ಮಾರ್ಕ್ Vs 45.. ಗೆದ್ದಿದ್ದು ಯಾರು? – 2 ವಾರ.. 3 ಸಿನಿಮಾ.. ಕಲೆಕ್ಷನ್ ಎಷ್ಟು?
ದರ್ಶನ್ ಡೆವಿಲ್ ಕಥೆ ಏನಾಯ್ತು?

ಸ್ಯಾಂಡಲ್ವುಡ್ನಲ್ಲಿ ಡಿಸೆಂಬರ್ನಲ್ಲಿ ಸಿನಿಮಾಗಳ ಸುನಾಮಿ ಎದ್ದಿದೆ ಅಂದ್ರೆ ತಪ್ಪಲ್ಲ. 2 ವಾರದಲ್ಲಿ 3 ಸ್ಟಾರ್ ಹೀರೋಗಳ ಸಿನಿಮಾ ರಿಲೀಸ್ ಆಗಿದೆ. 3 ಸಿನಿಮಾದಲ್ಲಿ 5 ಸ್ಟಾರ್ ಹೀರೋಗಳೇ ಅಭಿಯನ ಮಾಡಿದ್ದಾರೆ. ಡಿಸೆಂಬರ್ 12ಕ್ಕೆ ದರ್ಶನ್ ಅಭಿನಯದ ಡೆವಿಲ್ ರಿಲೀಸ್ ಆದ್ರೆ, ಡಿಸೆಂಬರ್ 25ಕ್ಕೆ ಸುದೀಪ್ ಅವರ ಮಾರ್ಕ್ಹಾಗೂ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿಯ 45 ಸಿನಿಮಾ ರಿಲೀಸ್ ಆಗಿದೆ. ಇದ್ರಲ್ಲಿ ಮಾರ್ಕ್ ಹಾಗೂ 45 ಸಿನಮಾ ಒಂದೇ ದಿನ ರಿಲೀಸ್ ಆಗಿದ್ದು, ಯಾವ ಸಿನಿಮಾ ಚೆನ್ನಾಗಿದೆ. ಯಾವ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದೆ ಅನ್ನೋ ಕ್ಯೂರಿಯಾಸಿಟಿ ಫ್ಯಾನ್ಸ್ಗೂ ಇದೆ.
ಕ್ರಿಸ್ ಮಸ್ ಬಂದ್ರೆ ಸಿನಿಮಾಗಳ ಸುಗ್ಗಿ ಅಂತನೇ ಹೇಳಬಹುದು. ಕ್ರಿಸ್ಮಸ್ಗೆ ರಜೆ ಇರೋದ್ರಿಂದ ಪ್ರೇಕ್ಷಕರು ಸಿನಿಮಾ ನೋಡ್ತಾರೆ ಅಂತ ಡಿಸೆಂಬರ್ನಲ್ಲೇ ಸ್ಟಾರ್ ನಟರ ಸಿನಿಮಾ ರಿಲೀಸ್ ಆಗುತ್ತೆ. ಅದರಂತೆ ಈ ವರ್ಷ ಕೂಡ ಸ್ಯಾಂಡಲ್ವುಡ್ನಲ್ಲಿ 3 ಸ್ಟಾರ್ ನಟರ ಸಿನಿಮಾ ರಿಲೀಸ್ ಆಗಿದೆ. ಡೆವಿಲ್ ರಿಲೀಸ್ ಆಗಿ ಎರಡು ವಾರ ಕಳೆದ್ರೆ, ಮಾರ್ಕ್ ಮತ್ತು 45 ರಿಲೀಸ್ ಗುರುವಾರ ರಿಲೀಸ್ ಆಗಿದೆ. ಆದ್ರೆ ಈಗ ಡೆವಿಲ್ ಅಬ್ಬರ ಡಲ್ ಆಗಿದೆ. ಯಾಕಂದ್ರೆ ರಿಲೀಸ್ ಆಗಿ ಎರಡು ವಾರ ಕಳೆದಿದ್ರಿಂದ ಅದ್ರ ಕ್ರೇಜ್ ಕಮ್ಮಿಯಾಗಿದೆ. ಡೆವಿಲ್ ಇರೋ ಥಿಯೇಟರ್ನಲ್ಲಿ ಮಾರ್ಕ್ ಮತ್ತು 45 ಅಬ್ಬರ ಜೋರಾಗಿದೆ. ಹಾಗಿದ್ರೆ ಈ ಎರಡು ಸಿನಿಮಾದಲ್ಲಿ ಯಾವ ಸಿನಿಮಾದ ಕ್ರೇಜ್ ಹೆಚ್ಚಿದೆ ಅನ್ನೋದ್ದನ್ನ ನೋಡೋಣ.
ನಾನು 45 ಮತ್ತು ಮಾರ್ಕ್ ಎರಡು ಸಿನಿಮಾವನ್ನ ನೋಡ್ದೆ. ಆದ್ರೆ ನನಗೆ ಅನ್ಸಿದ್ದು, ಎರಡು ಸಿನಿಮಾ ಕೂಡ ಚೆನ್ನಾಗಿದೆ. ಎರಡು ಬೇರೆ ಬೇರೆ ತರ ಸ್ಟೋರಿ ಆಗಿರೋದ್ರಿಂದ ಎರಡು ಸಿನಿಮಾಕ್ಕೆ ಹೋಲಿಕೆ ಮಾಡೋದ್ದಕ್ಕೆ ಆಗಲ್ಲ. ಮಾರ್ಕ್ನಲ್ಲಿ ಕಿಚ್ಚ ಪೊಲೀಸ್ ಆಫೀಸರ್ ಆಗಿ ಮಿಂಚಿ ಆ್ಯಕ್ಷನ್ ಮೂಲಕ ಅಬ್ಬರಿಸಿದ್ರೆ, ಮಾರ್ಕ್ನಲ್ಲಿ ಉಪ್ಪಿ ಶಿವಣ್ಣ ಮತ್ತು ರಾಜ್ ಬಿ ಶೆಟ್ಟಿ ಪ್ರೇಕ್ಷಕರಿಗೆ ಹೊಸ ಜಗತನ್ನೇ ತೋರಿಸಿದ್ದಾರೆ. 45 ಸಿನಿಮಾದಲ್ಲಿ ಶಿವಣ್ಣನ 11 ಅವತಾರ, ಶಿವತಾಂಡವ ಪ್ರೇಕ್ಷರಿಗೆ ಸಖತ್ ಇಷ್ಟ ಆಗುತ್ತೆ.
ಇದನ್ನೂ ಓದಿ: ಮಾರ್ಕ್ಗೆ ಫುಲ್ ಮಾರ್ಕ್ಸ್ – MAX ಕಥೆಯಂತೆ ಇದ್ಯಾ?, MARK ರಿವ್ಯೂ
ಮಾರ್ಕ್ ಕಲೆಕ್ಷನ್ ಬಗ್ಗೆ ನೋಡೋದಾದ್ರೆ, ಮ್ಯಾಕ್ಸ್ ನಂತರ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಕಾಂಬಿನೇಷನ್ನಲ್ಲಿ ಬಂದ ಮಾರ್ಕ್ ಸಿನಿಮಾವು ಕನ್ನಡ ಮತ್ತು ತಮಿಳಿನಲ್ಲಿ ತೆಲೆ ಮೇಲೆ ಅಬ್ಬರಿಸುತ್ತಿದೆ. ಆದರೆ ತಮಿಳಿಗಿಂತ ಕನ್ನಡದಲ್ಲಿ ಹೆಚ್ಚು ಗಳಿಕೆ ಮಾಡಿದೆ. ಗುರುವಾರ ಬೆಳಗಿನಜಾವದಿಂದಲೇ ಪ್ರದರ್ಶನ ಆರಂಭಿಸಿದ ಮಾರ್ಕ್ ಸಿನಿಮಾವು ಸುಮಾರು ಭಾರತದಾದ್ಯಂತ ಸುಮಾರು 6.5ಕೋಟಿ ರೂ. ಗಳನ್ನು ಬಾಚಿಕೊಂಡಿದೆ. ಇದು ಮೊದಲ ದಿನದ ಕಲೆಕ್ಷನ್, ಕ್ರಿಸ್ಮಸ್ ರಜೆ ಇರೋದ್ರಿಂದ ಕ್ರೇಜ್ ಜಾಸ್ತಿನೇ ಇತ್ತು. ಇವತ್ತು ನಾಳೆ ನಾಡಿದ್ದು ವೀಕೆಂಡ್ ಇರೋದ್ರಿಂದ ಕಲೆಕ್ಷನ್ ಇನ್ನೂ ಹೆಚ್ಚಾಗುತ್ತೆ. ಸೋಮವಾರದ ವೇಳೆಗೆ 25 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಲಿದೆ ಮಾರ್ಕ್. ಚಿತ್ರತಂಡ ಈವರೆಗೂ ತಮ್ಮ ಕಲೆಕ್ಷನ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ . .
