ಫಿನಾಲೆಯಿಂದ ಮೊದಲು ಹೊರಬಂದ ಧನುಶ್ – ಬಿಕ್ಕಿ ಬಿಕ್ಕಿ ಅತ್ತ ತಾಯಿ ಮತ್ತು ಪತ್ನಿ

ಫಿನಾಲೆಯಿಂದ ಮೊದಲು ಹೊರಬಂದ ಧನುಶ್ – ಬಿಕ್ಕಿ ಬಿಕ್ಕಿ ಅತ್ತ ತಾಯಿ ಮತ್ತು ಪತ್ನಿ

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯಲ್ಲಿ ಮೊದಲು ಧನುಷ್ ಮನೆಯಿಂದ ಹೊರಬಂದಿದ್ದಾರೆ. ಟಾಪ್ 6ರಲ್ಲಿ ಧನುಶ್ ಮೊದಲ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿದ್ದಾರೆ.

ಬಿಗ್‌ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯಲ್ಲಿ ಧನುಷ್ ಮೊದಲಿಗೆ ಹೊರಬಂದಿದ್ದಾರೆ.  ಕಿಚ್ಚ ಸುದೀಪ್ ಅವರು ಮೊದಲು ಎಲಿಮಿನೇಟ್ ಆದ ವ್ಯಕ್ತಿ ಹೆಸರನ್ನು ಘೋಷಣೆ ಮಾಡಿದರು. ಸೀಸನ್ 12ರ ಟಾಪ್ 6ರಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕಾವ್ಯಾ ಶೈವ, ರಘು ಹಾಗೂ ಧನುಶ್ ಇದ್ದರು. ಈ ಪೈಕಿ ಅತಿ ಕಡಿಮೆ ಮತ ಬಿದ್ದಿದ್ದು ಧನಶ್​ಗೆ. ಅವರು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

ಧನುಶ್ ಎಲಿಮಿನೇಟ್ ಆಗುತ್ತಿದ್ದಂತೆ ಮನೆಯವರು ಕಣ್ಣೀರು ಹಾಕಿದರು. ಅದರಲ್ಲೂ ಧನುಶ್ ತಾಯಿ ನಾನು ಈ ರೀತಿ ಊಹಿಸಿರಲಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತರು. ಜೊತೆಗೆ ಧನುಶ್ ಪತ್ನಿ ಕೂಡಾ ಕಣ್ಣೀರು ಹಾಕಿದರು. ಮನೆಯಿಂದ ಹೊರಬಂದ ಧನುಶ್ ತಾಯಿಯನ್ನು ಸಮಾಧಾನ ಮಾಡಿದರು. ಅಳಬೇಡ ಅಮ್ಮ ಎಂದು ಪ್ರೀತಿಯಿಂದ ಸಂತೈಸಿದರು. ಪತ್ನಿಯನ್ನು ತಬ್ಬಿಕೊಂಡು ಧನುಶ್ ಸಮಾಧಾನ ಮಾಡಿದರು.

ಧನುಶ್ ಅವರು ‘ಗೀತಾ’ ಧಾರಾವಾಹಿ ಮೂಲಕ ಫೇಮಸ್ ಆದವರು. ಅವರಿಗೆ ಕಿರುತೆರೆ ಲೋಕದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಉತ್ತಮವಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಉತ್ತಮವಾಗಿ ಆಡುತ್ತಿದ್ದರು. ಟಾಸ್ಕ್ ವಿನ್ ಆಗಿ ಟಾಪ್ 6ಗೆ ಅವರು ಅರ್ಹತೆ ಪಡೆದುಕೊಂಡಿದ್ದರು. ಧನುಶ್ ಅವರು ಟಾಸ್ಕ್ ಉತ್ತಮವಾಗಿ ಆಡಿದರೂ ಉಳಿದ ಸಮಯದಲ್ಲಿ ಸೈಲೆಂಟ್ ಆಗಿಯೇ ಇರುತ್ತಿದ್ದರು. ಯಾರ ಬಗ್ಗೆಯೂ ಅವರು ಮಾತನಾಡುತ್ತಿರಲಿಲ್ಲ. ಯಾವುದೇ ವಿವಾದ ಬಂದರೂ ದೂರ ಸರಿಯುತ್ತಿದ್ದರು. ಅವರಿಗೆ 1 ಕೋಟಿ 27 ಲಕ್ಷ ವೋಟ್ ಬಿದ್ದಿದೆ.

Sulekha