ಐದನೇ ಟೆಸ್ಟ್‌ನಲ್ಲಿ ದೇವದತ್ ಪಡಿಕ್ಕಲ್ ಡೆಬ್ಯೂ ಸಾಧ್ಯತೆ – ಕನ್ನಡಿಗನಿಗೆ ಟೀಮ್ ಇಂಡಿಯಾ ಡೋರ್ ಓಪನ್..!
ಮಾರ್ಚ್ ಏಳರಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಐದನೇ ಟೆಸ್ಟ್ ಮ್ಯಾಚ್ ನಡೆಯಲಿದೆ. ಆದ್ರೆ ಈ ಮ್ಯಾಚ್ನಲ್ಲೂ ಕೂಡ ನಮ್ಮ ಕೆಎಲ್ ರಾಹುಲ್ ಆಡೋದಿಲ್ಲ. ಮೊದಲ ಎರಡು ಪಂದ್ಯಗಳನ್ನಾಡಿದ್ದ ಕೆಎಲ್ ನಂತರ ಮೂರೂ ಮ್ಯಾಚ್ಗಳನ್ನ ಆಡಿಲ್ಲ. ರಾಹುಲ್ ಕಾಲಿಗೆ ಇಂಜ್ಯೂರಿಯಾಗಿದ್ದು, ಸದ್ಯ ಲಂಡನ್ನಲ್ಲಿ ಚಿಕಿತ್ಸ್ ಪಡೀತಾ ಇದ್ದಾರೆ. ಆದ್ರೆ 5ನೇ ಟೆಸ್ಟ್ ವೇಳೆಗೆ ರಾಹುಲ್ ಕಂಪ್ಲೀಟ್ ಫಿಟ್ ಆಗೋದು ಅನುಮಾನವಾಗಿದ್ದು, ಹೀಗಾಗಿ ಫೈನಲ್ ಟೆಸ್ಟ್‌ನಲ್ಲಿ ರಾಹುಲ್ ಆಡೋದಿಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಮತ್ತೊಂದೆಡೆ ಮೇಲಿಂದ ಮೇಲೆ ಚಾನ್ಸ್ ಕೊಟ್ರೂ ಫೇಲ್ ಆಗಿರೋ ರಜತ್ ಪಾಟೀದಾರ್ರನ್ನ ಕೂಡ ಟೀಮ್ನಿಂದ ಡ್ರಾಪ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಕರ್ನಾಟಕದ ಮತ್ತೊಬ್ಬ ಪ್ರತಿಭೆಗೆ ಈಗ ಟೀಂ ಇಂಡಿಯಾದ ಡೋರ್ ಓಪನ್ ಆಗ್ತಿದೆ. ಕನ್ನಡಿಗ ದೇವದತ್ ಪಡಿಕ್ಕಲ್ ಇಂಗ್ಲೆಂಡ್ ವಿರುದ್ಧದ ಐದನೇ ಮ್ಯಾಚ್ನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಡೆಬ್ಯೂ ಮಾಡೋ ಸಾಧ್ಯತೆ ಇದೆ.
ಇದನ್ನೂ ಓದಿ: ನಾಲ್ಕನೇ ಟೆಸ್ಟ್‌ನಲ್ಲೂ ಕಣಕ್ಕಿಳಿಯಲ್ಲ ಕನ್ನಡಿಗ ಕೆ.ಎಲ್ ರಾಹುಲ್ – ದೇವದತ್ ಪಡಿಕ್ಕಲ್‌ಗೆ ಚೊಚ್ಚಲ ಪಂದ್ಯ ಆಡುವ ಚಾನ್ಸ್
