ಐದನೇ ಟೆಸ್ಟ್‌ನಲ್ಲಿ ದೇವದತ್ ಪಡಿಕ್ಕಲ್ ಡೆಬ್ಯೂ ಸಾಧ್ಯತೆ – ಕನ್ನಡಿಗನಿಗೆ ಟೀಮ್ ಇಂಡಿಯಾ ಡೋರ್ ಓಪನ್..!

ಐದನೇ ಟೆಸ್ಟ್‌ನಲ್ಲಿ ದೇವದತ್ ಪಡಿಕ್ಕಲ್ ಡೆಬ್ಯೂ ಸಾಧ್ಯತೆ – ಕನ್ನಡಿಗನಿಗೆ ಟೀಮ್ ಇಂಡಿಯಾ ಡೋರ್ ಓಪನ್..!

ಮಾರ್ಚ್ ಏಳರಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಐದನೇ ಟೆಸ್ಟ್ ಮ್ಯಾಚ್ ನಡೆಯಲಿದೆ. ಆದ್ರೆ ಈ ಮ್ಯಾಚ್​ನಲ್ಲೂ ಕೂಡ ನಮ್ಮ ಕೆಎಲ್ ರಾಹುಲ್ ಆಡೋದಿಲ್ಲ. ಮೊದಲ ಎರಡು ಪಂದ್ಯಗಳನ್ನಾಡಿದ್ದ ಕೆಎಲ್ ನಂತರ ಮೂರೂ ಮ್ಯಾಚ್​ಗಳನ್ನ ಆಡಿಲ್ಲ. ರಾಹುಲ್​​ ಕಾಲಿಗೆ ಇಂಜ್ಯೂರಿಯಾಗಿದ್ದು, ಸದ್ಯ ಲಂಡನ್​​ನಲ್ಲಿ ಚಿಕಿತ್ಸ್ ಪಡೀತಾ ಇದ್ದಾರೆ. ಆದ್ರೆ 5ನೇ ಟೆಸ್ಟ್​ ವೇಳೆಗೆ ರಾಹುಲ್ ಕಂಪ್ಲೀಟ್ ಫಿಟ್ ಆಗೋದು ಅನುಮಾನವಾಗಿದ್ದು, ಹೀಗಾಗಿ ಫೈನಲ್​​ ಟೆಸ್ಟ್​ನಲ್ಲಿ ರಾಹುಲ್ ಆಡೋದಿಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಮತ್ತೊಂದೆಡೆ ಮೇಲಿಂದ ಮೇಲೆ ಚಾನ್ಸ್ ಕೊಟ್ರೂ ಫೇಲ್ ಆಗಿರೋ ರಜತ್ ಪಾಟೀದಾರ್​​ರನ್ನ ಕೂಡ ಟೀಮ್​ನಿಂದ ಡ್ರಾಪ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಕರ್ನಾಟಕದ ಮತ್ತೊಬ್ಬ ಪ್ರತಿಭೆಗೆ ಈಗ ಟೀಂ ಇಂಡಿಯಾದ ಡೋರ್ ಓಪನ್ ಆಗ್ತಿದೆ. ಕನ್ನಡಿಗ ದೇವದತ್ ಪಡಿಕ್ಕಲ್ ಇಂಗ್ಲೆಂಡ್​ ವಿರುದ್ಧದ ಐದನೇ ಮ್ಯಾಚ್​​ನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್​ಗೆ ಡೆಬ್ಯೂ ಮಾಡೋ ಸಾಧ್ಯತೆ ಇದೆ.

ಇದನ್ನೂ ಓದಿ: ನಾಲ್ಕನೇ ಟೆಸ್ಟ್‌ನಲ್ಲೂ ಕಣಕ್ಕಿಳಿಯಲ್ಲ ಕನ್ನಡಿಗ ಕೆ.ಎಲ್ ರಾಹುಲ್ – ದೇವದತ್ ಪಡಿಕ್ಕಲ್‌ಗೆ ಚೊಚ್ಚಲ ಪಂದ್ಯ ಆಡುವ ಚಾನ್ಸ್

