ಡಿ ಬಾಸ್ ಡೆವಿಲ್ Day – ದರ್ಶನ್ ಫ್ಯಾನ್ಸ್‌ಗೆ ಇವತ್ತೇ ದೀಪಾವಳಿ ಹಬ್ಬ
ಮಗನ ಜೊತೆ ಸಿನಿಮಾ ನೋಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಡಿ ಬಾಸ್ ಡೆವಿಲ್ Day – ದರ್ಶನ್ ಫ್ಯಾನ್ಸ್‌ಗೆ ಇವತ್ತೇ ದೀಪಾವಳಿ ಹಬ್ಬಮಗನ ಜೊತೆ ಸಿನಿಮಾ ನೋಡಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಗುರುವಾರ ಪೂರ್ತಿ ಡೆವಿಲ್ ಹಬ್ಬ. ಚಿನ್ನಾ ಡೆವಿಲ್ ಬಂದಾಯ್ತು.. ಇನ್ನೇನಿದ್ರೂ ದಾಸನ ಗೆಲುವು ನೋಡೋದೇ.. ಈ ರೀತಿ ಮಾಸ್ ಡೈಲಾಗ್‌ಗಳು ಥಿಯೇಟರ್ ತುಂಬಾ ಕೇಳಿಬರುತ್ತಿದೆ. ಜೊತೆಗೆ ಡಿ ಬಾಸ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ದರ್ಶನ್ ಅಭಿಮಾನಿಗಳು ಕೊನೇವರೆಗೂ ನಿಮ್ಮ ಜೊತೆ ಇರ್ತೀವಿ ಎಂದು ಜೋಶ್‌ನಲ್ಲೇ ಪ್ರತಿಜ್ಞೆ ಮಾಡಿದ್ದಾರೆ.

ಇದನ್ನೂ ಓದಿ:ಶಿರಡಿ ಸಾಯಿಬಾಬಾಗೆ ಚಿನ್ನದ ಕಿರೀಟ ಅರ್ಪಿಸಿದ ಸ್ಯಾಂಡಲ್‌ವುಡ್‌ನ ಕನಸಿನ ರಾಣಿ! – ಮಾಲಾಶ್ರೀ ಕೊಟ್ಟ ಚಿನ್ನದ ಕಿರೀಟ ಬೆಲೆ ಇಷ್ಟೊಂದಾ?

ಡಿ ಬಾಸ್ ಫ್ಯಾನ್ಸ್ ಕಾಯುತ್ತಿದ್ದ ಡೆವಿಲ್ ಡೇ ಬಂದೇ ಬಿಟ್ಟಿದೆ. ದಾಸ ಜೈಲಿನಲ್ಲಿ ಅಭಿಮಾನಿಗಳ ಸಂಭ್ರಮ ಕಣ್ತುಂಬಿಕೊಂಡಿದ್ದಾರೆ. ಡೆವಿಲ್ ಸಿನಿಮಾ ರಾಜ್ಯಾದ್ಯಂತ ತೆರೆ ಕಂಡಿದೆ. ನೂರಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಬೆಳಗ್ಗೆ 6.30ಕ್ಕೆ ಡೆವಿಲ್ ಸಿನಿಮಾ ಶೋ ಆರಂಭವಾಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ‘ಡೆವಿಲ್​’ ಬ್ಲಾಕ್ ಬಸ್ಟರ್ ಹಿಟ್ ಎಂದು ಕೂಗಿ ಕೂಗಿ ಹೇಳ್ತಿದ್ದಾರೆ. ದರ್ಶನ ಜೈಲಿನಲ್ಲಿದ್ದ ವೇಳೆ ರಿಲೀಸ್​​ ಆಗ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಇತಿಹಾಸ ಮರುಕಳಿಸಿದೆ ಅಂತಿದ್ದಾರೆ ಅಭಿಮಾನಿಗಳು.

ಮತ್ತೊಂದೆಡೆ ದಾಸನ ಪತ್ನಿ ವಿಜಯಲಕ್ಷ್ಮೀ ಮುಖದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು. ಗಂಡನ ಸಿನಿಮಾ ಸೂಪರ್ ಹಿಟ್ ಆಗೋದು ಗ್ಯಾರಂಟಿ ಎಂಬ ಖುಷಿ ಅವರಲ್ಲಿತ್ತು. ಮಗ ವಿನೀಶ್ ಜೊತೆ ವಿಜಯಲಕ್ಷ್ಮೀ ಥಿಯೇಟರ್‌ಗೆ ಬಂದಿದ್ದರು. ಈ ವೇಳೆ ದಾಸನ ಅಭಿಮಾನಿಗಳು ಕೊನೆವರೆಗೂ ನಾವು ನಿಮ್ಮ ಜೊತೆ ಇದ್ದೇವೆ ಎಂಬ ಘೋಷಣೆ ಕೂಗಿದರು. ಆಗ ವಿಜಯಲಕ್ಷ್ಮೀ ಕೂಡಾ ಅಭಿಮಾನಿಗಳ ಅಭಿಮಾನಕ್ಕೆ ಕೈ ಮುಗಿದು ಧನ್ಯವಾದ ಹೇಳಿದರು.

ಸಾರಥಿ ಸಿನಿಮಾದಂತೆ ಡೆವಿಲ್ ಸಿನಿಮಾಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನಿರ್ದೇಶಕ ಪ್ರಕಾಶ್ ವೀರ್ ಆಕ್ಷನ್ ಕಟ್​ಗೆ ಫ್ಯಾನ್ಸ್ ಫಿದಾ ಡೆವಿಲ್​ ಸಿನಿಮಾಗೆ ಪ್ರಕಾಶ್ ವೀರ್ ಅವರು ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ವಿನಯ್ ಗೌಡ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Sulekha