ಜುಲೈ 7, 2000.. ಕೇರಳದ ಎಡಪ್ಪಾಲ್ನಲ್ಲಿ ದೇವದತ್ ಪಡಿಕ್ಕಲ್ ಜನಿಸಿದ್ರು. ನಂತರ ಅವರ ಫ್ಯಾಮಿಲಿ ಹೈದರಾಬಾದ್ಗೆ ಶಿಫ್ಟ್ ಆಗ್ತಾರೆ. 2011ರಲ್ಲಿ ಹೈದರಾಬಾದ್ನಿಂದ ಬೆಂಗಳೂರಿಗೆ ಬರ್ತಾರೆ. ಸಣ್ಣ ವಯಸ್ಸಲ್ಲೇ ಕ್ರಿಕೆಟರ್ ಆಗ್ಬೇಕು ಎಂದುಕೊಂಡಿದ್ದ ದೇವದತ್ ಪಡಿಕ್ಕಲ್ ಬೆಂಗಳೂರಿನಲ್ಲಿ ಟ್ರೈನಿಂಗ್ ಪಡೀತಾರೆ. 2014ರಿಂದ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ನಲ್ಲಿ ಪಡಿಕ್ಕಲ್ ಟ್ರೈನಿಂಗ್ ಶುರುವಾಗುತ್ತೆ. ಬಳಿಕ ಕರ್ನಾಟಕ ಅಂಡರ್ 16 ಮತ್ತು ಅಂಡರ್-19 ಟೀಮ್ನ್ನ ಕೂಡ ರೆಪ್ರೆಸೆಂಟ್ ಮಾಡ್ತಾರೆ. 2017ರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಬಳ್ಳಾರಿ ಟಸ್ಕರ್ಸ್ ಪರ ಆಡ್ತಾರೆ. 2018ರಲ್ಲಿ ಫಸ್ಟ್ ಕ್ಲಾಸ್ ಕ್ರಿಕೆಟ್ಗೆ ಡೆಬ್ಯೂ ಮಾಡಿದ ದೇವದತ್ ಪಡಿಕ್ಕಲ್, ಕರ್ನಾಟಕದ ಪರ ರಣಜಿ ಟೂರ್ನಿಗಳನ್ನ ಆಡ್ತಾರೆ. 2019ರಲ್ಲಿ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಲ್ಲಿ ದೇವದತ್ ಪಡಿಕ್ಕಲ್ ಟಾಪ್ ಸ್ಕೋರರ್ ಆಗಿದ್ರು. ಯೂತ್ ಕ್ರಿಕೆಟ್ ವೇಳೆ. ಅಂಡರ್-14, ಅಂಡರ್-16, ಅಂಡರ್-19 ಹೀಗೆ ಎಲ್ಲಾ ಏಜ್ ಲೆವೆಲ್ನಲ್ಲೂ ಪಡಿಕ್ಕಲ್ ಆಡಿದ್ರು. ಇಲ್ಲಿ ಯಾವುದನ್ನ ಕೂಡ ಸ್ಕಿಪ್ ಮಾಡಿಲ್ಲ. ಎಲ್ಲಾ ಬಡ್ಡಿಂಗ್ ಕ್ರಿಕೆಟರ್ಸ್ಗಳು ಕೂಡ ಅಂಡರ್-14, ಅಂಡರ್-16, ಅಂಡರ್-19 ಆಡೋದಿಲ್ಲ. ಕೆಲವರು ಅಂಡರ್-16 ಟೂರ್ನಿಗಳನ್ನ ಸ್ಕಿಪ್ ಮಾಡ್ತಾರೆ. ಇನ್ನೂ ಕೆಲವರು ಅಂಡರ್-14 ಲೆವೆಲ್ ಟೂರ್ನಿಗಳನ್ನ ಸ್ಕಿಪ್ ಮಾಡ್ತಾರೆ. ಆದ್ರೆ ದೇವದತ್ ಎಲ್ಲಾ ಲೆವೆಲ್ಗಳನ್ನ ಆಡಿಕೊಂಡೇ ಈಗ ಇಂಟರ್ನ್ಯಾಷನಲ್ ಕ್ರಿಕೆಟ್ವರೆಗೂ ಬಂದಿದ್ದಾರೆ. ಇದ್ರಿಂದಾಗಿ ನನಗೆ ಒಬ್ಬ ಬ್ಯಾಟ್ಸ್ಮನ್ ಆಗಿ ನ್ಯಾಚ್ಯುರಲ್ ಪ್ರೋಗ್ರೆಸ್ ಸಾಧಿಸೋಕೆ ಸಾಧ್ಯವಾಯ್ತು ಅಂತಾ ದೇವದತ್ ಪಡಿಕ್ಕಲ್ ಅವರೇ ಹೇಳಿದ್ದಾರೆ.