ಜುಲೈ 7, 2000.. ಕೇರಳದ ಎಡಪ್ಪಾಲ್​ನಲ್ಲಿ ದೇವದತ್ ಪಡಿಕ್ಕಲ್ ಜನಿಸಿದ್ರು. ನಂತರ ಅವರ ಫ್ಯಾಮಿಲಿ ಹೈದರಾಬಾದ್​ಗೆ ಶಿಫ್ಟ್ ಆಗ್ತಾರೆ. 2011ರಲ್ಲಿ ಹೈದರಾಬಾದ್​​ನಿಂದ ಬೆಂಗಳೂರಿಗೆ ಬರ್ತಾರೆ. ಸಣ್ಣ ವಯಸ್ಸಲ್ಲೇ ಕ್ರಿಕೆಟರ್ ಆಗ್ಬೇಕು ಎಂದುಕೊಂಡಿದ್ದ ದೇವದತ್​ ಪಡಿಕ್ಕಲ್ ಬೆಂಗಳೂರಿನಲ್ಲಿ ಟ್ರೈನಿಂಗ್ ಪಡೀತಾರೆ. 2014ರಿಂದ ಕರ್ನಾಟಕ ಇನ್​ಸ್ಟಿಟ್ಯೂಟ್ ಆಫ್ ಕ್ರಿಕೆಟ್​ನಲ್ಲಿ ಪಡಿಕ್ಕಲ್ ಟ್ರೈನಿಂಗ್ ಶುರುವಾಗುತ್ತೆ. ಬಳಿಕ ಕರ್ನಾಟಕ ಅಂಡರ್​ 16 ಮತ್ತು ಅಂಡರ್​-19 ಟೀಮ್​ನ್ನ ಕೂಡ ರೆಪ್ರೆಸೆಂಟ್ ಮಾಡ್ತಾರೆ. 2017ರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ ಬಳ್ಳಾರಿ ಟಸ್ಕರ್ಸ್ ಪರ ಆಡ್ತಾರೆ. 2018ರಲ್ಲಿ ಫಸ್ಟ್​ ಕ್ಲಾಸ್ ಕ್ರಿಕೆಟ್​ಗೆ ಡೆಬ್ಯೂ ಮಾಡಿದ ದೇವದತ್ ಪಡಿಕ್ಕಲ್, ಕರ್ನಾಟಕದ ಪರ ರಣಜಿ ಟೂರ್ನಿಗಳನ್ನ ಆಡ್ತಾರೆ. 2019ರಲ್ಲಿ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲಿ ದೇವದತ್ ಪಡಿಕ್ಕಲ್ ಟಾಪ್ ಸ್ಕೋರರ್ ಆಗಿದ್ರು. ಯೂತ್ ಕ್ರಿಕೆಟ್​ ವೇಳೆ. ಅಂಡರ್-14, ಅಂಡರ್-16, ಅಂಡರ್-19 ಹೀಗೆ ಎಲ್ಲಾ ಏಜ್​ ಲೆವೆಲ್​ನಲ್ಲೂ ಪಡಿಕ್ಕಲ್ ಆಡಿದ್ರು. ಇಲ್ಲಿ ಯಾವುದನ್ನ ಕೂಡ ಸ್ಕಿಪ್ ಮಾಡಿಲ್ಲ. ಎಲ್ಲಾ ಬಡ್ಡಿಂಗ್​ ಕ್ರಿಕೆಟರ್ಸ್​ಗಳು ಕೂಡ ಅಂಡರ್-14, ಅಂಡರ್-16, ಅಂಡರ್-19 ಆಡೋದಿಲ್ಲ. ಕೆಲವರು ಅಂಡರ್​-16 ಟೂರ್ನಿಗಳನ್ನ ಸ್ಕಿಪ್ ಮಾಡ್ತಾರೆ. ಇನ್ನೂ ಕೆಲವರು ಅಂಡರ್-14 ಲೆವೆಲ್​ ಟೂರ್ನಿಗಳನ್ನ ಸ್ಕಿಪ್ ಮಾಡ್ತಾರೆ. ಆದ್ರೆ ದೇವದತ್ ಎಲ್ಲಾ ಲೆವೆಲ್​ಗಳನ್ನ ಆಡಿಕೊಂಡೇ ಈಗ ಇಂಟರ್​​ನ್ಯಾಷನಲ್​​ ಕ್ರಿಕೆಟ್​ವರೆಗೂ ಬಂದಿದ್ದಾರೆ.​ ಇದ್ರಿಂದಾಗಿ ನನಗೆ ಒಬ್ಬ ಬ್ಯಾಟ್ಸ್​​ಮನ್ ಆಗಿ ನ್ಯಾಚ್ಯುರಲ್ ಪ್ರೋಗ್ರೆಸ್ ಸಾಧಿಸೋಕೆ ಸಾಧ್ಯವಾಯ್ತು ಅಂತಾ ದೇವದತ್​​ ಪಡಿಕ್ಕಲ್​ ಅವರೇ ಹೇಳಿದ್ದಾರೆ.

