DBOSS ಡೆವಿಲ್ ಕ್ರೇಜ್ ಡಲ್ – ಸೇಲ್ ಆಗ್ತಿಲ್ಲ ಡಿಸ್ಟ್ರಿಬ್ಯೂಷನ್ ರೈಟ್ಸ್!
ದರ್ಶನ್ ನಂಬಿ ಪ್ರೊಡ್ಯೂಸರ್ ಕೆಟ್ರಾ?

ಡಿಸೆಂಬರ್ ಬಂದ್ರೆ ಸಿನಿ ರಸಿಕರಿಗೆ ಸುಗ್ಗಿ.. ಯಾಕಂದ್ರೆ ಡಿಸೆಂಬರ್‌ನಲ್ಲೇ ಸ್ಟಾರ್ ನಟನ ಸಿನಿಮಾ ರಿಲೀಸ್ ಆಗುತ್ತೆ.. ಅದ್ರಲ್ಲೂ ಈ ಸಲ ಡಿಬಾಸ್ ದರ್ಶನ್ ಅವರ ಡೆವಿಲ್ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು.. ಕೆಲ ತಿಂಗಳ ಹಿಂದೆ ಸಖತ್ ಸೌಂಡ್ ಕೂಡ ಮಾಡ್ತು. ಆದ್ರೆ ರಿಲೀಸ್ ಡೇಟ್ ಹತ್ತಿರ ಬರ್ತಿದ್ದಂತೆ ಡೆವಿಲ್ ಫುಲ್ ಡಲ್ ಆಗಿದೆ. ಒಂದ್ಕಡೆ ರಿಲೀಸ್ ಆಗಿರೋ ಮೂರು ಹಾಡುಗಳಲ್ಲಿ ಒಂದೇ ಒಂದು ಹಿಟ್ ಆಗಿಲ್ಲ. ಮತ್ತೊಂದ್ಕಡೆ ರಿಲೀಸ್ ಡೇಟ್ ಹತ್ರ ಬಂದ್ರೂ  ವಿತರಣೆ ಹಕ್ಕು ಇನ್ನೂ ಸೇಲ್ ಆಗಿಲ್ಲ. ಇದು ಡೆವಿಲ್‌ಗೆ ದುಡ್ಡ ಹಾಕಿದವರಿಗೆ ಡವಡವ ಅನ್ನೋಕೆ ಶುರುವಾಗಿದೆ.

ಅಕ್ಕಪಕ್ಕ ಫ್ಯಾನ್ಸ್‌.. ಹಿಂದೆ ಮುಂದೆ ಬೌನ್ಸರ್ ಗಳನ್ನ ಇಟ್ಕೊಂಡು ಓಡಾಡ್ತಿದ್ದ ದರ್ಶನ್ ಈಗ ಜೈಲಿನಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ. ಐಷರಾಮಿ ಜೀವನ ನಡೆಸುತ್ತಿದ್ದ ದಾಸ ಈಗ ಚಾಪೆ ದಿಂಬು ಅಂತ ಕೋರ್ಟ್ ಹತ್ರ ಬೇಡಿಕೊಳ್ಳಬೇಕಾದ ಸ್ಥಿತಿ ಬಂದಿದೆ. ಸ್ಟಾರ್ ಆಗಿ ಆಕಾಶದಲ್ಲಿ ಮಿನುಗಬೇಕಾದವರು ರೇಣಕಾಸ್ವಾಮಿ ಕೇಸ್‌ನಿಂದ ಲೈಫ್‌ನ ಹಾಳು ಮಾಡಿಕೊಂಡಿದ್ದಾರೆ.  ಮಿನಿಮಮ್ 20 ಕೋಟಿ ಲಾಭ ಮಾಡಬಹುದು ಅಂತ ಹಣ ಹಾಕಿದ ನಿರ್ಮಾಪಕರು ಈಗ ಕೈ ಸುಟ್ಟುವ ಸ್ಥಿತಿಗೆ ಬಂದಿದ್ದಾರೆ.