ಇನ್ನೂ 45 ಸಿನಿಮಾದ ವಿಚಾರಕ್ಕೆ ಬಂದ್ರೆ ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಕಾಂಬಿನೇಷನ್ನ ʻ45ʼ ಸಿನಿಮಾವು ಡಿಸೆಂಬರ್ 24ರಿಂದಲೇ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಿತ್ತು. ಈ ಚಿತ್ರವು ಪೇಯ್ಡ್ ಪ್ರೀಮಿಯರ್ ಶೋಗಳ ಗಳಿಕೆಯೂ ಸೇರಿ ಮೊದಲ ದಿನ 4.5 ಕೋಟಿ ರೂ.ಗಳನ್ನು ಬಾಕ್ಸ್ ಆಫೀಸ್ನಲ್ಲಿ ಬಾಚಿಕೊಂಡಿದೆ. ಆದ್ರೆ 2ನೇ ದಿನ ಸ್ವಲ್ಪ ಕಲೆಕ್ಷನ್ ಡಲ್ ಆಗಿದೆ. ಆದ್ರೆ ಶನಿವಾರ ಭಾನುವಾರ 45 ಸಿನಿಮಾದ ಕಲೆಕ್ಷನ್ ಹೆಚ್ಚಲಿದೆ. ಇದು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದೆ. ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾಗೆ ರಮೇಶ್ ರೆಡ್ಡಿ ಅವರು ಭರ್ಜರಿಯಾಗಿಯೇ ಹಣ ಹಾಕಿದ್ದಾರೆ. ವಿಎಫ್ಎಕ್ಸ್ ಕೆಲಸಗಳಿಗೇ ಕೋಟ್ಯಂತರ ಹಣ ಹಾಕಲಾಗಿದೆ. ಫ್ಯಾಂಟಸಿ ಥ್ರಿಲ್ಲರ್ ಮಾದರಿಯ ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರು ನಾನಾ ಅವತಾರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ.
ಇನ್ನು ಡೆವಿಲ್ ಸಿನಿಮಾ 15ನೇ ದಿನ 24 ಲಕ್ಷ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾ ಶೋಗಳ ಸಂಖ್ಯೆಯಲ್ಲಿ ಇಳಿಕೆ ಆದರೂ ಕೆಲವು ಶೋಗಳು ಹೌಸ್ಫುಲ್ ಆಗಿವೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಈ ಚಿತ್ರದ ಒಟ್ಟು ಕಲೆಕ್ಷನ್ 33.83 ಕೋಟಿ ರೂಪಾಯಿ ಆಗಿದೆ ಎನ್ನಬಹುದು. ಆದ್ರೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ. ಕ್ರಿಸ್ಮಸ್ ವೀಕೆಂಡ್ನಲ್ಲಿ ಪ್ರೇಕ್ಷಕರ ಸಂಖ್ಯೆ ಅಧಿಕಗೊಂಡರೆ ಮಾರ್ಕ್ ಮತ್ತು 45 ಸಿನಿಮಾ ಗಳಿಕೆಯಲ್ಲಿ ಬಾರಿ ಏರಿಕೆ ಕಾಣಬಹುದು. 3 ಸಿನಿಮಾ ಯಾವ ಸಿನಿಮಾ ಚೆನ್ನಾಗಿ ಅಂತ ನನ್ನ ಕೇಳಿದ್ರೆ 3 ಸಿನಿಮಾ ಕೂಡ ಚೆನ್ನಾಗಿದೆ. ಯಾಕಂದ್ರೆ 3 ಸಿನಿಮಾ ಕೂಡ ನಮ್ಮ ಕನ್ನಡದ ಸಿನಿಮಾ.

ನೋಡಿರಿ