 

ಎಸ್ಪೆಷಲಿ ಯಾವಾಗ ಕರ್ನಾಟಕ ಪರ ಟೂರ್ನಿಗಳನ್ನ ಆಡೋಕೆ ಶುರು ಮಾಡಿದ್ನೋ ಅದೇ ನನ್ನ ಕೆರಿಯರ್​ನ ಟರ್ನಿಂಗ್ ಪಾಯಿಂಟ್ ಅಂತಾನೂ ಇಂಟರ್​ವ್ಯೂ ಒಂದರಲ್ಲಿ ಪಡಿಕ್ಕಲ್ ಹೇಳಿದ್ದಾರೆ. ಕರ್ನಾಟಕ ಜ್ಯೂನಿಯರ್ ಟೀಮ್ ಅಂದ್ರೆ ಅಂಡರ್-14 ಟೂರ್ನಿಯಲ್ಲಿ ಆಡೋವಾಗ ಕ್ರಿಕೆಟ್​​ನ್ನ ಇನ್ನಷ್ಟು ಸೀರಿಯಸ್ ಆಗಿ, ಕೆರಿಯರ್ ಆಪ್ಷನ್ ಆಗಿ ತೆಗೆದುಕೊಳ್ಳಬೇಕು ಅಂತಾ ದೇವದತ್ ಡಿಸೈಡ್ ಮಾಡಿದ್ರಂತೆ. ನಂತರ ಅಂಡರ್-16, ಅಂಡರ್-19 ಟೂರ್ನಿಗಳಲ್ಲಿ ಆಡುತ್ತಲೇ ಪಡಿಕ್ಕಲ್ ಒಬ್ಬ ಫುಲ್ ಫ್ಲೆಡ್ಜ್ ಕ್ರಿಕೆಟರ್ ಆಗ್ತಾರೆ. ಹಾಗೆಯೇ ಕೆಪಿಎಲ್​​ನಲ್ಲಿ ಬಳ್ಳಾರಿ ಟಸ್ಕರ್ಸ್ ಪರ ಕೆಲ ಮ್ಯಾಚ್​​ ವಿನ್ನಿಂಗ್ ಪರ್ಫಾಮೆನ್ಸ್​ಗಳನ್ನ ನೀಡ್ತಾರೆ. ಇದ್ರಿಂದ ಪಡಿಕ್ಕಲ್​ಗೆ ಐಪಿಎಲ್​​ ಡೋರ್​ ಕೂಡ ಓಪನ್ ಆಗುತ್ತೆ. 2018ರಲ್ಲಿ ನಡೆದ ಐಪಿಎಲ್​​ ಆಕ್ಷನ್​ನಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಪಡಿಕ್ಕಲ್​ರನ್ನ ಟೀಂಗೆ ಸೇರಿಸಿಕೊಳ್ಳುತ್ತೆ. 2019ರಲ್ಲಿ ತಮ್ಮ ಮೊದಲ ನಾಲ್ಕು ಐಪಿಎಲ್​​ ಮ್ಯಾಚ್​ಗಳಲ್ಲೇ ದೇವದತ್ ಪಡಿಕ್ಕಲ್ ಮೂರು ಹಾಫ್ ಸೆಂಚೂರಿ ಹೊಡೀತಾರೆ. ಐಪಿಎಲ್​​ ಇತಿಹಾಸದಲ್ಲೇ ಫಸ್ಟ್ ನಾಲ್ಕು ಮ್ಯಾಚ್​ಗಳಲ್ಲೇ ಮೂರು ಹಾಫ್ ಸೆಂಚೂರಿ ಹೊಡೆದ ರೆಕಾರ್ಡ್ ಮಾಡಿರೋದು ಪಡಿಕ್ಕಲ್ ಮಾತ್ರ. ಇಡೀ​ ಟೂರ್ನಿಯಲ್ಲಿ 15 ಮ್ಯಾಚ್​​ಗಳಲ್ಲಿ 473 ರನ್ ಹೊಡೀತಾರೆ. 2021ರ ಐಪಿಎಲ್​​ನಲ್ಲಿ ರಾಜಸ್ಥಾನ ವಿರುದ್ಧ ಫಸ್ಟ್ ಸೆಂಚೂರಿ ಬಾರಿಸ್ತಾರೆ. 2022ರಲ್ಲಿ ರಾಜಸ್ಥಾನ ರಾಯಲ್ಸ್ ಜಾಯಿನ್ ಆಗ್ತಾರೆ. 2023ರಲ್ಲಿ ಕೆಎಲ್ ರಾಹುಲ್​ ನೇತೃತ್ವದ ಲಕ್ನೋ ಸೂಪರ್​ ಜಯಾಂಟ್ಸ್​ ಪರ ಪಡಿಕ್ಕಲ್ ಆಡ್ತಾರೆ. ಹಾಗೆಯೇ ಕಳೆದ ವರ್ಷ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಫಸ್ಟ್ ಕ್ಲಾಸ್ ಟೂರ್ನಿಯಲ್ಲಿ ಐದು ಇನ್ನಿಂಗ್ಸ್​ಗಳಲ್ಲಿ 465 ರನ್​ ಗಳಿಸಿ ಟೂರ್ನಿಯ ಟಾಪ್ ಸ್ಕೋರರ್ ಆಗ್ತಾರೆ.

