Devil ಬರ್ತಿದೆ ಚಿನ್ನ – D BOSS ಗ್ರಹಣ ಬಿಡ್ತಾ? – ಜೈಲಿನ TVಯಲ್ಲಿ ಡೆವಿಲ್ ‘ದರ್ಶನ’

Devil ಬರ್ತಿದೆ ಚಿನ್ನ – D BOSS ಗ್ರಹಣ ಬಿಡ್ತಾ?  – ಜೈಲಿನ TVಯಲ್ಲಿ ಡೆವಿಲ್ ‘ದರ್ಶನ’

ದರ್ಶನ್ ಫ್ಯಾನ್ಸ್‌ಗೆ ಡೆವಿಲ್ ಹಬ್ಬ ಶರುವಾಗಿದೆ.. ಇಂದು ಟ್ರೈಲರ್ ರಿಲೀಸ್ ಆಗಿದ್ದು,  ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.  ಟ್ರೈಲರ್ ಈಗಾಗಲೇ ಒಂದೂ ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ .ಇದೇ  ಡಿಸೆಂಬರ್ 11ಕ್ಕೆ ಸಿನಿಮಾ ತೆರೆ ಮೇಲೆ ಬರ್ತಿದೆ.. ಈಗ ಟ್ರೈಲರ್ ಕೂಡ  ರಿಲೀಸ್ ಆಗಿದ್ದು, ದಾಸನ ಫ್ಯಾನ್ಸ್ ಸಿಕ್ಕಾಪಟ್ಟೇ ಖುಷಿಯಾಗಿದ್ದಾರೆ. ಆದ್ರೆ ದರ್ಶನ್ ಜೈಲಿನಲ್ಲಿ ಇರೋದು ಅವರ ಫ್ಯಾನ್ಸ್‌ಗೆ ಸಿಕ್ಕಾಪಟ್ಟೇ ಬೇಸರ ತರಿಸಿದೆ.  ದರ್ಶನ್ ಜೈಲಿನಲ್ಲಿ ಇರ್ತಾ ಬಿಡುಗಡೆಯಾಗ್ತಿರೋ ಎರಡೇ ಸಿನಿಮಾ ಡೆವಿಲ್‌. ಈ ಮೊದ್ಲು ಹೆಂಡತಿಗೆ ಹೊಡದ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದ ವೇಳೆ ಸಾರಥಿ ರಿಲೀಸ್ ಆಗಿತ್ತು.. 2011 ರಲ್ಲಿ ದರ್ಶನ್ ಜೈಲಿನಲ್ಲಿ ಇದ್ದರು ಸೂಪರ್ ಹಿಟ್ ಆಗಿತ್ತು. ಈಗ ಡೆವಿಲ್ ರಿಲೀಸ್ ಟೈಂನಲ್ಲೂ ದರ್ಶನ್ ಜೈಲಿನಲ್ಲಿದ್ದು, ಈ ಸಿನಿಮಾದ ಬಗ್ಗೆ ನಿರೀಕ್ಷೆ ಸಾಕಷ್ಟಿದೆ.