ಅಂದಹಾಗೇ ದರ್ಶನ್ ನಟನೆಯಲ್ಲಿ ಕಾಟೇರದಂತಹ ಬ್ಲಾಕ್ ಬಸ್ಟರ್ ಹಿಟ್ ಬಂದ್ಮೇಲೆ.. ಡೆವಿಲ್ ಎಂಬ ಸಿನಿಮಾ ಅನೌನ್ಸ್ ಆಯ್ತು. 2024ರ ದರ್ಶನ್ ಬರ್ತಡೇಗೆ ಟೀಸರ್ ಸಹ ರಿಲೀಸ್ ಆಯ್ತು. ಟೀಸರ್ ನೋಡಿದ ಮಂದಿ ಖುಷ್ ಆದ್ರು.. ಅಬ್ಬಾ ದರ್ಶನ್ ಹೊಸ ರೀತಿಯಲ್ಲಿ ಶೈನ್ ಆಗಿದ್ದಾರೆ ಅಂತ ಸಿನಿಮಾ ಮೇಲೆ ಬೆಟ್ಟದಷ್ಟು ಆಸೆ ಇಟ್ಕೊಂಡಿದ್ದರು. ಆದರೆ ದಾಸ ದರ್ಶನ್ ಡೆವಿಲ್ ಶೂಟಿಂಗ್‌ಗೆ ಹೋಗಿರುವಾಗಲೇ ಅರೆಸ್ಟ್ ಆದ್ರು. ಆ ನಂತರ ಏನೆಲ್ಲಾ ಆಯ್ತು ಅಂತ ನಿಮಗೆಲ್ಲಾ ಗೊತ್ತೇ ಇದೆ. ಜೈಲಿಗೋದ್ರು, ಹೊರ ಬಂದ್ರು. ಬೆನ್ನು ನೋವು ಅಂತ ಒದ್ದಾಡಿದ್ರು. ಅದರ ನಡುವೆಯೇ ಶೂಟಿಂಗ್ ಮುಗಿಸಿಕೊಟ್ಟರು ದರ್ಶನ್. ಸದ್ಯ ದಾಸ ಜೈಲಲ್ಲಿರೋ ಹೊತ್ತಲ್ಲೇ ಡೆವಿಲ್ ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಆದ್ರೆ ಬಿಡುಗಡೆಗೆ ಇನ್ನೂ ಕೆಲವೇ ದಿನ ಇದ್ರೂ ಸಹ ಡೆವಿಲ್ ಬಜ್ಜೇ ಕ್ರಿಯೇಟ್ ಆಗ್ತಿಲ್ಲ. ಡಿಸೆಂಬರ್ 12 ಸಿನಿಮಾ ರಿಲೀಸ್ ಆಗುತ್ತೆ  ಆದ್ರೆ ಸಿನಿಮಾದ ಪ್ರಚಾರ ಮಾತ್ರ ಇನ್ನು ಶುರುವಾಗಿಲ್ಲ. ಡೆವಿಲ್ ಅಬ್ಬರ ಅಂದುಕೊಂಡಷ್ಟು ಸದ್ದು ಮಾಡ್ತಿಲ್ಲ. ಸಾಂಗ್ ಗಳ ವಿಷಯದಲ್ಲಂತು ಬಂದ್ಯ ಹೋದ್ಯಾ ಅನ್ನೋ ರೀತಿ ಮೊದಲ ದಿನ ಬಂದ್ರೆ ಆನಂತರ ಅಡ್ರೆಸ್ ಗೆ ಇಲ್ಲದಷ್ಟು ಮರೆಯಾಗ್ತಿವೆ. ವೈರಲ್ ಆಗ್ತಿಲ್ಲ, ಸೌಂಡ್ ಮಾಡ್ತಿಲ್ಲ.. ಇದು ಡೆವಿಲ್ ಸಾಂಗ್ ಅಂತ ಯಾರು ಕುಣಿದು ಕುಪ್ಪಳಿಸುತ್ತಿಲ್ಲ. ಡೆವಿಲ್ ಪ್ರಚಾರ ದಾಸನ ಅನುಪಸ್ಥಿತಿಯಲ್ಲಿ ನಡೆಯುತ್ತಿದ್ದು , ಈ ಹಿಂದಿನ ಸಿನಿಮಾಗಳಿಗಿದ್ದ ಕ್ರೇಜ್ ಡೆವಿಲ್ ಗೆ ಇಲ್ಲ ಅನ್ನೋದು ಕೇಳಿ ಬರ್ತಿದೆ.