ಇತ್ತೀಚಿನ ವರ್ಷಗಳಲ್ಲಿ ದೇವದತ್ ಪಡಿಕ್ಕಲ್ ಪರ್ಫಾಮೆನ್ಸ್​ ಸಾಕಷ್ಟು ಇಂಪ್ರೂವ್​ ಆಗೋಕೆ ಇನ್ನೊಂದು ಮೇನ್ ರೀಸನ್ ಅಂದ್ರೆ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ನೀಡಿದ ಟಿಪ್ಸ್. ಆರ್​ಸಿಬಿ ಪರ ಆಡೋವಾಗ ವಿರಾಟ್ ಕೊಹ್ಲಿ ಫಿಟ್ನೆಸ್ ಮೇಲೆಯೂ ಕಾನ್ಸಂಟ್ರೇಟ್ ಮಾಡುವಂತೆ ಸಲಹೆ ನೀಡಿದ್ರಂತೆ. 50% ಫಿಟ್ನೆಸ್, 50% ಸ್ಕಿಲ್​​ ಇವೆರಡನ್ನೂ ಬ್ಯಾಲೆನ್ಸ್ ಮಾಡಿದ್ರಷ್ಟೇ ಲಾಂಗ್​ ಟೈಮ್​ ಆಡೋಕೆ ಸಾಧ್ಯ ಅನ್ನೋದಾಗಿ ಕೊಹ್ಲಿ ಹೇಳಿದ್ರಂತೆ. ಹೀಗಾಗಿ ​ ದೇವದತ್ ಪಡಿಕ್ಕಲ್ ಫಿಟ್ನೆಸ್ ವಿಚಾರವಾಗಿ ಸಾಕಷ್ಟು ವರ್ಕೌಟ್ ಮಾಡ್ತಾ ಬಂದಿದ್ದಾರೆ.

