ಧೂಳೆಬ್ಬಿಸಿದ ದರ್ಶನ್ ಡೆವಿಲ್ ಸಿನಿಮಾ – ಎರಡೇ ದಿನದಲ್ಲಿ ಭರ್ಜರಿ ಕಲೆಕ್ಷನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡೆವಿಲ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡೆವಿಲ್ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಕೂಡಾ ಸೌಂಡ್ ಮಾಡಿದೆ. ಡೆವಿಲ್ ಮೊದಲ ದಿನ 13.5 ಕೋಟಿ ಗಳಿಸಿತ್ತು. ಎರಡನೇ ದಿನವೂ ಹೌಸ್ಫುಲ್ ಪ್ರದರ್ಶನ ಕಂಡಿದೆ. ಶನಿವಾರ ಮತ್ತು ಭಾನುವಾರ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ:ಡೆವಿಲ್ ನೋಡಿ ಬಾವುಕ ಪೋಸ್ಟ್ – ದರ್ಶನ್ ಬಗ್ಗೆ ಪತ್ನಿ ವಿಜಯಲಕ್ಷ್ಮೀ ಹೇಳಿದ್ದೇನು ಗೊತ್ತಾ?
ನಟ ದರ್ಶನ್ ನಟನೆಯ ಡೆವಿಲ್ ಸಿನಿಮಾ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ದರ್ಶನ್ ಸೆಲೆಬ್ರೆಟೀಸ್ ಅಂತೂ ಈ ಚಿತ್ರವನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿದ್ದಾರೆ. ಡಿ ಬಾಸ್ ಗಾಗಿ ಸಿನಿಮಾ ಗೆಲ್ಲಿಸೋ ಹಠ ಅಭಿಮಾನಿಗಳದ್ದು. ಜೊತೆಗೆ ಸಿನಿಮಾ ಕೂಡಾ ಅಭಿಮಾನಿಗಳಿಗೆ ಇಷ್ಟ ಆಗಿದೆ. ಈ ಸಿನಿಮಾ ಮೊದಲ ದಿನ 13.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರೋದಾಗಿ ತಂಡ ಹೇಳಿಕೊಂಡಿದೆ. ಈಗ ಎರಡನೇ ದಿನ ಮೂರುವರೆ ಕೋಟಿ ಗಳಿಕೆ ಕಂಡಿದೆ. ಎರಡನೇ ದಿನವೂ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡಿದೆ. ಈಗಾಗಲೇ 17 ಕೋಟಿ ಗಳಿಕೆ ಕಂಡಿದೆ. ಶನಿವಾರ ಮತ್ತು ಭಾನುವಾರ ಕೂಡಾ ಸಿನಿಮಾ ಥಿಯೇಟರ್ ಹೌಸ್ಫುಲ್ ಆಗುವ ನಿರೀಕ್ಷೆಯಿದೆ.
ದರ್ಶನ್ ಜೈಲಿನಲ್ಲಿ ಇರುವುದರಿಂದ ಸಿನಿಮಾನ ಗೆಲ್ಲಿಸೋ ಜವಾಬ್ದಾರಿ ಅವರ ಅಭಿಮಾನಿಗಳ ಮೇಲೆ ಇದೆ. ಹೀಗಾಗಿ, ಅಭಿಮಾನಿಗಳು ಸಿನಿಮಾನ ಪ್ರಚಾರ ಮಾಡಿದ್ದರು. ಮತ್ತೊಂದೆಡೆ ಡೆವಿಲ್ ನ ಮತ್ತೆ ಮತ್ತೆ ನೋಡುತ್ತಿರುವುದಾಗಿ ಅಭಿಮಾನಿಗಳೇ ಹೇಳಿಕೊಂಡಿದ್ದಾರೆ.

ನೋಡಿರಿ

