ಹರಕೆಯ ಕುರಿ ಧನರಾಜ್.. ಬಿಗ್‌ಬಾಸ್ ಮನೆಯಲ್ಲಿ ಮ್ಯಾಚ್ ಫಿಕ್ಸಿಂಗ್! – ಕಿಚ್ಚ ಸುದೀಪ್ ವಾರ್ನಿಂಗ್ ಲೆಕ್ಕಕ್ಕೇ ಇಲ್ಲ..!
ಮೂರೇ ಮೂರು ವಾರ.. ಬಿಗ್‌ಬಾಸ್ ರಿಯಾಲಿಟಿ ಶೋ ಕ್ಲೈಮ್ಯಾಕ್ಸ್‌ಗೆ ಬಾಕಿ ಇರೋದು. ಇದೇ ಹಂತದಲ್ಲೇ ತಾನೇ ಗೊತ್ತಾಗೋದು. ಯಾರು ಸ್ನೇಹಿತ, ಯಾರು ನಂಬಿಕೆ ದ್ರೋಹಿ ಅನ್ನೋದು. ಕೊನೆಗೂ ನಿನಗೆ ನಾನು ನನಗೆ ನೀನು ಅಂದವರೆಲ್ಲಾ ಬಿಗ್‌ಬಾಸ್‌ಗೆ ನಾನೇ ಬಾಸ್ ಅನ್ನೋ ಇಂಡಿವಿಜ್ಯುವಲ್ ಆಟಕ್ಕೆ ಮುಂದಾಗಿದ್ದಾರೆ. ಇಲ್ಲಿ ಬಂದಿದ್ದು ನಾನಾಗಿ ಹೋಗೋದು ನಾನಾಗಿಯೇ ಅಂತಾ ಫ್ರೆಂಡ್‌ಶಿಪ್, ಆತ್ಮೀಯತೆ ಬಿಟ್ಟು ಆಡ್ತಿದ್ದಾರೆ. ಇದ್ರ ಜೊತೆಗೆ ಬಿಗ್‌ಬಾಸ್ ಸ್ಪರ್ಧಿಗಳು ಮಾನವೀಯತೆ, ಕರುಣೆ ಮರೆತು ಸ್ವಾರ್ಥಿಗಳಾಗಿದ್ದಾರೆ. ಫಿನಾಲೆಗೆ ಹೋಗೋ ಭರದಲ್ಲಿ ಅತಿರೇಕದ ವರ್ತನೆ ತೋರಿದ್ದಾರೆ. ಜೊತೆಗೆ ಸೆಲೆಬ್ರಿಟಿಗಳ ಮಧ್ಯೆ ಚೆನ್ನಾಗಿಯೇ ಆಡ್ತಿರೋ ಧನರಾಜ್, ಮತ್ತು ಚೈತ್ರಾ ಕುಂದಾಪುರ ಅವ್ರನ್ನ ಮೂಲೆಗುಂಪು ಮಾಡಿದ್ದಾರೆ. ಅದ್ರಲ್ಲೂ ಧನರಾಜ್ ಈಗ ಹರಕೆಯ ಕುರಿಯಂತಾಗಿದ್ದಾರೆ.
ಇದನ್ನೂ ಓದಿ: ಕನ್ನಡದ ಕೋಟ್ಯಾಧಿಪತಿ ಮತ್ತೆ ಶುರು! – ಬಿಗ್ ಬಾಸ್ ಬಿಟ್ಟು ಸುದೀಪ್ ಬರ್ತಾರಾ?
ಬಿಗ್ ಬಾಸ್ ರಿಯಾಲಿಟಿ ಶೋ ಈಗ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದೆ. ಫಿನಾಲೆ ಟಿಕೆಟ್ ಯಾರಿಗೆ ಅನ್ನೋ ವಿಚಾರದಲ್ಲಿ ಪೈಪೋಟಿ ಜೋರಾಗಿದೆ. ಟಿಕೆಟ್ ಟು ಫಿನಾಲೆಗಾಗಿ ಬಿಗ್ ಬಾಸ್ ಸ್ಪರ್ಧಿಗಳು ಸ್ವಲ್ಪ ಅತಿರೇಕವಾಗಿಯೇ ಆಟಕ್ಕಿಳಿದಿದ್ದಾರೆ. ಈಗಾಗಲೇ ಚೈತ್ರಾ ಕುಂದಾಪುರಗೆ ಫಿನಾಲೆ ಟಿಕೆಟ್ ಮಿಸ್ ಆಗಿದೆ. ಚೈತ್ರಾ ಕುಂದಾಪುರ ಅವ್ರನ್ನ ಸೈಡ್‌ಲೈನ್ ಮಾಡುವಲ್ಲಿ ಯಶಸ್ವಿಯಾದ ಸ್ಪರ್ಧಿಗಳು ಈಗ ಧನರಾಜ್ ಕಡೆ ಪೋಕಸ್ ಮಾಡಿದ್ದಾರೆ. ಮಂಜು ಹಾಗೂ ಗೌತಮಿ ಬೇಕಂತಾನೇ ಧನರಾಜ್ ಅವ್ರನ್ನ ಟಾರ್ಗೆಟ್ ಮಾಡಿದ್ದಾರೆ.