ಎಸ್ಪೆಷಲಿ ಯಾವಾಗ ಕರ್ನಾಟಕ ಪರ ಟೂರ್ನಿಗಳನ್ನ ಆಡೋಕೆ ಶುರು ಮಾಡಿದ್ನೋ ಅದೇ ನನ್ನ ಕೆರಿಯರ್ನ ಟರ್ನಿಂಗ್ ಪಾಯಿಂಟ್ ಅಂತಾನೂ ಇಂಟರ್ವ್ಯೂ ಒಂದರಲ್ಲಿ ಪಡಿಕ್ಕಲ್ ಹೇಳಿದ್ದಾರೆ. ಕರ್ನಾಟಕ ಜ್ಯೂನಿಯರ್ ಟೀಮ್ ಅಂದ್ರೆ ಅಂಡರ್-14 ಟೂರ್ನಿಯಲ್ಲಿ ಆಡೋವಾಗ ಕ್ರಿಕೆಟ್ನ್ನ ಇನ್ನಷ್ಟು ಸೀರಿಯಸ್ ಆಗಿ, ಕೆರಿಯರ್ ಆಪ್ಷನ್ ಆಗಿ ತೆಗೆದುಕೊಳ್ಳಬೇಕು ಅಂತಾ ದೇವದತ್ ಡಿಸೈಡ್ ಮಾಡಿದ್ರಂತೆ. ನಂತರ ಅಂಡರ್-16, ಅಂಡರ್-19 ಟೂರ್ನಿಗಳಲ್ಲಿ ಆಡುತ್ತಲೇ ಪಡಿಕ್ಕಲ್ ಒಬ್ಬ ಫುಲ್ ಫ್ಲೆಡ್ಜ್ ಕ್ರಿಕೆಟರ್ ಆಗ್ತಾರೆ. ಹಾಗೆಯೇ ಕೆಪಿಎಲ್ನಲ್ಲಿ ಬಳ್ಳಾರಿ ಟಸ್ಕರ್ಸ್ ಪರ ಕೆಲ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ಗಳನ್ನ ನೀಡ್ತಾರೆ. ಇದ್ರಿಂದ ಪಡಿಕ್ಕಲ್‌ಗೆ ಐಪಿಎಲ್ ಡೋರ್ ಕೂಡ ಓಪನ್ ಆಗುತ್ತೆ. 2018ರಲ್ಲಿ ನಡೆದ ಐಪಿಎಲ್ ಆಕ್ಷನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡಿಕ್ಕಲ್ರನ್ನ ಟೀಂಗೆ ಸೇರಿಸಿಕೊಳ್ಳುತ್ತೆ. 2019ರಲ್ಲಿ ತಮ್ಮ ಮೊದಲ ನಾಲ್ಕು ಐಪಿಎಲ್ ಮ್ಯಾಚ್ಗಳಲ್ಲೇ ದೇವದತ್ ಪಡಿಕ್ಕಲ್ ಮೂರು ಹಾಫ್ ಸೆಂಚೂರಿ ಹೊಡೀತಾರೆ. ಐಪಿಎಲ್ ಇತಿಹಾಸದಲ್ಲೇ ಫಸ್ಟ್ ನಾಲ್ಕು ಮ್ಯಾಚ್ಗಳಲ್ಲೇ ಮೂರು ಹಾಫ್ ಸೆಂಚೂರಿ ಹೊಡೆದ ರೆಕಾರ್ಡ್ ಮಾಡಿರೋದು ಪಡಿಕ್ಕಲ್ ಮಾತ್ರ. ಇಡೀ ಟೂರ್ನಿಯಲ್ಲಿ 15 ಮ್ಯಾಚ್ಗಳಲ್ಲಿ 473 ರನ್ ಹೊಡೀತಾರೆ. 2021ರ ಐಪಿಎಲ್ನಲ್ಲಿ ರಾಜಸ್ಥಾನ ವಿರುದ್ಧ ಫಸ್ಟ್ ಸೆಂಚೂರಿ ಬಾರಿಸ್ತಾರೆ. 2022ರಲ್ಲಿ ರಾಜಸ್ಥಾನ ರಾಯಲ್ಸ್ ಜಾಯಿನ್ ಆಗ್ತಾರೆ. 2023ರಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜಯಾಂಟ್ಸ್ ಪರ ಪಡಿಕ್ಕಲ್ ಆಡ್ತಾರೆ. ಹಾಗೆಯೇ ಕಳೆದ ವರ್ಷ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಫಸ್ಟ್ ಕ್ಲಾಸ್ ಟೂರ್ನಿಯಲ್ಲಿ ಐದು ಇನ್ನಿಂಗ್ಸ್ಗಳಲ್ಲಿ 465 ರನ್ ಗಳಿಸಿ ಟೂರ್ನಿಯ ಟಾಪ್ ಸ್ಕೋರರ್ ಆಗ್ತಾರೆ.
