ಹರಕೆ ಹೇಳಿಕೊಂಡರೆ ಬಯಕೆ ಈಡೇರಿಸುತ್ತೆ ಶ್ವಾನ ದೇವರು – ನಾಯಿಗೆ ಗುಡಿ ಕಟ್ಟಿದ ಭಕ್ತರು..!

ಹರಕೆ ಹೇಳಿಕೊಂಡರೆ ಬಯಕೆ ಈಡೇರಿಸುತ್ತೆ ಶ್ವಾನ ದೇವರು – ನಾಯಿಗೆ ಗುಡಿ ಕಟ್ಟಿದ ಭಕ್ತರು..!

ಪಂಜುರ್ಲಿ, ನಂದಿ, ನವಿಲು, ನಾಗದೇವತೆ ಹೀಗೆ ಪ್ರಾಣಿ ಪಕ್ಷಿಗಳನ್ನು ಪೂಜಿಸುವುದು ಎಲ್ಲರಿಗೂ ಗೊತ್ತಿದೆ. ಆದರೆ, ನಿಯತ್ತಿಗೆ ಹೆಸರಾದ ನಾಯಿಯನ್ನೂ ಪೂಜೆ ಮಾಡುತ್ತಾರೆ ಎಂಬ ವಿಚಾರ ಗೊತ್ತಾ.. ಹೌದು. ನಾಯಿಗಳನ್ನು ದೇವರಂತೆ ಪೂಜಿಸುವ ಜನರಿದ್ದಾರೆ. ನಾಯಿಗಳಲ್ಲಿ ತಮ್ಮ ಕಷ್ಟ ಹೇಳಿಕೊಂಡು ಪರಿಹಾರ ಪಡೆದ ಭಕ್ತರಿದ್ದಾರೆ.

ಇದನ್ನೂ ಓದಿ: ಎಮ್ಮೆ ಮೇಲೆ ಬಂದ ಶ್ವಾನ ಮಹಾರಾಜರಿಗೆ ದಾರಿ ಬಿಡಿ..! – ಎಮ್ಮೆಗೊಂದು ಕಾಲ.. ನಾಯಿಗೊಂದು ಕಾಲ ಬಂದೇ ಬಿಡ್ತು..!

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಗ್ರಹಾರ ವಳಗೇರಿಹಳ್ಳಿ ಗ್ರಾಮದ ಶಕ್ತಿದೇವತೆ ಶ್ರೀ ವೀರಮಾಸ್ತಿ ಕೆಂಪಮ್ಮನಿಗೆ ನಾಯಿಗಳೇ ವಾಹನ. ನಾಯಿಗಳೇ ಕಾವಲು. ಹೀಗಾಗಿ ನಾಯಿಗಳಿಗೆ ಎಂದೇ ವಳಗೇರಿಹಳ್ಳಿಯಲ್ಲಿ ವಿಶೇಷ ಗುಡಿ ಕಟ್ಟಲಾಗಿದೆ. ನಾಯಿದೊಳೆ ವೀರಪ್ಪ ಅನ್ನೋದು ಶ್ವಾನ ದೇವತೆಯ ಹೆಸರು. ವೀರಮಾಸ್ತಿ ಕೆಂಪಮ್ಮನ ಕಾವಲುಗಾರರಾದ ಈ ನಾಯಿಗಳಿಗೆ ಪ್ರತಿ ಗುರುವಾರ, ಭಾನುವಾರ ವಿಶೇಷ ಪೂಜೆ, ಪುನಸ್ಕಾರ ನಡೆಸಲಾಗುತ್ತೆ. ವೀರಮಾಸ್ತಿ ಕೆಂಪಮ್ಮ ತಾಯಿಗೆ ಪೂಜೆ ಸಲ್ಲಿಸಿದ ಬಳಿಕ ಶ್ವಾನಗಳಿಗೂ ವಿಶೇಷ ಪೂಜೆ ನಡೆಯುತ್ತೆ. ಇಲ್ಲಿ ಕೇವಲ ಪೂಜೆಯೊಂದೇ ಅಲ್ಲ, ನಾಯಿಗಳನ್ನು ಮನಸಲ್ಲಿಟ್ಟುಕೊಂಡು ಮನಸ್ಸಿನಲ್ಲಿ ಹರಕೆ ಹೊತ್ತರೆ ಆ ಕಾರ್ಯ ನೆರವೇರುತ್ತದೆಯಂತೆ. ಹಲವರಿಗೆ ಈ ಅನುಭವವಾಗಿದೆಯಂತೆ. ಒಂದು ವೇಳೆ ಹರಕೆ ಮರೆತರೆ ನಾಯಿಗಳಿಂದ ತೊಂದರೆಯಾಗುತ್ತದೆ ಎನ್ನುತ್ತಾರೆ ವಳಗೇರಿಹಳ್ಳಿ ಗ್ರಾಮದ ಜನರು. ಅಷ್ಟೇ ಅಲ್ಲ, ಈ ಗ್ರಾಮದಲ್ಲಿ ನಾಯಿಗಳಿಗೆ ಎಂಜಲು ಊಟ ಹಾಕಬಾರದಂತೆ. ಆ ರೀತಿ ಮಾಡಿದರೆ ಕನಸಿನಲ್ಲಿ ನಾಯಿಗಳು ಕಿರುಕುಳ ನೀಡುತ್ತವಂತೆ. ಮನೆಯಲ್ಲಿ ಸಾಕಿದ ನಾಯಿಗಳಿಗೆ ಏನಾದರೂ ತೊಂದರೆಯಾದರೆ ಇಲ್ಲಿ ನಾಯಿಗಳನ್ನು ಕರೆತಂದು ಪೂಜೆ ಮಾಡಿದರೆ ಎಲ್ಲಾ ತೊಂದರೆಗಳೂ ಮಾಯವಾಗುತ್ತವಂತೆ. ಕಳ್ಳತನವಾದ್ರೆ ಇಲ್ಲಿ ಬಂದ್ರು ಪ್ರಾರ್ಥಿಸಿದ್ರೆ ನಾಯಿಗಳು ಕಳ್ಳರಿಗೆ ಶಿಕ್ಷೆ ನೀಡುತ್ತವೆ ಎಂಬ ನಂಬಿಕೆಯೂ ಇಲ್ಲಿನ ಜನರಲ್ಲಿದೆ.

suddiyaana