ಪೋಷಕರಿಗೆ 150 ಕೋಟಿ ರೂಪಾಯಿ ಮನೆ ಉಡುಗೊರೆ ನೀಡಿದ ನಟ ಧನುಷ್

ಪೋಷಕರಿಗೆ 150 ಕೋಟಿ ರೂಪಾಯಿ ಮನೆ ಉಡುಗೊರೆ ನೀಡಿದ ನಟ ಧನುಷ್

ತಮಿಳು ನಟ ಧನುಷ್ ತಮ್ಮ ಪೋಷಕರಿಗೆ 150 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇತ್ತೀಚೆಗೆ ಈ ಮನೆಯ ಗೃಹಪ್ರವೇಶ ಕಾರ್ಯಗಳು ನಡೆದಿವೆ. ಈ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಚೆನ್ನೈನ ಪೋಯಿಸ್ ಗಾರ್ಡನ್​​ನಲ್ಲಿರುವ ಈ ಮನೆ ನಟ ಧನುಷ್ ಅವರ ಕನಸಿನ ಮನೆಯೂ ಹೌದು.

ಇದನ್ನೂ ಓದಿ:  ಕನ್ನಡದ ಬಾಂಡ್ ಸಿನಿಮಾಗಳ ಸರದಾರ ಇನ್ನಿಲ್ಲ – ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ವಿಧಿವಶ..!

ಗೃಹಪ್ರವೇಶದ ಸಂದರ್ಭದಲ್ಲಿ ಧನುಷ್ ಅವರು ನೀಲಿ ಬಣ್ಣದ ಕುರ್ತಾ ಹಾಗೂ ಬಿಳಿ ಬಣ್ಣದ ಪೈಜಾಮ ಧರಿಸಿದ್ದರು. ಅವರ ತಂದೆ ನೀಲಿ ಬಣ್ಣದ ಶರ್ಟ್ ಹಾಗೂ ಕ್ರೀಂ ಬಣ್ಣದ ಲುಂಗಿ ಉಟ್ಟಿದ್ದರು. ಧನುಷ್ ತಾಯಿ ಅವರು ನೀಲಿ ಹಾಗೂ ಪಿಂಕ್ ಕಾಂಬಿನೇಷನ್​ನ ಸೀರೆ ಉಟ್ಟಿದ್ದರು. ನಿರ್ದೇಶಕ ಸುಬ್ರಮಣಿಯಮ್ ಶಿವ ಅವರು ಮನೆಯ ಫೋಟೋನ ಪೋಸ್ಟ್ ಮಾಡಿ, ‘ಈ ಮನೆ ದೇವಾಲಯದಂತೆ ಭಾವಾಗುತ್ತಿದೆ. ತಂದೆ-ತಾಯಿ ಬದುಕಿರುವಾಗಲೇ ಸ್ವರ್ಗದಲ್ಲಿ ಉಳಿಸುವವರನ್ನು ನೋಡಿದರೆ ಅಂಥವರು ದೇವರಂತೆ ಕಾಣುತ್ತಾರೆ. ಅವರ ಮಕ್ಕಳಿಗೆ ಹಾಗೂ ಇತರರಿಗೆ ಮಾದರಿ ಆಗಿ ಕಾಣುತ್ತಾರೆ. ಹೆಚ್ಚು ಕಾಲ ಬಾಳಿ’ ಎಂದು ಪೋಸ್ಟ್ ಮಾಡಿದ್ದಾರೆ. ಈ ಮನೆ ನಾಲ್ಕು ಅಂತಸ್ತನ್ನು ಹೊಂದಿದೆ. 2021ರಲ್ಲಿ ಈ ಮನೆಯ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಈ ಮನೆ ನಿರ್ಮಾಣದ ಸಂದರ್ಭದಲ್ಲಿ ನಡೆದ ಪೂಜೆಯಲ್ಲಿ ಧನುಷ್ ಮಾಜಿ ಪತ್ನಿ ಐಶ್ವರ್ಯಾ, ರಜನಿಕಾಂತ್ ಕೂಡ ಇದ್ದರು. ಈಗ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಮನೆ ಗೃಹಪ್ರವೇಶಕ್ಕೆ ಅವರಿಲ್ಲ ಎನ್ನುವುದು ಬೇಸರದ ಸಂಗತಿ. ಈ ಬಗ್ಗೆಯೂ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

suddiyaana