 

ಆದ್ರೆ ದೇವದತ್​​ ಪಡಿಕ್ಕಲ್​​ಗೆ ಈ ಕ್ರಿಕೆಟಿಂಗ್ ಜರ್ನಿ ಅಷ್ಟೊಂದು ಈಸಿ ಇರಲಿಲ್ಲ. ಆರಂಭದ ದಿನಗಳಲ್ಲಿ ಪಡಿಕ್ಕಲ್ ಹಣಕಾಸಿನ ಸಮಸ್ಯೆ ಕೂಡ ಎದುರಿಸಿದ್ರು. ಜೊತೆಗೆ ಯೂತ್​ ಲೆವೆಲ್​​​ನಲ್ಲಿ ಕ್ರಿಕೆಟ್ ಆಡ್ತಾ ಇದ್ದಾಗ ಪದೇ ಪದೆ ಅನಾರೋಗ್ಯಕ್ಕೂ ಒಳಗಾಗ್ತಿದ್ರಂತೆ. ಕ್ರಿಕೆಟ್​ ಕೆರಿಯರೇ ಅಂತ್ಯವಾಗುತ್ತೋ ಅನ್ನೋವಷ್ಟರ ಮಟ್ಟಿಗೆ ಹೆಲ್ತ್​​ ಪ್ರಾಬ್ಲಂ ಫೇಸ್​ ಮಾಡಿದ್ರಂತೆ. ಆದ್ರೆ ದೇವದತ್ ಪಡಿಕ್ಕಲ್ ತಮ್ಮ ಹಠ ಬಿಡಲಿಲ್ಲ. ಏನೇ ಆದ್ರೂ ಕ್ರಿಕೆಟ್ ಜರ್ನಿಯಲ್ಲಿ ಬ್ಯಾಕ್​​ ಫುಟ್​ ಹೋಗಿಲ್ಲ. ರಿಗರಸ್ ಆಗಿಯೇ ಪ್ರಾಕ್ಟೀಸ್ ಮಾಡ್ತಾ ಹೋಗ್ತಾರೆ. ಫ್ಯಾಮಿಲಿ, ಕೋಚ್, ಮೆಡಿಕಲ್​​ ಸಪೋರ್ಟ್​​ನಿಂದಾಗಿ ಪಡಿಕ್ಕಲ್ ಕ್ರಿಕೆಟ್ ಆಡೋಕೆ ಬೇಕಾದ ಸ್ಟ್ರೆಂತ್ & ಫಿಟ್ನೆಸ್ ಪಡೆದುಕೊಳ್ತಾರೆ.

