ಕೋಟಿ ಕೋಟಿ ಆದಾಯ ಬಂದರೂ ಭಕ್ತರಿಗಿಲ್ಲ ಮೂಲಸೌಕರ್ಯ – ಅಯ್ಯಪ್ಪನ ದರ್ಶನಕ್ಕೆ ಬರುವವರ ಸ್ಥಿತಿ ಅಯ್ಯಯ್ಯಪ್ಪಾ…

ಕೋಟಿ ಕೋಟಿ ಆದಾಯ ಬಂದರೂ ಭಕ್ತರಿಗಿಲ್ಲ ಮೂಲಸೌಕರ್ಯ – ಅಯ್ಯಪ್ಪನ ದರ್ಶನಕ್ಕೆ ಬರುವವರ ಸ್ಥಿತಿ ಅಯ್ಯಯ್ಯಪ್ಪಾ…

ಶಬರಿಮಲೆ ಅಯ್ಯಪ್ಪಸ್ವಾಮಿ ಅಂದ್ರೆ ಭಕ್ತರಿಗೆ ಎಲ್ಲಾ ದೇವರುಗಳಿಗಿಂತಲೂ ಸ್ವಲ್ಪ ಜಾಸ್ತಿಯೇ ಭಯ, ಭಕ್ತಿ. ವಾರಗಟ್ಟಲೆ ಕೆಟ್ಟ ಚಟಗಳನ್ನ ಬಿಟ್ಟು ಮಡಿಯಿಂದ ಇದ್ದು ಮಣಿಕಂಠನ ದರ್ಶನಕ್ಕೆ ತೆರಳ್ತಾರೆ. ಆದ್ರೆ ಹೀಗೆ ಹೋಗುವ ಭಕ್ತರಿಗೆ ಶಬರಿಮಲೆಯಲ್ಲಿ ನರಕ ದರ್ಶನವಾಗುತ್ತಿದೆ. ದಿನವಿಡೀ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಒಂದು ಕಡೆಯಾದ್ರೆ ಊಟ, ನೀರು ಸೇರಿದಂತೆ ಮೂಲ ಸೌಕರ್ಯಗಳೂ ಇಲ್ಲದಾಗಿದೆ. ಹತ್ತಾರು ಕಿಲೋ ಮೀಟರ್ ದೂರದಲ್ಲೇ ಟ್ರಾಫಿಕ್ ಜಾಮ್ ಉಂಟಾಗಿ ದಾರಿ ಮಧ್ಯದಲ್ಲೇ ಭಕ್ತರು ಪರದಾಡುತ್ತಿದ್ದಾರೆ. ಭಕ್ತರಿಗೆ ಮೂಲ ಸೌಕರ್ಯ ಒದಗಿಸದ ಕೇರಳ ಸರ್ಕಾರದ ವಿರುದ್ಧ ಪ್ರತಿಭಟನೆಗಳೂ ಕೂಡ ನಡೆಯುತ್ತಿವೆ. ಮತ್ತೊಂದೆಡೆ ಡಿಸೆಂಬರ್ 27ರಂದು ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಮಂಡಲ ಪೂಜೆ ನಡೆಯುತ್ತಿದೆ. ಈ ಪೂಜೆಗಾಗಿ ಲಕ್ಷಾಂತರ ಭಕ್ತರು ಶಬರಿಮಲೆಗೆ ಬರುತ್ತಿದ್ದಾರೆ.

ಇದನ್ನೂ ಓದಿ: ನೂಕುನುಗ್ಗಲಿನ ನಡುವೆ ಅಯ್ಯಪ್ಪನ ಭಕ್ತರಿಗೆ ಸಾಲು ಸಾಲು ಸಮಸ್ಯೆ! – ಕುಡಿಯಲು ನೀರಿಲ್ಲ, ತಿನ್ನಲು ಆಹಾರವಿಲ್ಲ!