ಇತ್ತೀಚಿನ ವರ್ಷಗಳಲ್ಲಿ ದೇವದತ್ ಪಡಿಕ್ಕಲ್ ಪರ್ಫಾಮೆನ್ಸ್ ಸಾಕಷ್ಟು ಇಂಪ್ರೂವ್ ಆಗೋಕೆ ಇನ್ನೊಂದು ಮೇನ್ ರೀಸನ್ ಅಂದ್ರೆ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ನೀಡಿದ ಟಿಪ್ಸ್. ಆರ್ಸಿಬಿ ಪರ ಆಡೋವಾಗ ವಿರಾಟ್ ಕೊಹ್ಲಿ ಫಿಟ್ನೆಸ್ ಮೇಲೆಯೂ ಕಾನ್ಸಂಟ್ರೇಟ್ ಮಾಡುವಂತೆ ಸಲಹೆ ನೀಡಿದ್ರಂತೆ. 50% ಫಿಟ್ನೆಸ್, 50% ಸ್ಕಿಲ್ ಇವೆರಡನ್ನೂ ಬ್ಯಾಲೆನ್ಸ್ ಮಾಡಿದ್ರಷ್ಟೇ ಲಾಂಗ್ ಟೈಮ್ ಆಡೋಕೆ ಸಾಧ್ಯ ಅನ್ನೋದಾಗಿ ಕೊಹ್ಲಿ ಹೇಳಿದ್ರಂತೆ. ಹೀಗಾಗಿ ದೇವದತ್ ಪಡಿಕ್ಕಲ್ ಫಿಟ್ನೆಸ್ ವಿಚಾರವಾಗಿ ಸಾಕಷ್ಟು ವರ್ಕೌಟ್ ಮಾಡ್ತಾ ಬಂದಿದ್ದಾರೆ.
ಆದ್ರೆ ದೇವದತ್ ಪಡಿಕ್ಕಲ್‌ಗೆ ಈ ಕ್ರಿಕೆಟಿಂಗ್ ಜರ್ನಿ ಅಷ್ಟೊಂದು ಈಸಿ ಇರಲಿಲ್ಲ. ಆರಂಭದ ದಿನಗಳಲ್ಲಿ ಪಡಿಕ್ಕಲ್ ಹಣಕಾಸಿನ ಸಮಸ್ಯೆ ಕೂಡ ಎದುರಿಸಿದ್ರು. ಜೊತೆಗೆ ಯೂತ್ ಲೆವೆಲ್ನಲ್ಲಿ ಕ್ರಿಕೆಟ್ ಆಡ್ತಾ ಇದ್ದಾಗ ಪದೇ ಪದೆ ಅನಾರೋಗ್ಯಕ್ಕೂ ಒಳಗಾಗ್ತಿದ್ರಂತೆ. ಕ್ರಿಕೆಟ್ ಕೆರಿಯರೇ ಅಂತ್ಯವಾಗುತ್ತೋ ಅನ್ನೋವಷ್ಟರ ಮಟ್ಟಿಗೆ ಹೆಲ್ತ್ ಪ್ರಾಬ್ಲಂ ಫೇಸ್ ಮಾಡಿದ್ರಂತೆ. ಆದ್ರೆ ದೇವದತ್ ಪಡಿಕ್ಕಲ್ ತಮ್ಮ ಹಠ ಬಿಡಲಿಲ್ಲ. ಏನೇ ಆದ್ರೂ ಕ್ರಿಕೆಟ್ ಜರ್ನಿಯಲ್ಲಿ ಬ್ಯಾಕ್ ಫುಟ್ ಹೋಗಿಲ್ಲ. ರಿಗರಸ್ ಆಗಿಯೇ ಪ್ರಾಕ್ಟೀಸ್ ಮಾಡ್ತಾ ಹೋಗ್ತಾರೆ. ಫ್ಯಾಮಿಲಿ, ಕೋಚ್, ಮೆಡಿಕಲ್ ಸಪೋರ್ಟ್ನಿಂದಾಗಿ ಪಡಿಕ್ಕಲ್ ಕ್ರಿಕೆಟ್ ಆಡೋಕೆ ಬೇಕಾದ ಸ್ಟ್ರೆಂತ್ & ಫಿಟ್ನೆಸ್ ಪಡೆದುಕೊಳ್ತಾರೆ.
