ದೊಡ್ಮನೆಗೆ ಬಂದ ದೊಡ್ಡ ಕುಟುಂಬ – ಐಶ್ವರ್ಯ ಹೆಸರು ಹೇಳಿ ಧನರಾಜ್ ಕೆನ್ನೆಗೆ ಹೊಡೆದ ಪತ್ನಿ!
ಬಿಗ್ ಬಾಸ್ ಮನೆ ಬರೀ ಬರೀ ಕಿತ್ತಾಟ, ಗಲಾಟೆಯಿಂದ ತುಂಬಿರುತ್ತಿತ್ತು. ಆದ್ರೆ ಕಳೆದ ಎರಡು ದಿನಗಳಿಂದ ದೊಡ್ಮನೆ ಭಾವನಾತ್ಮಕ ಘಳಿಗೆಗಳಿಗೆ ಸಾಕ್ಷಿ ಆಗ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಎಂಟ್ರಿ ಆಗ್ತಿದ್ದು, ವೀಕ್ಷಕರಿಗೆ ಸ್ಪೆಷಲ್ ಮನರಂಜನೆಯ ಬೂಸ್ಟ್ ಸಿಗ್ತಿದೆ. ಜೊತೆಗೆ ಸ್ಪರ್ಧಿಗಳಿಗೂ ಎನರ್ಜಿ ಸಿಗ್ತಿದೆ.
ಇದನ್ನೂ ಓದಿ: 2025ರಲ್ಲೂ ಮುದುಡುತ್ತಾ ಕಮಲ? – ಕೇಜ್ರಿ ತಂತ್ರಕ್ಕೆ ಮೋದಿ ಉತ್ತರವೇನು?
ಇವತ್ತಿನ ಸಂಚಿಕೆಯಲ್ಲಿ ಧನರಾಜ್ ಆಚಾರ್ಯ ಅವರ ಕೂಡು ಕುಟುಂಬ ಬಿಗ್ಬಾಸ್ ಮನೆಗೆ ಎಂಟ್ರಿ ನೀಡಿದೆ. ಇಡೀ ಕುಟುಂಬವನ್ನು ಕಂಡ ಧನರಾಜ್ ಫುಲ್ ಖುಷ್ ಆಗಿದ್ದಾರೆ. ಮನೆಗೆ ಎಂಟ್ರಿ ಆಗ್ತಿದ್ದಂತೆಯೇ ಕುಟುಂಬದ ಸದಸ್ಯರೆಲ್ಲರೂ ಹುಲಿ ಕುಣಿತದ ಸ್ಟೆಪ್ಸ್ ಹಾಕಿದ್ದಾರೆ.
ವಿಶೇಷ ಅಂದರೆ ಅವರ ಮುದ್ದಿನ ಮಗಳು ಕೂಡ ಬಿಗ್ಬಾಸ್ ಮನೆಗೆ ಬಂದಿದ್ದಾಳೆ. ಮೊದಲಿಗೆ ತೊಟ್ಟಿಲಲ್ಲಿ ಹಾಯಾಗಿ ಮಲಗಿರುವ ಮಗುವನ್ನು ಸ್ಕ್ರೀನ್ ಮೇಲೆ ತೋರಿಸಲಾಗಿತ್ತು. ಇದನ್ನು ನೋಡಿದ ಧನು, ಪ್ಲೀಸ್ ಮಗುವನ್ನು ಎತ್ತಿಕೊಳ್ಳಲು ಬಿಡಿ ಎಂದು ಬಿಗ್ಬಾಸ್ಗೆ ಮನವಿ ಮಾಡಿಕೊಂಡಿದ್ದಾರೆ. ಧನು ಭಾವುಕರಾಗಿದ್ದನ್ನು ನೋಡಿದ ಬಿಗ್ಬಾಸ್, ಕೊನೆಗೂ ಮಗುವನ್ನು ಎತ್ತಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಓಡಿ ಹೋಗಿ ಮಗುವನ್ನು ಎತ್ತಿಕೊಂಡ ಧನು, ಭಾವುಕರಾಗಿ ಎತ್ತಿ ಮುದ್ದಾಡಿದ್ದಾರೆ. ಮಗುವಿನ ಪಕ್ಕದಲ್ಲಿ ಮಲಗಿ ಕೆಲ ಸಮಯ ಕಳೆದಿದ್ದಾರೆ.
ಇನ್ನು, ಪತ್ನಿ ಪ್ರಜ್ಞಾ ಧನುಗೆ ಮುದ್ದಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶು ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶುಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎಂದು ಬಾರಿಸಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ. ಇವತ್ತು ರಾತ್ರಿ ಈ ಎಪಿಸೋಡ್ ಪ್ರಸಾರವಾಗಲಿದೆ.