ಕಾಟೇರ ಹಿಟ್ ನಂತರ ಡೆವಿಲ್ ಮಾಸ್ ಹಿಟ್ ಅನ್ನೋ ಟಾಕ್ ಜೋರಾಗಿತ್ತು. ಆದ್ರೆ ಈಗ ಡಿವಿಲ್ ಸಿನಿಮಾ ಫುಲ್ ಡಲ್ ಆಗಿದೆ. ದರ್ಶನ್ ಜೈಲಿನಲ್ಲಿ ಇರೋದ್ರಿಂದ ಸಿನಿಮಾ ರಿಲೀಸ್ ಸಮಯದಲ್ಲಿ ಪ್ರಚಾರಕ್ಕೆ ಹಿರೊ ನೇ ಇಲ್ಲದಂತಾಗಿರೊದು , ಅಜನೀಶ್ ಮ್ಯುಸಿಕ್ ನಲ್ಲಿ ಬಿಡುಗಡೆ ಆಗಿರೋ ಹಾಡುಗಳು ಅಷ್ಟೇನು ಹೇಳಿಕೊಳ್ಳುವಷ್ಟು ನಿರೀಕ್ಷೆ ಹುಟ್ಟಿಸಿಲ್ಲ ಅನ್ನೋದು , ಈ ಕಾರಣಕ್ಕೆ ವಿತರಣೆಯ ಮೇಲೂ ಪೆಟ್ಟು ಬಿತ್ತಾ ಅನ್ನೋ ಚರ್ಚೆ ಹುಟ್ಟು ಹಾಕಿದೆ.  ಡೆವಿಲ್ ರಿಲೀಸ್ ಕೆಲವೇ ಕೆಲವು ದಿನಗಳು ಬಾಕಿ ಇದ್ದರು ಕೂಡ ಯಾವುದೇ ಬಿಸನೆಸ್ ಆಗಿಲ್ಲ. ಕಾಟೇರ ರಿಲೀಸ್ ಗು ಮುನ್ನ ಥಿಯೇಟರ್ ಗಳಲ್ಲಿ 18 ಕೋಟಿ ಅಡ್ವಾನ್ಸ್ ಬಂದಿತ್ತು. ನಿರ್ಮಾಪಕರು ಸೇಫ್ ಆಗಿದ್ದರು. ಆದ್ರೆ ಈಗ 30 ಕೋಟಿ ಡಿಮ್ಯಾಂಡ್ ಮಾಡ್ತಿದ್ದರು , ಡೆವಿಲ್ ದುಬಾರಿ ಆಗಿರುವ ಕಾರಣಕ್ಕೆ ವಿತರಕರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗ್ತಿದ್ದಾರಂತೆ. ನಿರ್ದೇಶಕ ಪ್ರಕಾಶ್ ಡೆವಿಲ್ ಸಿನಿಮಾದ ನಿರ್ಮಾಪಕರು ಆಗಿದ್ದು ವಿತರಕರು ಮುಂದೆ ಬರದೇ ಇದ್ದಲ್ಲಿ ತಾವೇ ವಿತರಣೆಗೆ ಇಳಿಯುವ ಆಲೋಚನೆಯಲ್ಲಿದ್ದು ಇದಕ್ಕೆ ತೂಗುದೀಪ ಬ್ಯಾನರ್ ಕೂಡ ಸಪೋರ್ಟಿವ್ ಆಗಿ ನಿಲ್ಲುತ್ತಾ ಅನ್ನೋಪ್ರಶ್ನೆ ಮೂಡಿದೆ.

Kishor KV