ಇದನ್ನೂ ಓದಿ: ಶಾಂತಿಯಿಂದ ಹೋಗೋಣ, ಯುದ್ಧ ಬೇಡ – ಭಾರತಕ್ಕೆ ಬಂದ ಪುಟಿನ್‌ಗೆ ಮೋದಿ ಕಿವಿಮಾತು

ಡೆವಿಲ್‌ನಲ್ಲಿ ದರ್ಶನ್ ತುಂಬಾ ಸ್ಟೈಲಿಶ್ ಆಗಿ ಕಾಣಿಸಿದ್ದಾರೆ.  ಹಾಗೇ ತುಂಬಾನೆ ಹ್ಯಾಂಡ್ಸಮ್ ಆಗಿಯೇ ಕಾಣಿಸುತ್ತಿದ್ದಾರೆ.  ನಿರ್ದೇಶಕರಾದ ಮಿಲನಾ ಪ್ರಕಾಶ್  ದರ್ಶನ್‌ಗೆ ಸಖತ್ ಹೈಪ್ ಕೊಟ್ಟಿರುವುದು ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ.  ಧನುಷ್‌ ಅನ್ನುವ ಪಾತ್ರದಲ್ಲಿ ದರ್ಶನ್ ಇಲ್ಲಿ ನಟಿಸಿದ್ದಾರೆ. ಆದರೆ, ನಾನು ಡೆವಿಲ್ ಅನ್ನೋ ಮಾತನ್ನೂ ದರ್ಶನ್ ಡೈಲಾಗ್‌ನಲ್ಲಿ ಹೇಳ್ತಾರೆ.  ಡೆವಿಲ್ ಚಿತ್ರದಲ್ಲ ಖಡಕ್ ಡೈಲಾಗ್ ಇವೆ. ಪ್ರತಿ ಡೈಲಾಗ್ ಅಲ್ಲೂ ಪಂಚ್ ಇವೆ. ಬ್ರದರ್ ಫ್ರಾಮ್ ಅನದರ್ ಮದರ್. ಆದರೆ, ನಾಟ್ ಸೇಮ್ ಫಾದರ್ ಅನ್ನೋ ಡೈಲಾಗ್ ಇದೆ. ಆದ್ರೆ ಈ ಡೈಲಾಗ್‌ ಹಳೇ ಡೈಲಾಗ್ ಅನ್ಸುತ್ತೆ.  ಎಲ್ಲಿ ಹೋದ್ರೂ ಬರ್ತಿರಲ್ಲೋ? ಏನೋ ನಿಮ್ಮ ಪ್ರಾಬ್ಲಂ ಅಂತಲೂ ಹೇಳ್ತಾರೆ. ಆದರೆ, ಇದನ್ನ ಯಾರಿಗೆ ಹೇಳಿದ್ರು ಅನ್ನೋ ಪ್ರಶ್ನೆ ಇದೆ. ಟ್ರೈಲರ್ ಕೊನೆಯಲ್ಲಿ ಒಂದು ಡೈಲಾಗ್ ಬರುತ್ತದೆ. ಆದರೆ, ಇದು ಸದ್ಯದ ದರ್ಶನ್ ಸ್ಥಿತಿಗೂ ಕನೆಕ್ಟ್ ಆಗೋ ರೀತಿನೇ ಇದೆ. ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯುದಿಲ್ಲ. ನಾನು ಬರ್ತಿನಿ ಚಿನ್ನಾ ಅಂತಲೇ  ದರ್ಶನ್ ಡೈಲಾಗ್ ಹೊಡೆಯುತ್ತಾರೆ. ಅದ್ರೆ ಈಗ ನನಗೆ ಕೆಟ್ಟ ಟೈಂ ಜೈಲಿಗೆ ಹೋಗಿದ್ದೇನೆ.. ಮತ್ತೆ ವಾಪಸ್ ಬರ್ತಿನಿ ಅನ್ನೋ ತರ ಇದೆ.

ಇದು ರಾಜಕೀಯದ ಸುತ್ತಾ ನಡೆಯೋ ಕಥೆ ಅನ್ನೋದು ಟ್ರೇಲರ್ ನೋಡಿದ್ರೆ ಗೊತ್ತಾಗುತ್ತೆ.. ಆದ್ರೆ ಇಲ್ಲಿ ದರ್ಶನ್ ರಾಜಕಾರಣಿಯಾಗಿ ಕಾಣಿಸಿಕೊಂಡಿಲ್ಲ,  ಬೇರೆ ಬೇರೆ ಗೆಟಪ್​ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಗ್‌ಗ್ರೌಂಡ್ ಮ್ಯೂಸಿಕ್ ಸೂಪರ್ ಆಗಿದೆ. ಇನ್ನೂ ಚಿತ್ರದಲ್ಲಿ ದರ್ಶನ್‌ಗೆ ಜೋಡಿಯಾಗಿ  ರಚನಾ ರೈ ನಟಿಸಿದ್ದಾರೆ.  ಅಚ್ಯುತ್ ಕುಮಾರ್ ,  ಶರ್ಮಿಳಾ ಮಾಂಡ್ರೆ, ಶೋಭರಾಜ್, ವಿನಯ್ ಗೌಡ ಸೇರಿದಂತೆ ಮೊದಲಾದವರು ನಟಿಸಿದ್ದಾರೆ. ಇನ್ನೂ ಬಿಗ್‌ಬಾಸ್‌ ಮನೆಯಲ್ಲಿ ಹವಾ ಮಾಡ್ತಿರೋ ಗಿಲ್ಲಿ ನಟ ಕೂಡ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಸ್ಟೇಷನ್‌ಗೆ ಹೋಗುವ ಗಿಲ್ಲಿ ನಟ ಲಾಟ್ ಆಫ್ ಶೇಕ್ ಸ್ವಲ್ಪ ಎಸಿ ಹಾಕೋ ಅನ್ನೋ ಡೈಲಾಗ್ ಟ್ರೈಲರ್‌ನಲ್ಲಿ ತೋರಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕೆ ಧಮ್ ನೀಡಿದೆ.

