSK ಬಿಗ್ ವಾರ್ ಕಳೆದ ವರ್ಷದ ರಿಸಲ್ಟ್ ರಿಪೀಟ್?

IPL ಸೀಸನ್​ 18ರಲ್ಲಿ ಆರ್​​ಸಿಬಿಯ ಅಬ್ಬರದ ಜೊತೆ ಜೊತೆಗೆ ಕನ್ನಡಿಗನ ಪರಾಕ್ರಮ ಜೋರಾಗಿದೆ. ಈ ಸೀಸನ್​​ನಲ್ಲಿ ತವರಿನ ತಂಡಕ್ಕೆ ಕಮ್​ಬ್ಯಾಕ್​ ಮಾಡಿರೋ ದೇವದತ್ತ್​​ ಪಡಿಕ್ಕಲ್ ಕೂಲ್‌ ಆಗಿ ಆಟ ಆಡ್ತಿದ್ದಾರೆ. ಸ್ಪೋಟಕ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿಗೆ ನೆರವಾಗ್ತಿದ್ದಾರೆ. ಇದೀಗ ಪಡಿಕ್ಕಲ್‌ ಕ್ರಿಕೆಟ್‌ ಜೊತೆಗೆ ಬೇರೆ ಕಾರಣಕ್ಕೂ ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್‌ ವುಡ್‌ ನಟಿಗೆ ಪಡಿಕ್ಕಲ್‌ ಮೇಲೆ ಪ್ರೀತಿ ಚಿಗುರಿತಾ? ಅಂತಾ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಆ ನಟಿ ಬೇರೆ ಯಾರು ಅಲ್ಲ.. ಸ್ಯಾಂಡಲ್‌ವುಡ್ ನಟಿ ಕಮ್‌ ಮಾಡೆಲ್ ಧನ್ಯಾ ರಾಮ್‌ಕುಮಾರ್..

ನಿನ್ನ ಸನಿಹಕೆ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ದೊಡ್ಮನೆ ಹುಡುಗಿ ಧನ್ಯ ರಾಮ್‌ಕುಮಾರ್, ಚೊಚ್ಚಲ ಸಿನಿಮಾದಲ್ಲಿ ಫಿಲ್ಮ್‌ ಫೇರ್ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಇದಷ್ಟೇ ಅಲ್ಲದೇ ಕಣ್ಣಾಮುಚ್ಚಾಲೆ ತೀರ್ಪು, ಪುಡಿ ಹಾಗೂ ಕಾಲಪತ್ತರ್ ಸಿನಿಮಾಗಳಲ್ಲೂ ಧನ್ಯ ರಾಮ್‌ಕುಮಾರ್ ನಟಿಸಿದ್ದಾರೆ. ಇದೀಗ ಪಡಿಕ್ಕಲ್‌ ಜೊತೆ ಧನ್ಯ ಹೆಸ್ರು ತಳುಕುಹಾಕಿಕೊಂಡಿದೆ. ಇದಕ್ಕೆ ಕಾರಣ ಧನ್ಯತಾ ಧರಿಸಿರೋ ಜೆರ್ಸಿ.. ಹೌದು ನಟಿ   ಧನ್ಯಾಗೆ ಕ್ರಿಕೆಟ್‌ ಅಂದ್ರೆ ಇಷ್ಟ. ಇತ್ತೀಚೆಗೆ ಧನ್ಯ  ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಪಂದ್ಯ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ರು.. ಈ ವೇಳೆ ಧನ್ಯ ಆರ್‌ಸಿಬಿ ಜರ್ಸಿ ತೊಟ್ಟು ಗೆಳೆಯರ ಜೊತೆ ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಆರ್‌ಸಿಬಿ ಫ್ಯಾನ್ಸ್‌ ಅಂದ್ಮೇಲೆ ಜರ್ಸಿ ಹಾಕೋದು ಕಾಮನ್‌ ಅಲ್ವಾ? ಅದ್ರೆಲ್ಲೇನು ವಿಶೇಷ ಇದೆ ಅಂತಾ ನೀವು ಕೇಳ್ಬೋದು.. ಅಲ್ಲೇ ಇರೋದು ಮ್ಯಾಟರ್‌.. ಧನ್ಯ ಆರ್‌ಸಿಬಿ ಜೆರ್ಸಿ ತೊಟ್ಟಿರೋದು ಪ್ರಾಬ್ಲಂ ಅಲ್ಲ.. ಆ ಜೆರ್ಸಿಯಲ್ಲಿರೋ ನಂಬರ್‌.. ಹೌದು, ನಟಿ ಧನ್ಯ ತೊಟ್ಟ ಜೆರ್ಸಿಯಲ್ಲಿರೋ ನಂಬರ್‌ 37.. ಇದು ಕನ್ನಡಿಗ ದೇವದತ್‌ ಪಡಿಕ್ಕಲ್‌ ಜರ್ಸಿ ನಂಬರ್‌.. ಇದೀಗ ಧನ್ಯತಾ ಪಡಿಕ್ಕಲ್‌ ಜೆರ್ಸಿ ತೊಟ್ಟಿರುವುದನ್ನು ನೋಡಿ ಇಲ್ಲಿ ಏನೋ ನಡೆಯುತ್ತಿದೆ ಅಂತಾ ಫ್ಯಾನ್ಸ್‌ ಚರ್ಚೆ ನಡೆಸ್ತಿದ್ದಾರೆ.. ಅಷ್ಟೇ ಅಲ್ಲ  ಟ್ರೋಲ್‌ ಪೇಜ್‌ಗಳಿಗೂ ಆಹಾರ ಆಗಿದೆ. ಇದೀಗ ದೇವದತ್‌ ಪಡಿಕ್ಕಲ್‌ ಹಾಗೂ ಧನ್ಯತಾ ನಡುವೆ ಏನೋ ಇದೆ ಎಂಬ ಸುದ್ದಿ ಜೋರಾಗಿ ಹಬ್ಬಿದೆ. ಆದರೆ ದೇವದತ್ ಪಡಿಕ್ಕಲ್, ಇನ್‌ಸ್ಟಾಗ್ರಾಂನಲ್ಲಿ ಧನ್ಯ ರಾಮ್‌ಕುಮಾರ್ ಅವರನ್ನು ಫಾಲೋ ಮಾಡುತ್ತಿಲ್ಲ. ಇವೆಲ್ಲಾ ಗಾಸಿಪ್‌ಗಷ್ಟೇ ಸೀಮಿತ.. ಇವರಿಬ್ರ ಮಧ್ಯೆ ಏನು ಇಲ್ಲ.. ಧನ್ಯ ಜಸ್ಟ್‌ ಫ್ಯಾನ್‌ ಅಷ್ಟೇ ಅಂತಾ ಹೇಳ್ತಿದ್ದಾರೆ. ಜೆರ್ಸಿಯಿಂದ ಶುರುವಾದ ಗಾಸಿಪ್ ಮುಂದೆ ಎಲ್ಲಿಗೆ ಹೋಗಿ ತಲುಪುತ್ತೋ ಕಾದುನೋಡಬೇಕಿದೆ. ಮುಂದಿನ ದಿನಗಳಲ್ಲಿ ಹರಿದಾಟ್ತಿರೋ ಗಾಳಿ ಸುದ್ದಿಗೆ ಬ್ರೇಕ್‌ ಹಾಕ್ತಾರಾ ಅಂತಾ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *