ಡಿ ಬಾಸ್ Devil day – ದಚ್ಚು ಡಬಲ್ ಧಮಾಕಾ, ಕಾಟೇರ ದಾಖಲೆ ಮುರಿಯುತ್ತಾ?

ಡಿ ಬಾಸ್ Devil day – ದಚ್ಚು ಡಬಲ್ ಧಮಾಕಾ, ಕಾಟೇರ ದಾಖಲೆ ಮುರಿಯುತ್ತಾ?

ಸ್ಯಾಂಡಲ್‌ವುಡ್‌ನಲ್ಲಿ ಡೆವಿಲ್ ಹವಾ ಜೋರಾಗಿದೆ.  ಹಾಗಿದ್ರೆ ಡೆವಿಲ್‌ ಕಥೆ ಏನು? ಡೆವಿಲ್ ನೋಡಿದ ಫ್ಯಾನ್ಸ್‌ ಹೇಳುತ್ತಿದ್ದಾರೆ ಅನ್ನೋದ್ದನ್ನ ನೋಡೋಣ.  ಡಿ ಬಾಸ್ ಫ್ಯಾನ್ಸ್ ಅಬ್ಬರ ನೋಡಿ ದರ್ಶನ್‌ ಜೈಲಿಗೆ ಹೋಗಿಲ್ಲ ಇಲ್ಲೇ ಇಲ್ಲೇ ಥಿಯೇಟರ್‌ನಲ್ಲಿ ಇದ್ದಾರೇನೋ ಅಂತ ಅನಿಸುತಿತ್ತು.  ಮಾಸ್ ಡೈಲಾಗ್, ಟ್ವಿಸ್ಟ್​ಗಳನ್ನು ಒಳಗೊಂಡ ಕಥೆಗಳ ಮೂಲಕ ಫ್ಯಾನ್ಸ್​ಗೆ ಮಿಲನ ಪ್ರಕಾಶ್ ಖುಷಿ ನೀಡಿದ್ದಾರೆ. ಅದರಲ್ಲೂ ತೆರೆ ಮೇಲೆ ಇದ್ರೆ ನೆಮ್ದಿಯಾಗ್ ಇರ್‌ಬೇಕ್ ಅಂತ ದರ್ಶನ್ ಬರುತ್ತಿದ್ದಂತೇನೆ, ಅಭಿಮಾನಿಗಳು ಸ್ಕ್ರೀನ್ ಮುಂದೆ ಹೋಗಿ ಕುಣಿದು ಕುಪ್ಪಳಿಸಿದ್ರು.  ಅಲ್ಲಿಯೇ ದರ್ಶನ್ ರೀತಿನೆ ಡ್ಯಾನ್ಸ್ ಮಾಡೋ ಪ್ರಯತ್ನ ಮಾಡಿದ್ದಾರೆ. ಇದ್ರೆ ನೆಮ್ದಿಯಾಗ್ ಇರ್‌ಬೇಕ್ ಅಂತಲೂ ಹಾಡಿದ್ದಾರೆ. ಸಿನಿಮಾ ಸ್ಟಾರ್ಟಿಂಗ್‌ನಿಂದ ಎಂಡ್ ತನಕ ಥಿಯೇಟರ್‌ನಲ್ಲಿ ದರ್ಶನ್ ಫ್ಯಾನ್ಸ್‌ ಅಬ್ಬರ ಜೋರಾಗಿತ್ತು.

ಇನ್ನೂ ಫಸ್ಟ್‌ ಡೇ ಫಸ್ಟ್‌ ಶೋನಾ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್‌, ನಟ ಧನ್ವೀರ್‌, ರಚಿತಾ ರೈ ಕೂಡ ಥಿಯೇಟರ್‌ಗೆ ಬಂದು, ಫ್ಯಾನ್ಸ್‌ ಜೊತೆ ನೋಡಿದ್ರು..  ಮತ್ತೊಂದೆಡೆ ದಾಸನ ಪತ್ನಿ ವಿಜಯಲಕ್ಷ್ಮೀ ಮುಖದಲ್ಲಿ ಸಂಭ್ರಮ ಎದ್ದು ಕಾಣುತ್ತಿತ್ತು. ಗಂಡನ ಸಿನಿಮಾ ಸೂಪರ್ ಹಿಟ್ ಆಗೋದು ಗ್ಯಾರಂಟಿ ಎಂಬ ಖುಷಿ ಅವರಲ್ಲಿತ್ತು. . ಈ ವೇಳೆ ದಾಸನ ಅಭಿಮಾನಿಗಳು ಕೊನೆವರೆಗೂ ನಾವು ನಿಮ್ಮ ಜೊತೆ ಇದ್ದೇವೆ ಎಂಬ ಘೋಷಣೆ ಕೂಗಿದರು. ಆಗ ವಿಜಯಲಕ್ಷ್ಮೀ ಕೂಡಾ ಅಭಿಮಾನಿಗಳ ಅಭಿಮಾನಕ್ಕೆ ಕೈ ಮುಗಿದು ಧನ್ಯವಾದ ಹೇಳಿದರು.:

