ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ – ಶನಿವಾರ ಅಥವಾ ಭಾನುವಾರ ಡಿಸ್ಚಾರ್ಜ್
ಅನಾರೋಗ್ಯದಿಂದ ಅಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಶನಿವಾರ ಅಥವಾ ಭಾನುವಾರ ದೇವೇಗೌಡ ಅವರನ್ನು ಡಿಸ್ಚಾರ್ಜ್ ಮಾಡಬಹುದು ಎಂದು ವರದಿಯಾಗಿದೆ.
ಕಳೆದ ಗುರುವಾರ ಹೆಚ್.ಡಿ ದೇವೇಗೌಡ ಅವರ ಆರೋಗ್ಯದಲ್ಲಿ ಏರಿಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಿದ್ದಾರೆ. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಇದನ್ನೂ ಓದಿ : ಇನ್ನುಮುಂದೆ ಬಾಲರಾಮನಿಗೆ ಪ್ರತಿದಿನ 1 ಗಂಟೆ ವಿಶ್ರಾಂತಿ!
ಆರೋಗ್ಯ ಸ್ಥಿತಿಯ ಬಗ್ಗೆ ನಿಗಾವಹಿಸಲು ಆಸ್ಪತ್ರೆಯಲ್ಲಿಯೇ ಇರಿಸಿಕೊಳ್ಳಲಾಗಿದೆ. ಶನಿವಾರ ಅಥವಾ ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆಯಿದೆ. ದೇವೇಗೌಡ ಅವರು ತೀವ್ರ ಓಡಾಟ ನಡೆಸಿದ್ದರಿಂದ ದೈಹಿಕವಾಗಿ ತೀವ್ರ ಆಯಾಸಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೇವೇಗೌಡರು, ಶುಕ್ರವಾರ ಬೆಳಗ್ಗೆ ತಮ್ಮ ವಾರ್ಡ್‌ನಲ್ಲಿ ಎಂದಿನಂತೆ ದಿನಪತ್ರಿಕೆಗಳತ್ತ ಕಣ್ಣು ಹಾಯಿಸಿದರು. ಬಳಿಕ ಕೆಲಹೊತ್ತು ಟಿವಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಮಂಡನೆಯನ್ನ ವೀಕ್ಷಿಸಿದರು ಎಂದು ಮೂಲಗಳು ತಿಳಿದಿವೆ.