ಬಿಗ್ ಬಾಸ್ ನಿಮ್ಮಲ್ಲಿ ಟಿಕೆಟ್ ಟು ಫಿನಾಲೆಯಿಂದ ಒಬ್ಬರನ್ನು ಹೊರಗಡೆ ಇಡಬೇಕು ಎಂದಿದ್ದಾರೆ. ಟಾಸ್ಕ್ಗಾಗಿ ಮಂಜು, ಧನರಾಜ್ ಹಾಗೂ ಗೌತಮಿ ಟೀಮ್ ಆಗಿ ಆಟವಾಡ್ತಿದ್ರು. ಟಿಕೆಟ್ ಟು ಫಿನಾಲೆಯಿಂದ ಒಬ್ಬರನ್ನ ಹೊರಗೆ ಇಡುವ ವಿಚಾರ ಬಂದಾಗ ಗೌತಮಿ ಹಾಗೂ ಮಂಜು ಜೊತೆಯಾಗಿಯೇ ಧನರಾಜ್ ಹೆಸರೇಳಿದ್ದಾರೆ. ಇಬ್ಬರೂ ಧನರಾಜ್ ಹೆಸರು ಹೇಳ್ತಿದ್ದಂತೆ ಸ್ಪರ್ಧಿಗಳೆಲ್ಲಾ ವ್ಯಂಗ್ಯ ಮಾಡುವಂತೆ ಚಪ್ಪಾಳೆ ತಟ್ಟಿದ್ದಾರೆ. ಈ ವೇಳೆ ಧನು, ಗೌತಮಿಗಿಂತ ವೀಕ್ ಇದ್ದಾರಾ? ಯಾಕೋ ಫಸ್ಟ್ ವೀಕ್ ಚೆನ್ನಾಗಿ ಆಡಲಿಲ್ಲ ಎಂದು ರಜತ್ ಕೂಡಾ ಕಾಲೆಳೆದಿದ್ದಾರೆ. ನಾನು ಇಲ್ಲಿ ಒಬ್ಬನೇ ಆಡ್ತಿರೋದು ಯಾರನ್ನ ಜೊತೆಗೆ ಕರೆದುಕೊಂಡು ಹೋಗ್ತಿಲ್ಲ ಎಂದು ಮಂಜು ಸಮರ್ಥನೆ ನೀಡಿದ್ದಾರೆ.
ಇನ್ನೆರಡು ವಾರಗಳಲ್ಲಿ ‘ಬಿಗ್ ಬಾಸ್’ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ‘’ಈ ವಾರ ಒಬ್ಬರಿಗೆ ‘ಟಿಕೆಟ್ ಟು ಫಿನಾಲೆ’ ಸಿಗಲಿದೆ’’ ಅಂತ ಕಿಚ್ಚ ಸುದೀಪ್ ಹೇಳಿದಾಗ ನೀಡಲಾಗುವ ಟಾಸ್ಕ್‌ಗಳ ಬಗ್ಗೆ ವೀಕ್ಷಕರಲ್ಲಿ ಹೈ ಹೋಪ್ಸ್ ಇತ್ತು. ಕಿಚ್ಚ ಸುದೀಪ್ ಎಷ್ಟೇ ಬುದ್ದಿ ಹೇಳಿದ್ರೂ ಸ್ಪರ್ಧಿಗಳು ಮಾತ್ರ ಮಾಚ್ ಫಿಕ್ಸ್ಂಗ್ ಮಾಡೋದನ್ನ ಕಡಿಮೆ ಮಾಡಿರಲಿಲ್ಲ. ಇದ್ರ ಪರಿಣಾಮ ಹರಕೆಯ ಕುರಿಯಾಗಿ ಧನರಾಜ್ ಕಂಡು ಬಂದ್ರೆ, ಚೈತ್ರಾ ಕುಂದಾಪುರ ಸೈಡ್‌ಲೈನ್ ಆಗಿದ್ದಾರೆ. ಆದ್ರೆ, ಇಲ್ಲಿ ಗಮನಿಸಲೇಬೇಕು. ಭವ್ಯಾ ತ್ರಿವಿಕ್ರಮ್ ನೆರಳಲ್ಲಿ ಆಡ್ತಿದ್ದಾರೆ. ಆದ್ರೆ, ಧನರಾಜ್ ಮಾನವೀಯತೆ ಜೊತೆಗೆ ಬಿಗ್‌ಬಾಸ್ ಟಾಸ್ಕ್ ಕೂಡಾ ಚೆನ್ನಾಗಿಯೇ ನಿಭಾಯಿಸ್ತಿದ್ದಾರೆ. ಹನುಮಂತನ ಆಟಕ್ಕಿಂತಲೂ ಧನರಾಜ್ ಆಟವೇ ಹೈಲೆಟ್ ಆಗಿ ಕಾಣ್ತಿದೆ. ಆದ್ರೆ, ಇಲ್ಲಿ ಭವ್ಯಾನ ಸೇಫ್ ಮಾಡುವಲ್ಲಿ ತ್ರಿವಿಕ್ರಮ್, ಗೌತಮಿನ ಸೇಫ್ ಮಾಡಲು ಮಂಜು ಆಟ ನೋಡಿದ್ರೆ ಇದೊಂಥರಾ ಮ್ಯಾಚ್ ಫಿಕ್ಸಿಂಗ್ ಟಾಸ್ಕ್ ಆಗ್ತಿದೆ ಅನ್ನೋದು ವೀಕ್ಷಕರ ಅಭಿಪ್ರಾಯ.