ಇದನ್ನೂ ಓದಿ : ಅಶ್ವಿನಿ ಗೌಡ ಮತ್ತು ಗಿಲ್ಲಿ ಬೊಂಬಾಟ್ ಜೋಡಿ – ಅಶ್ವಿನಿ ಮೇಡಂ ಜುಟ್ಟು ಗಿಲ್ಲಿ ಕೈಯಲ್ಲಿ..!

ದರ್ಶನ್ 2011 ರಲ್ಲಿ ಜೈಲಿಗೆ ಹೋದಾಗ ಹೇಗೆ ಸಾರಥಿ ಸಿನಿಮಾಕ್ಕೆ ರೆಸ್ಪಾನ್ಸ್ ಸಿಕ್ಕಿತ್ತೋ ಅದೇ ತರ ಡೆವಿಲ್ ಸಿನಿಮಾಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನಿರ್ದೇಶಕ ಪ್ರಕಾಶ್ ವೀರ್ ಆಕ್ಷನ್ ಕಟ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.  ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ, ಅಚ್ಯುತ್ ಕುಮಾರ್, ವಿನಯ್ ಗೌಡ, ಗಿಲ್ಲಿ ನಟ ಸೇರಿದಂತೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನೂ ಡೆವಿಲ್ ಕಥೆ ಬಗ್ಗೆ ಹೇಳುವುದಾದ್ರೆ ಕಥೆ ಸೂಪರ್ ಆಗಿದೆ. ಆದ್ರೆ ಏನ್ ಕಥೆ ಅನ್ನೋದನ್ನಾ ನಾನು ಇಲ್ಲಿ ಹೇಳಲ್ಲ. ನೀವು ಥಿಯೇಟರ್‌ಗೆ ಹೋಗಿ ನೋಡಬೇಕು..   ನಟ ದರ್ಶನ್‌ ಅವರ ಸಿನಿಮಾ ಎಂಟ್ರಿ ಸೀಸ್ ಸೂಪರ್ ಆಗಿದೆ.  ದರ್ಶನ್ ಇಲ್ಲಿ  ಡಬಲ್‌ ಆಕ್ಟಿಂಗ್‌ ಮಾಡಿದ್ದಾರೆ. ಇದು ಪ್ರೇಕ್ಷಕರಿಗೆ ಇಷ್ಟ ಆಗಿದೆ.  ಕಾಮಿಡಿ ವಿಚಾರಕ್ಕೆ ಬಂದ್ರೆ ಬಿಗ್‌ಬಾಸ್‌ನಲ್ಲಿ ಕಮಾಲ್ ಮಾಡ್ತಿರೋ  ಗಿಲ್ಲಿ ನಟ ಚಿಂದಿ ಉಡಾಯಿಸಿದ್ದಾರೆ. ಇದು ಕಮರ್ಷಿಯಲ್‌ ಆಕ್ಷನ್‌ ಸಿನಿಮಾವಾಗಿದ್ದು, ಫಸ್ಟ್‌ ಹಾಫ್‌ ಚೆನ್ನಾಗಿದೆ, ಇಂಟ್ರಡಕ್ಷನ್‌ ಚೆನ್ನಾಗಿದೆ. ನಿರ್ದೇಶಕ ಪ್ರಕಾಶ್ ಅವರು ಕಥೆಯನ್ನ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಟ್ಟು ತೆಗೆದುಕೊಂಡು ಹೋಗಿದ್ದಾರೆ. ದರ್ಶನ್ ಜೈಲಿನಿಂದ ಬಿಡುಗಡೆಯಾದ್ರೂ ಮೇಲೆ ಬೆನ್ನು ನೋವು ಇದ್ದರು ಕೂಡ ಸಖತ್‌ ಆ್ಯಕ್ಟಿಂಗ್ ಮಾಡಿದ್ದಾರೆ. ದರ್ಶನ್ ಸಿನಿಮಾ ಅಂತ ನೀರಿಕ್ಷೆ ಇಟ್ಟು ಹೋದವರಿಗೆ ಈ ಸಿನಿಮಾ ಮೋಸ ಮಾಡಲ್ಲ.

 

Kishor KV