ದೇವದತ್ ಪಡಿಕ್ಕಲ್ ಟೆಕ್ನಿಕಲೀ ತುಂಬಾ ಸೌಂಡ್ ಇರುವಂಥಾ ಬ್ಯಾಟ್ಸ್​ಮನ್. ಐಪಿಎಲ್​, ಫಸ್ಟ್​ ಕ್ಲಾಸ್​ ಕ್ರಿಕೆಟ್​ನಲ್ಲಿ ಪಡಿಕ್ಕಲ್ ತಮ್ಮ ಟ್ಯಾಲೆಂಟ್​ನ್ನ ಪ್ರೂವ್ ಮಾಡಿದ್ರಿಂದಾಗಿ 2021ರ ಜುಲೈ​ನಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್​​ಗೆ ಡೆಬ್ಯೂ ಮಾಡ್ತಾರೆ. ಭಾರತದ ಪರ ಪಡಿಕ್ಕಲ್ ಇದುವರೆ ಎರಡು ಟಿ20 ಮ್ಯಾಚ್​ಗಳನ್ನಷ್ಟೇ ಆಡಿದ್ದು, 38 ರನ್ ಗಳಿಸಿದ್ದಾರೆ. 2021ರ ಬಳಿಕ ಪಡಿಕ್ಕಲ್​​ಗೆ ಇದುವರೆಗೂ ಟೀಂ ಇಂಡಿಯಾದಲ್ಲಿ ಆಡೋಕೆ ಚಾನ್ಸ್ ಸಿಕ್ಕಿಲ್ಲ. ಆದ್ರೆ ಫಸ್ಟ್​ ಕ್ಲಾಸ್ ಟೂರ್ನಿಗಳನ್ನ ಆಡ್ತಾನೆ ಇದ್ರು. ಸ್ಕೋರ್ ಮಾಡ್ತಾನೆ ಇದ್ರು. 31 ಫಸ್ಟ್​ ಕ್ಲಾಸ್​​ ಮ್ಯಾಚ್​​ಗಳಲ್ಲಿ 44.54 ಎವರೇಜ್​ನಲ್ಲಿ 2,227 ರನ್ ಮಾಡಿದ್ದಾರೆ. 6 ಸೆಂಚೂರು, 12 ಹಾಫ್​ ಸೆಂಚೂರಿ ಪಡಿಕ್ಕಲ್ ಬ್ಯಾಟ್​ನಿಂದ ಬಂದಿದೆ. ಅದ್ರಲ್ಲೂ ಈ ಸೀಸನ್​​ನಲ್ಲಂತೂ ಕೇವಲ ನಾಲ್ಕು ಮ್ಯಾಚ್​ಗಳಲ್ಲೇ 92.66 ಎವರೇಜ್​​ನೊಂದಿಗೆ 556 ರನ್​ ಗಳಿಸಿದ್ದಾರೆ. ಆರು ಇನ್ನಿಂಗ್ಸ್​​ಗಳಲ್ಲೇ ಮೂರು ಸೆಂಚೂರಿ. ಪಂಜಾಬ್ ವಿರುದ್ಧ 193 ರನ್ ಈ ಸೀಸನ್​ನ ಹೈಯೆಸ್ಟ್ ಸ್ಕೋರ್. ​ಇಷ್ಟೇ ಅಲ್ಲ, ಇಂಗ್ಲೆಂಡ್ ಲಯನ್ಸ್ ವಿರುದ್ಧ ಇಂಡಿಯಾ ಎ ಟೀಮ್​​ನಲ್ಲೂ ಪಡಿಕ್ಕಲ್ ಆಡಿದ್ರು. ಒಂದು ಸೆಂಚೂರಿ, ಹಾಫ್ ಸೆಂಚೂರಿ ಕೂಡ ಹೊಡೆದಿದ್ರು. ರಣಜಿಯಲ್ಲಿ ತಮಿಳುನಾಡು ವಿರುದ್ಧದ ಮ್ಯಾಚ್​​ನಲ್ಲಿ ದೇವದತ್ ಪಡಿಕ್ಕಲ್ 151 ರನ್ ಹೊಡೆದಾಗ, ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್​ಕರ್ ಕೂಡ ಇದ್ರು. ತಮ್ಮ ಕಣ್ಣೆದುರೇ ಪಡಿಕ್ಕಲ್ ಪರ್ಫಾಮೆನ್ಸ್ ನೋಡಿ ಅಗರ್​ಕರ್ ಫುಲ್ ಇಂಪ್ರೆಸ್ ಆಗಿದ್ರು. ಆ ಪರ್ಫಾಮೆನ್ಸ್ ದೇವದತ್ ಪಡಿಕ್ಕಲ್​​ಗೆ ದೊಡ್ಡ ಪ್ಲಸ್ ಪಾಯಿಂಟ್ ಅಯ್ತು ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಈ ಎಲ್ಲಾ ಕಾರಣಗಳಿಂದಾಗಿಯೇ ಈಗ ಟೀಂ ಇಂಡಿಯಾ ಪರ ಟೆಸ್ಟ್​ ಕ್ರಿಕೆಟ್​​ಗೆ ಡೆಬ್ಯೂ ಮಾಡೋ ಅವಕಾಶ ಸಿಗ್ತಿದೆ. ಆಲ್​ಮೋಸ್ಟ್ ಮೂರು ವರ್ಷಗಳ ಬಳಿಕ ದೇವದತ್ ಪಡಿಕ್ಕಲ್ ಮತ್ತೆ ಟೀಂ ಇಂಡಿಯಾಗೆ ಕಮ್​ಬ್ಯಾಕ್ ಮಾಡ್ತಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಸೀರಿಸ್​ನಲ್ಲಿ ಈಗಾಗ್ಲೇ ಸರ್ಫರಾಜ್ ಖಾನ್, ಧ್ರುವ್ ಜ್ಯುರೆಲ್​​ರಂಥಾ ಹೈಲಿ ಟ್ಯಾಲೆಂಟೆಡ್ ಬ್ಯಾಟ್ಸ್​ಮನ್​ಗಳು ಡೆಬ್ಯೂ ಮಾಡಿದ್ದಾರೆ. ಈಗ ಕನ್ನಡಿಗ ದೇವದತ್ ಪಡಿಕ್ಕಲ್ ಸರದಿ ಬಂದಿದೆ.

Sulekha