ಡಿಸೆಂಬರ್ 27ರಂದು ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಮಂಡಲ ಪೂಜೆ ನಡೆಯುತ್ತಿದೆ. ಆದರೆ ಮಂಡಲ ಪೂಜೆಯ ದಿನ 64 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂಡಲಪೂಜೆಯ ವಿಶೇಷತೆಗಳನ್ನು ಹೇಳುವುದಾದರೆ, ತಿರುವಾಂಕೂರು ರಾಜ ಚಿತ್ರ ತಿರುನಾಳ್ ಮಹಾರಾಜರು 1973ರಲ್ಲಿ ಶಬರಿಮಲೆಗೆ ನೀಡಿದ್ದ 450 ಪೌಂಡ್ ಚಿನ್ನದ ವಸ್ತ್ರ ದೇಗುಲಕ್ಕೆ ಆಗಮಿಸಲಿದೆ. ತಿರುವಾಂಕೂರು ದೇವಸ್ಥಾನದಿಂದ ಅದ್ಧೂರಿಯಾಗಿ ಸ್ವಾಗತ ಕೋರಲಾಗುತ್ತದೆ. ನಂತರ ಅಯ್ಯಪ್ಪನಿಗೆ ಚಿನ್ನದ ವಸ್ತ್ರ ತೊಡಿಸಿ ವಿಶೇಷ ದೀಪಾರಾಧನೆ ನಡೆಯಲಿದೆ. ಮಂಡಲ ಪೂಜೆ ನಂತರ 18ನೇ ಮೆಟ್ಟಿಲಿನ ಕೆಳಗೆ ರಾಜೀವರಿಗೆ ಚಿನ್ನದ ವಸ್ತ್ರವನ್ನು ಹಸ್ತಾಂತರಿಸಲಾಗುತ್ತದೆ. ನಂತರ ಅದನ್ನು 18ನೇ ಮೆಟ್ಟಿಲು ಮೂಲಕ ಸನ್ನಿಧಾನಕ್ಕೆ ತಂದು ಸಂಜೆ 6.30ಕ್ಕೆ ಅಯ್ಯಪ್ಪನಿಗೆ ಅರ್ಪಿಸಲಾಗುವುದು. ಬಳಿಕ ಅಲಂಕಾರಿಕ ದೀಪಾರಾಧನೆ ನಡೆಯಲಿದ್ದು, ರಾತ್ರಿ 11.30ಕ್ಕೆ ಸಾಮಾನ್ಯ ಪೂಜೆಗಳೊಂದಿಗೆ ಮೆರವಣಿಗೆ ಮುಕ್ತಾಯವಾಗಲಿದೆ. ಹೀಗಾಗಿ ಬುಧವಾರ ಕೇವಲ 70 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ದಿನದಿಂದ ದಿನಕ್ಕೆ ಶಬರಿಮಲೆಗೆ ಬರುತ್ತಿರುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು,  ಡಿಸೆಂಬರ್ 27 ರಂದು ಮಂಡಲ ಪೂಜೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಬಾರಿಯೂ ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ ನೀಡಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಮೂಲಕ ಶಬರಿಮಲೆಯಲ್ಲಿ ಆದಾಯ ಸಂಗ್ರಹವು 200 ಕೋಟಿ ರೂಪಾಯಿಗಳನ್ನು ದಾಟಿದೆ. ಅಯ್ಯಪ್ಪ ದೇಗುಲದ ಉಸ್ತುವಾರಿ ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಬೋರ್ಡ್ ಅಂದ್ರೆ ಟಿಡಿಬಿ ಈ ಬಗ್ಗೆ ಮಾಹಿತಿ ನೀಡಿದೆ. ಡಿಸೆಂಬರ್ 25 ರವರೆಗೆ ಕಳೆದ 39 ದಿನಗಳಲ್ಲಿ ದೇವಸ್ಥಾನಕ್ಕೆ 204.30 ಕೋಟಿ ಆದಾಯ ಬಂದಿದೆ ಎಂದು ತಿಳಿಸಿದೆ. ಈವರೆಗೂ ಶಬರಿಮಲೆಗೆ 31 ಲಕ್ಷದ 43 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.  ಆದ್ರೆ ವಿಪರ್ಯಾಸ ನೋಡಿ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿದಂತೆ ಕೇರಳದ ಲಕ್ಷಾಂತರ ಭಕ್ತರು ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳ್ತಾರೆ. ಈ ವರ್ಷ 39 ದಿನಗಳಲ್ಲೇ 200 ಕೋಟಿಗೂ ಹೆಚ್ಚಿನ ಆದಾಯ ಬಂದಿದೆ. ಇಷ್ಟಾದ್ರೂ ಅಲ್ಲಿನ ಸರ್ಕಾರ ಯಾತ್ರೆಗೆ ಬರುವವರಿಗೆ ಸೌಕರ್ಯಗಳನ್ನ ಒದಗಿಸುವಲ್ಲಿ ವಿಫಲವಾಗಿದೆ.

Sulekha