ಸೀರಿಯಲ್ ನಲ್ಲಷ್ಟೇ ಗೀತಾ-ವಿಜಯ್ ಜೋಡಿ – ರಿಯಲ್ ಲೈಫ್ ನಲ್ಲಿ ಸಂಜನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಧನುಷ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಗೀತಾ ಹಾಗೂ ವಿಜಯ್ ಜೋಡಿ ಮೋಡಿ ಮಾಡುತ್ತಿದೆ. ಇದೀಗ ಕಥೆ ಬೇರೆಯದ್ದೇ ತಿರುವು ಪಡೆದಿದ್ದು ರೋಚಕತೆಯತ್ತ ಸಾಗುತ್ತಿದೆ. ಇದೀಗ ಸೀರಿಯಲ್ ಹೀರೋ ವಿಜಯ್ ಅಲಿಯಾನ್ ಧನುಷ್ ರಿಯಲ್ ಲೈಫ್ ನಲ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಕಿಚ್ಚನ ಬಿಗ್ ಬಾಸ್ ಫಿನಾಲೆ ಸಂದೇಶಕ್ಕೆ ಕುಣಿದು ಕುಪ್ಪಳಿಸಿದ ಕಾರ್ತಿಕ್ – ಸುದೀಪ್ ಮೆಸೇಜ್ ನೋಡಿ ಮನೆ ಮಂದಿ ಥ್ರಿಲ್
ಗೀತಾ ಧಾರಾವಾಹಿ ಖ್ಯಾತಿಯ ಗೀತಾ ಪಾತ್ರಧಾರಿ ಭವ್ಯ ಗೌಡ ಹಾಗೂ ವಿಜಯ್ ಖ್ಯಾತಿಯ ಧನುಷ್ ಜೋಡಿ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇಬ್ಬರ ಜೋಡಿ ಚೆನ್ನಾಗಿದೆ ಮದುವೆ ಆಗಬಹುದು ಎಂದೆಲ್ಲಾ ಜನ ಮಾತನಾಡಿಕೊಳ್ಳುತ್ತಿದ್ದರು. ಯಾಕಂದ್ರೆ ಇಬ್ಬರೂ ಸರಣಿ ಫೋಟೋಗಳು, ರೀಲ್ಸ್‌ಗಳಲ್ಲಿ ಮಿಂಚುತ್ತಿರುತ್ತಾರೆ. ಇದೆಲ್ಲವನ್ನು ನೋಡಿದ ಸೋಷಿಯಲ್ ಮೀಡಿಯಾ ಬಳಕೆದಾರರು, ನೀವಿಬ್ಬರೂ ನಿಜವಾಗಿಯೂ ಪ್ರೇಮಿಗಳಾ? ಎಂದು ಪ್ರಶ್ನಿಸಿದ್ದಿದೆ. ಹೀಗಿರುವಾಗಲೇ ಅಚ್ಚರಿಯ ವಿಚಾರವೊಂದು ಇದೀಗ ಹೊರಬಿದ್ದಿದೆ. ಸದ್ದಿಲ್ಲದೆ, ಧನುಷ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಂಜನಾ ಎಂಬುವವರ ಜತೆಗೆ ಧನುಷ್ ಗೌಡ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ. ಗೀತಾ ಧಾರಾವಾಹಿ ಮೂಲಕ ಸತತ 4 ವರ್ಷಗಳಿಂದ ಮನರಂಜನೆ ನೀಡ್ತಿರೋ ನಟ ಧನುಷ್ ಮದುವೆ ಆಗಲು ಸಜ್ಜಾಗಿದ್ದಾರೆ. ಸಹ ನಟಿ ಭವ್ಯಾ ಹಾಗೂ ಧನುಷ್ ಬಗ್ಗೆ ಗುಸುಗುಸು ಕೇಳಿ ಬಂದಿತ್ತು. ಆದರೆ ಅದೆಲ್ಲದಕ್ಕೂ ಈಗ ಬ್ರೇಕ್ ಬಿದ್ದಿದೆ.