‘ಡೆವಿಲ್’ ಸಿನಿಮಾಗೆ ಪ್ರಕಾಶ್ ನಿರ್ದೇಶನ ಮಾಡುವುದರಿಂದ ನಿರೀಕ್ಷೆ ಹೆಚ್ಚಿದೆ. ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿದ್ದಾರೆ. ಅವರು ಇಲ್ಲದೆ ಅಭಿಮಾನಿಗಳು ಚಿತ್ರವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಈಗಾಗಲೇ ರಿಲೀಸ್ ಆದ ಹಾಡುಗಳು ಗಮನ ಸೆಳೆದಿವೆ. ಈಗ ಟ್ರೇಲರ್ ರಿಲೀಸ್ ಆಗಿದ್ದು ನಿರೀಕ್ಷೆ ಹೆಚ್ಚಿದೆ.

ಇನ್ನೂ ಜೈಲಿನಲ್ಲಿ ನಮಗೆ ಟಿವಿ ಬೇಕು ಅಂತ ದರ್ಶನ್ ಕೋರ್ಟ್ ಮೊರೆ ಹೋಗಿದ್ರು.  ವಿಚಾರಣೆಯ ವೇಳೆಯಲ್ಲಿ ದರ್ಶನ್ ಅವರು ತಲೆ ಕೆಡ್ತಿದೆ, ದಯವಿಟ್ಟು ಟಿವಿ ಹಾಕಿಸಿಕೊಡಿ ಎಂದು ಕೇಳಿಕೊಂಡಿದ್ದರು.ಅದ್ದಕ್ಕೆ ಕೋರ್ಟ್ ಅಸ್ತು ಅಂತ ಹೇಳಿತ್ತು.  ದರ್ಶನ್ ಬ್ಯಾರಕ್ ನಲ್ಲಿ ಟಿವಿ ಅಳವಡಿಕೆ ಮಾಡಲು ಜೈಲು ಅಧಿಕಾರಿಗಳಿಗೆ ಸೂಚನೆ ಕೋರ್ಟ್ ಸೂಚನೆ ಕೊಟ್ಟಿತ್ತು.  ಜಡ್ಜ್ ಆದೇಶ ಕೊಟ್ಟಾಗಿನಿಂದ ಆರೋಪಿಗಳು ತಮಗೆ ಯಾವಾಗ ಟಿವಿ ಸಿಗುತ್ತೆ ಅಂತ ಕಾಯುತ್ತಿದ್ದಾರೆ. ಕೋರ್ಟ್ ಆದೇಶ ಮಾಡಿದ್ದೇ ತಡ ಟಿವಿ ಯಾವಾಗ ಕೊಡ್ತೀರಾ ಅಂತ ಡಿ ಗ್ಯಾಂಗ್ ಪ್ರಶ್ನೆ ಮಾಡ್ತಾನೆ ಇದೆ ಎನ್ನಲಾಗಿದೆ. ಇನ್ನು ಆದೇ ಶ ಪ್ರತಿ ಬಂದಿಲ್ಲ, ಆದೇಶ ಏನ್ ಇದೆಯೋ ಅಧಿಕಾರಿಗಳು ನೋಡ್ತಾರೆ. ಬಳಿಕ ಹಿರಿಯ ಅಧಿಕಾರಿಗಳು ನಿರ್ಧಾರ ಮಾಡ್ತಾರೆ ಎಂದು ಸದ್ಯ ಸಿಬ್ಬಂದಿ ಆರೋಪಿಗಳಿಗೆ ಹೇಳಿ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಟಿವಿ ಬಂದ ತಕ್ಷಣ ದರ್ಶನ್ ಡೇವಿಲ್ ಟ್ರೈಲರ್ ನೋಡೋಕೆ ಆಗಲ್ಲ. ಯಾಕಂದ್ರೆ ಯ್ಯೂಟಬ್‌ನಲ್ಲಿ ಟ್ರೈಲರ್ ರಿಲೀಸ್ ಆಗಿದ್ರಿಂದ ಫುಲ್ ಟ್ರೈಲರ್ ಟಿವಿಯಲ್ಲಿ  ಹಾಕಲ್ಲ. ಆದ್ರೆ ನ್ಯೂಸ್ ಚಾನೆಲ್ ನೋಡಿ ಡೆಿವಿಲ್ ಹವಾ ಹೇಗ್ ಇದೆ ಅನ್ನೋದ್ದನ್ನ ತಿಳಿದುಕೊಳ್ಳಬಹುದು. ರಿಲೀಸ್ ಆದ ಮೇಲೆ ಟಿವಿ ಪ್ರೋಗ್ರಾಮ್‌ ನೋಡಿ ಡೆವಿಲ್ ಬಗ್ಗೆ ತಿಳಿದುಕೊಳ್ಳಬಹುದು.

Kishor KV