WTCಯಲ್ಲಿ ರಿಷಭ್ ಪಂತ್ ನಂ.1 – ತಂದೆಗೆ ತಕ್ಕ ಮಗ ಜೂ. ಸೆಹ್ವಾಗ್
ತಂದೆಗೆ ತಕ್ಕ ಮಗ ಜೂ. ಸೆಹ್ವಾಗ್

WTCಯಲ್ಲಿ ರಿಷಭ್ ಪಂತ್ ನಂ.1 –  ತಂದೆಗೆ ತಕ್ಕ ಮಗ ಜೂ. ಸೆಹ್ವಾಗ್ತಂದೆಗೆ ತಕ್ಕ ಮಗ ಜೂ. ಸೆಹ್ವಾಗ್

 

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರದ ಬ್ಯಾಟಿಂಗ್‌ನೊಂದಿಗೆ ಪಡಿಕ್ಕಲ್ ಭಾರತ ಟೆಸ್ಟ್ ತಂಡದ ಮೂರನೇ ಕ್ರಮಾಂಕವನ್ನು ಭದ್ರಪಡಿಸಿಕೊಂಡಿದ್ದಾರೆ. ಈ ಭರ್ಜರಿ ಪ್ರದರ್ಶನದಿಂದಾಗಿ, ಗಾಯದ ಸಮಸ್ಯೆಯಿಂದ ಹೊರಗುಳಿದಿರುವ ತಮಿಳುನಾಡಿನ ಸಾಯಿ ಸುದರ್ಶನ್ ಅವರು ಸಂಪೂರ್ಣ ಫಿಟ್ ಆಗಿ ಮರಳಿದರೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯುವುದು ಕಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.

ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಉದಯೋನ್ಮುಖ ತಾರೆ, ಯುವ ವಿಕೆಟ್‌ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಸೆಂಚುರಿಯೊಂದಿಗೆ ಜುರೆಲ್ ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಅವರ 16 ವರ್ಷಗಳ ಹಳೆಯ ದಾಖಲೆಯೊಂದನ್ನು ಅಳಿಸಿ ಹಾಕಿದ್ದಾರೆ.   ಮೂರಂಕಿ ಮೊತ್ತ ಗಳಿಸುವ ಮೂಲಕ ಶ್ರೀಲಂಕಾದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎನಿಸಿಕೊಂಡರು.

ಇದನ್ನೂ ಓದಿ: ಜೆರ್ಸಿ ನಂಬರ್ ಮುಚ್ಚಿಕೊಂಡು ಆಡಿದ ವೈಭವ್ – ಸೂರ್ಯವಂಶಿಗೆ ‘3’ ಸಂಖ್ಯೆ ಲಕ್ಕಿನಾ?

ಜುರೇಲ್ ತಮ್ಮ ಎಡಗೈ ಬೈಸೆಪ್ಸ್ ಮೇಲೆ ಜೈ ಜವಾನ್, ಜೈ ಕಿಸಾನ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದು, ಆ ಟ್ಯಾಟೂ ಫೋಟೋ ಇದೀಗ ವೈರಲ್ ಆಗಿದೆ. ಈ ಬಗ್ಗೆ ಜುರೇಲ್‌ ಮಾತನಾಡಿ ನನ್ನ ಅಜ್ಜ ಒಬ್ಬ ರೈತ ಮತ್ತು ನನ್ನ ತಂದೆ ಸೈನಿಕ. ಆದ್ದರಿಂದ ನಾನು ಎಲ್ಲಿಂದ ಬಂದೆ ಎಂಬುದರ ಅಡಿಪಾಯ ಅದು. ನಾನು ಅದನ್ನು ಮರೆಯಲು ಬಯಸುವುದಿಲ್ಲ. ಹೀಗಾಗಿ ನಾನು ಈ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದಿದ್ದಾರೆ.

