ಡೆವಿಲ್‌ಗೆ ಒಬ್ಬರಲ್ಲ.. ಇಬ್ಬರು ನಾಯಕಿಯರು! – ಹೊಸ ಹೀರೋಯಿನ್‌ ಯಾರು ಗೊತ್ತಾ?

ಡೆವಿಲ್‌ಗೆ ಒಬ್ಬರಲ್ಲ.. ಇಬ್ಬರು ನಾಯಕಿಯರು! – ಹೊಸ ಹೀರೋಯಿನ್‌ ಯಾರು ಗೊತ್ತಾ?

ಸ್ಯಾಂಡಲ್‌ವುಡ್‌ನ ಬಹುನೀರಿಕ್ಷಿತ ಸಿನಿಮಾ ಡೆವಿಲ್‌ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಡಿಸೆಂಬರ್‌ 11 ರಂದು ದಾಸನ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಚಿತ್ರ ಬಿಡುಗಡೆಗೆ 7 ದಿನ ಬಾಕಿ ಇರುವಾಗಲೇ ಹೊಸ ಹೊಸ ವಿಚಾರಗಳು ರಿವೀಲ್‌ ಆಗ್ತಿದೆ. ಡೆವಿಲ್‌ ಸಿನಿಮಾದಲ್ಲಿ ದರ್ಶನ್‌ಗೆ ಒಬ್ಬರಲ್ಲ, ಇಬ್ಬರು ಜೋಡಿ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ: ಮೋಸದಿಂದ ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ರಾ ಗಿಲ್ಲಿ? – ಬಯಲಾಯ್ತು ಕಾಮಿಡಿ ಕಿಂಗ್‌ ಗಿಮಿಕ್‌?

ನಟ ದರ್ಶನ್‌ ಜೈಲಿನಲ್ಲಿದ್ರೂ ಅವರು ನಟಿಸಿರುವ ಡೆವಿಲ್‌ ಸಿನಿಮಾ ರಿಲೀಸ್‌ ಆಗಲು ಸಜ್ಜಾಗಿದೆ. ಸಿನಿಮಾ ರಿಲೀಸ್‌ ಗೆ ಕೆಲವೇ ಕೆಲವು ದಿನಗಳು ಬಾಕಿ ಇರುವಾಗಲೇ ಚಿತ್ರದ ಪ್ರಮುಖ ನಟರ ಲುಕ್‌ ರಿವೀಲ್‌ ಆಗ್ತಿದೆ. ಈಗಾಗಲೇ ಗಿಲ್ಲಿನಟ, ಹುಲಿ ಕಾರ್ತಿಕ್‌ ಅವರ ಪೋಸ್ಟರ್‌ ರಿವೀಲ್‌ ಆಗಿತ್ತು. ಇದೀಗ ಈ ಸಿನಿಮಾದಲ್ಲಿ ದಾಸನಿಗೆ ಇಬ್ಬರು ನಾಯಕಿಯರು ಅನ್ನೋದು ಗೊತ್ತಾಗಿದೆ. ರಚನಾ ರೈ ಜೊತೆಗೆ ಶರ್ಮಿಳಾ ಮಾಂಡ್ರೆ ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ.

ಡೆವಿಲ್‌ ಸಿನಿಮಾದಲ್ಲಿ ದರ್ಶನ್‌ಗೆ ರಚನಾ ರೈ ನಾಯಕಿ ಎಂದು ಹೇಳಲಾಗಿತ್ತು.  ಆದರೆ, ಈ ಚಿತ್ರದಲ್ಲಿ ಶರ್ಮಾ ಮಾಂಡ್ರೆ ಕೂಡ ಇದ್ದಾರೆ. ಡೆವಿಲ್‌ನಲ್ಲಿ ಶರ್ಮಿಳಾ ವಿಶೇಷ ಪಾತ್ರದ ಮೂಲಕ ತೆರೆಮೇಲೆ ಬರುತ್ತಿದ್ದಾರೆ. ಆದ್ರೆ ಸಿನಿಮಾದಲ್ಲಿ ಶರ್ಮಿಳಾ ಅವರ ಪಾತ್ರ  ಹೆಚ್ಚು ಸಮಯ ಇರೋದಿಲ್ಲ. ಆದರೆ, ಅಷ್ಟೆ ಪ್ರಭಾವ ಬೀರುವ ಪಾತ್ರವೇ ಆಗಿದೆ ಅನ್ನೋದು ಗೊತ್ತಾಗಿದೆ.

ಇನ್ನುಡೆವಿಲ್‌ ಸಿನಿಮಾ ಡೈರೆಕ್ಟರ್ ಮಿಲನ ಪ್ರಕಾಶ್ ಶರ್ಮಿಳಾ ಅವರನ್ನ ಆಯ್ಕೆ ಮಾಡಿರುವರ ಬಗ್ಗೆ ಮಾತನಾಡಿದ್ದಾರೆ. ಕಥೆಯನ್ನ ಬರೆದಾಗ ಒಂದು ಪಾತ್ರಕ್ಕೆ ಶರ್ಮಿಳಾನೇ ಬೇಕು ಅಂತ ಫಿಕ್ಸ್ ಆಗಿದ್ದರು. ಹೀಗಾಗಿ ಸಿನಿಮಾ ತಡವಾದ್ಮೇಲೂ ಶರ್ಮಿಳಾ ಅವರೇ ಬೇಕು ಅಂತಲೇ ಹೋಗಿ ಅವರನ್ನೆ ಈ ಒಂದು ಪಾತ್ರಕ್ಕೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

Shwetha M