ಎಲ್ಒಸಿ ಬಳಿ ಮೂಲಸೌಕರ್ಯ ಅಭಿವೃದ್ಧಿಗೆ ಚೀನಾ ನೆರವು ನೀಡಿದೆ- ಜಮ್ಮು ಸಿಎಂ ಒಮರ್ ಅಬ್ದುಲ್ಲಾ

ಎಲ್ಒಸಿ ಬಳಿ ಮೂಲಸೌಕರ್ಯ ಅಭಿವೃದ್ಧಿಗೆ ಚೀನಾ ನೆರವು ನೀಡಿದೆ- ಜಮ್ಮು ಸಿಎಂ ಒಮರ್ ಅಬ್ದುಲ್ಲಾ

ಎಲ್ಒಸಿ ಬಳಿ ಮೂಲಸೌಕರ್ಯ ಅಭಿವೃದ್ಧಿಗೆ ಚೀನಾ ನೆರವು ನೀಡಿದೆ. ಇದು ಪ್ರಪಂಚಕ್ಕೆ ಒಳ್ಳೆಯ ಸಂದೇಶ ನೀಡುವ ಉದ್ದೇಶದಿಂದ ಎಲ್‌ಒಸಿ ಬಳಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಚೀನಾ ಸಹಾಯ ಮಾಡಿದೆ  ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಪಿಒಕೆ ಒಳಗಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಆದರೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಅವರು ಒಳ್ಳೆಯ ಕೋಟ್ ಧರಿಸಿದ್ದರೂ ಅವರ ಬಳಿ ಒಂದು ಪೈಸೆಯೂ ಇಲ್ಲ. ನಾವು ಈ ಪರಿಸ್ಥಿತಿಯನ್ನು ಸುಧಾರಿಸಲು ಯಾವುದೇ ದೇಶದಿಂದ ಹಣಕಾಸಿನ ನೆರವು ಕೇಳಲಿಲ್ಲ ಮತ್ತು ನಾವು ಏನು ಮಾಡಿದ್ದೇವೆಯೋ ಅದು ನಮ್ಮದೇ ಆದ ಪ್ರಯತ್ನವಾಗಿದೆ” ಎಂದರು.

ಎಲ್ಒಸಿಯ ಇತರ ಪ್ರದೇಶಗಳಿಗೆ ಹೋಲಿಸಿದರೆ ಕೇರನ್ ಪ್ರದೇಶವು ಉತ್ತಮ ಪರಿಸ್ಥಿತಿ ಹೊಂದಿಲ್ಲ ಎಂಬ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಭಾರತೀಯ ಜನತಾ ಪಕ್ಷದ ಶಾಸಕರು ವಾಕ್ಸಮರದ ನಂತರ ಸದನದಲ್ಲಿನ ಪರಿಸ್ಥಿತಿಯನ್ನು ಒಮರ್ ಅಬ್ದುಲ್ಲಾ ತಿಳಿಗೊಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಟ್ರೆಹ್‌ಗಾಮ್‌ನ ಎನ್​ಸಿ ಶಾಸಕ ಮಿರ್ ಸೈಫುಲ್ಲಾ ಅವರು, ಎಲ್‌ಒಸಿಯ ಇತರ ಭಾಗಗಳಿಗೆ ಹೋಲಿಸಿದರೆ ಕೇರನ್‌ನಲ್ಲಿ ವಾಸಿಸುವುದು ತುಂಬ ಕಷ್ಟಕರವಾಗಿದೆ ಎಂದು ಹೇಳಿದರು. ಈ ಹೇಳಿಕೆಯನ್ನು ರಣಬೀರ್ ಸಿಂಗ್ ಪಠಾನಿಯಾ ಸೇರಿದಂತೆ ಬಿಜೆಪಿ ಶಾಸಕರು ವಿರೋಧಿಸಿದರು.

ಉತ್ತರ ಜಮ್ಮು ಕ್ಷೇತ್ರದ ಬಿಜೆಪಿ ಶಾಸಕ ಶಾಮ್ ಲಾಲ್ ಶರ್ಮಾ, ಲೆಫ್ಟಿನೆಂಟ್ ಗವರ್ನರ್ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡುತ್ತಾ, ಮೀರ್ ಸೈಫುಲ್ಲಾ ಅವರ ಹೇಳಿಕೆಗಳನ್ನು ಪ್ರಸ್ತಾಪಿಸಿದರು. ಆದರೆ ಎನ್‌ಸಿ ಶಾಸಕರು ಅದನ್ನು ನಿರಾಕರಿಸಿ, ಅವರು ಹಾಗೆ ಹೇಳಿಲ್ಲ ಎಂದರು.

ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಧ್ಯಪ್ರವೇಶಿಸಿ, “ಗುರೇಜಿ ಹೇಳಿದ್ದು ಸರಿ, ಆದರೆ ಅದು ಅರ್ಧ ಸತ್ಯ. ಪಿಒಕೆ ಒಳಗಿನ ಜೀವನ ತುಂಬಾ ಕೆಟ್ಟದಾಗಿದೆ ಮತ್ತು ಎಲ್‌ಒಸಿ ಗಡಿಯ ಇತರ ಪ್ರದೇಶಗಳ ಜನರಿಗೆ ಉತ್ತಮ ರಸ್ತೆಗಳು, ಕಟ್ಟಡಗಳನ್ನು ನಿರ್ಮಿಸಿದವರು ಮತ್ತು ಕೋಟುಗಳನ್ನು ನೀಡಿದವರು ಯಾರು ಎಂದು ನಮಗೆ ತಿಳಿದಿದೆ. ಅವರಿಗೆ ಸಹಾಯ ಮಾಡಿದ್ದು ಚೀನಾ” ಎಂದರು.

 

 

Kishor KV

Leave a Reply

Your email address will not be published. Required fields are marked *