ಲಂಕಾ ವಿರುದ್ಧದ ಕೊಲಂಬೊ ಟೆಸ್ಟ್​ನಲ್ಲಿ 63 ರನ್​ಗಳ ಇನ್ನಿಂಗ್ಸ್ ಆಡಿದ ರಿಷಭ್ ಪಂತ್, ಡಬ್ಲ್ಯೂಟಿಸಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಂತ್​ಗೂ ಮೊದಲು ಈ ಪಟ್ಟಿಯಲ್ಲಿ ನಾಯಕ ಶುಭ್​ಮನ್ ಗಿಲ್ ಇದ್ದರು. ಇದೀಗ ಗಿಲ್​ರನ್ನು ಹಿಂದಕ್ಕೆ ತಳ್ಳುವಲ್ಲಿ ಪಂತ್ ಯಶಸ್ವಿಯಾಗಿದ್ದಾರೆ. ಗಿಲ್ 76 ಇನ್ನಿಂಗ್ಸ್​ಗಳಲ್ಲಿ 2,917 ರನ್ ಬಾರಿಸಿದ್ದಾರೆ. ಮತ್ತೊಂದೆಡೆ, ಪಂತ್ 74 ಇನ್ನಿಂಗ್ಸ್ ಗಳಲ್ಲಿ 2,948 ರನ್ ಗಳಿಸುವ ಮೂಲಕ ಗಿಲ್​ರನ್ನು ಹಿಂದಿಕ್ಕಿದ್ದಾರೆ.

ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ನ 2ನೇ ದಿನದಂದ   ಪಂತ್ ಬಾರಿಸಿದ 95 ಮೀಟರ್‌ಗಳ ಬೃಹತ್ ಸಿಕ್ಸರ್, ಎಸ್‌ಎಸ್‌ಸಿ ಕ್ರೀಡಾಂಗಣದ ಛಾವಣಿಯಲ್ಲಿದ್ದ ಸೋಲಾರ್ ಪ್ಯಾನಲ್ ಅನ್ನು ಪುಡಿಪುಡಿ ಮಾಡಿದೆ. ಈ ಹಿಂದೆ ಡ್ರೋನ್ ಕೆಡವಿದ್ದ ಪಂತ್, ಈಗ ಲಂಕಾದಲ್ಲಿ ಸೋಲಾರ್ ಪ್ಯಾನಲ್ ಪುಡಿಮಾಡಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನಿಂಗ್ಸ್ ಜಯ ಸಾಧಿಸಲಿದೆ ಎಂದು ಮಾಜಿ ಆಟಗಾರ ಚೇತೇಶ್ವರ ಪೂಜಾರ ಭವಿಷ್ಯ ನುಡಿದಿದ್ದಾರೆ. ನಮ್ಮ ಬ್ಯಾಟರ್‌ಗಳು ಸ್ಕೋರ್ ಬೋರ್ಡ್‌ನಲ್ಲಿ ಈಗಾಗಲೇ ಭಾರಿ ಮೊತ್ತವನ್ನು ಕಲೆಹಾಕಿದ್ದಾರೆ. 3ನೇ ದಿನದಂದು ಭಾರತೀಯ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಪ್ರದರ್ಶಿಸಿದರೆ, ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಅಂತರದಿಂದಲೇ ಗೆಲ್ಲಲಿದೆ ಎಂದಿದ್ದಾರೆ.

ಕೊಲಂಬೊ ಟೆಸ್ಟ್‌ನ 2ನೇ ದಿನದಾಟದಲ್ಲಿ ಭಾರತ 503/9 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡ ನಂತರ, ಮಂದಬೆಳಕಿನಲ್ಲೂ ಆಟ ಮುಂದುವರಿಸಿದ ಅಂಪೈರ್‌ಗಳ ನಿರ್ಧಾರ ವಿವಾದಕ್ಕೆ ಕಾರಣವಾಯಿತು. ಕೊನೆಯ ಕ್ಷಣದಲ್ಲಿ ಎಲ್‌ಬಿಡಬ್ಲ್ಯೂ ಆದ ಲಂಕಾ ಬ್ಯಾಟರ್ ಪ್ರಭಾತ್ ಜಯಸೂರ್ಯ ಕೋಪದಿಂದ ಗ್ಲೌಸ್ ಎಸೆದು ಅಸಮಾಧಾನ ವ್ಯಕ್ತಪಡಿಸಿದರು.

ಓಪನರ್ ವೀರೇಂದ್ರ ಸೆಹ್ವಾಗ್ ಅವರ ಬ್ಯಾಟಿಂಗ್ ಶೈಲಿಯನ್ನು ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೀಗ ಅವರ ಪುತ್ರ 18 ವರ್ಷದ ಆರ್ಯವೀರ್ ಸೆಹ್ವಾಗ್ ಮೈದಾನದಲ್ಲಿ ಅಪ್ಪನ ಬ್ಯಾಟಿಂಗ್ ಶೈಲಿಯನ್ನು ಮರುಸೃಷ್ಟಿಸುವ ಮೂಲಕ ಇಡೀ ಕ್ರಿಕೆಟ್ ಜಗತ್ತನ್ನು ಆಶ್ಚರ್ಯಚಕಿತಗೊಳಿಸಿದ್ದಾರೆ.  ಸೆಹ್ವಾಗ್ ಅವರ ಸ್ಕ್ವೇರ್ ಡ್ರೈವ್ ಮತ್ತು ಕವರ್ ಡ್ರೈವ್ ಸೇರಿದಂತೆ ಕೆಲವು ಐಕಾನಿಕ್ ಶಾಟ್‌ಗಳನ್ನು ಅವರ ಮಗ  ಪುನರಾವರ್ತಿಸಿದ್ದು, ಸಖತ್ ವೈರಲ್ ಆಗ್ತಿದೆ.

ದುಲೀಪ್ ಟ್ರೋಫಿಯಲ್ಲಿ ಆಡ್ತಿರೋ ವೈಭವ್ ಸೂರ್ಯವಂಶಿ ಜರ್ಸಿಯಲ್ಲಿನ ಒಂದು ಸಂಖ್ಯೆಯ ಮೇಲೆ ಟೇಪ್ ಅಂಟಿಸಲಾಗಿದ್ದು, ಇದು ಯಾಕೆ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ.  ಜರ್ಸಿ ಮೇಲೆ ಎರಡು ನಂಬರ್ ಇದ್ದು, ಒಂದು ನಂಬರ್ ಮೇಲೆ ಟೇಪ್ ಅಂಟಿಸಲಾಗಿದೆ, ಕೇವಲ ‘3’ ಎಂಬ ಸಂಖ್ಯೆ ಮಾತ್ರ ಕಾಣುವಂತಿದೆ. ಹೀಗೆ ಟೇಪ್ ಅಂಟಿಸಲು ನಿಖರವಾದ ಕಾರಣ ತಿಳಿದು ಬಂದಿಲ್ಲ.

ಭಾರತ ತಂಡಕ್ಕೆ ಮರಳುವ ಆಸೆ ಹೊಂದಿದ್ದ ಮೊಹಮ್ಮದ್ ಶಮಿ ದುಲೀಪ್ ಟ್ರೋಫಿಯಲ್ಲಿ ಕಳಪೆ ಪ್ರದರ್ಶನ ತೋರಿಸಿದ್ದಾರೆ.  ಮೊದಲ ಇನ್ನಿಂಗ್ಸ್‌ನಲ್ಲಿ ಪೂರ್ವ ವಲಯದ ಪರ ಕಣಕ್ಕಿಳಿದ ಮೊಹಮ್ಮದ್ ಶಮಿ ಬಹಳ ದುಬಾರಿ ಬೌಲರ್ ಆಗಿ ಕಾಣಿಸಿಕೊಂಡರು. ಅವರು 9 ಓವರ್‌ಗಳಲ್ಲಿ ವಿಕೆಟ್ ಪಡೆಯದೆ 36 ರನ್ ಕೊಟ್ಟಿದ್ದಾರೆ. ಒಂದು ವೇಳೆ ದುಲೀಪ್ ಟ್ರೋಫಿಯಲ್ಲಿ ಶಮಿ ಚೆನ್ನಾಗಿ ಆಡಿದ್ರೆ, ಮುಂದಿನ ದಿನಗಳಲ್ಲಿ ಭಾರತ ತಂಡಕ್ಕೆ ಕಂಬ್ಯಾಕ್ ಮಾಡೋ ಚಾನ್ಸ್ ಹೆಚ್ಚಿತ್ತು ಅಂತ ಕ್ರಿಕೆಟ್ ಪ್ರೇಮಿಗಳು ಚರ್ಚಿಸುತ್ತಿದ್ದಾರೆ.

 

Kishor KV