ದೇವದತ್ ಪಡಿಕ್ಕಲ್ ಟೆಕ್ನಿಕಲೀ ತುಂಬಾ ಸೌಂಡ್ ಇರುವಂಥಾ ಬ್ಯಾಟ್ಸ್ಮನ್. ಐಪಿಎಲ್, ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಪಡಿಕ್ಕಲ್ ತಮ್ಮ ಟ್ಯಾಲೆಂಟ್ನ್ನ ಪ್ರೂವ್ ಮಾಡಿದ್ರಿಂದಾಗಿ 2021ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ಗೆ ಡೆಬ್ಯೂ ಮಾಡ್ತಾರೆ. ಭಾರತದ ಪರ ಪಡಿಕ್ಕಲ್ ಇದುವರೆ ಎರಡು ಟಿ20 ಮ್ಯಾಚ್ಗಳನ್ನಷ್ಟೇ ಆಡಿದ್ದು, 38 ರನ್ ಗಳಿಸಿದ್ದಾರೆ. 2021ರ ಬಳಿಕ ಪಡಿಕ್ಕಲ್‌ಗೆ ಇದುವರೆಗೂ ಟೀಂ ಇಂಡಿಯಾದಲ್ಲಿ ಆಡೋಕೆ ಚಾನ್ಸ್ ಸಿಕ್ಕಿಲ್ಲ. ಆದ್ರೆ ಫಸ್ಟ್ ಕ್ಲಾಸ್ ಟೂರ್ನಿಗಳನ್ನ ಆಡ್ತಾನೆ ಇದ್ರು. ಸ್ಕೋರ್ ಮಾಡ್ತಾನೆ ಇದ್ರು. 31 ಫಸ್ಟ್ ಕ್ಲಾಸ್ ಮ್ಯಾಚ್ಗಳಲ್ಲಿ 44.54 ಎವರೇಜ್ನಲ್ಲಿ 2,227 ರನ್ ಮಾಡಿದ್ದಾರೆ. 6 ಸೆಂಚೂರು, 12 ಹಾಫ್ ಸೆಂಚೂರಿ ಪಡಿಕ್ಕಲ್ ಬ್ಯಾಟ್ನಿಂದ ಬಂದಿದೆ. ಅದ್ರಲ್ಲೂ ಈ ಸೀಸನ್ನಲ್ಲಂತೂ ಕೇವಲ ನಾಲ್ಕು ಮ್ಯಾಚ್ಗಳಲ್ಲೇ 92.66 ಎವರೇಜ್ನೊಂದಿಗೆ 556 ರನ್ ಗಳಿಸಿದ್ದಾರೆ. ಆರು ಇನ್ನಿಂಗ್ಸ್ಗಳಲ್ಲೇ ಮೂರು ಸೆಂಚೂರಿ. ಪಂಜಾಬ್ ವಿರುದ್ಧ 193 ರನ್ ಈ ಸೀಸನ್ನ ಹೈಯೆಸ್ಟ್ ಸ್ಕೋರ್. ಇಷ್ಟೇ ಅಲ್ಲ, ಇಂಗ್ಲೆಂಡ್ ಲಯನ್ಸ್ ವಿರುದ್ಧ ಇಂಡಿಯಾ ಎ ಟೀಮ್ನಲ್ಲೂ ಪಡಿಕ್ಕಲ್ ಆಡಿದ್ರು. ಒಂದು ಸೆಂಚೂರಿ, ಹಾಫ್ ಸೆಂಚೂರಿ ಕೂಡ ಹೊಡೆದಿದ್ರು. ರಣಜಿಯಲ್ಲಿ ತಮಿಳುನಾಡು ವಿರುದ್ಧದ ಮ್ಯಾಚ್ನಲ್ಲಿ ದೇವದತ್ ಪಡಿಕ್ಕಲ್ 151 ರನ್ ಹೊಡೆದಾಗ, ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್ಕರ್ ಕೂಡ ಇದ್ರು. ತಮ್ಮ ಕಣ್ಣೆದುರೇ ಪಡಿಕ್ಕಲ್ ಪರ್ಫಾಮೆನ್ಸ್ ನೋಡಿ ಅಗರ್ಕರ್ ಫುಲ್ ಇಂಪ್ರೆಸ್ ಆಗಿದ್ರು. ಆ ಪರ್ಫಾಮೆನ್ಸ್ ದೇವದತ್ ಪಡಿಕ್ಕಲ್‌ಗೆ ದೊಡ್ಡ ಪ್ಲಸ್ ಪಾಯಿಂಟ್ ಅಯ್ತು ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಈ ಎಲ್ಲಾ ಕಾರಣಗಳಿಂದಾಗಿಯೇ ಈಗ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ಗೆ ಡೆಬ್ಯೂ ಮಾಡೋ ಅವಕಾಶ ಸಿಗ್ತಿದೆ. ಆಲ್ಮೋಸ್ಟ್ ಮೂರು ವರ್ಷಗಳ ಬಳಿಕ ದೇವದತ್ ಪಡಿಕ್ಕಲ್ ಮತ್ತೆ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೀರಿಸ್ನಲ್ಲಿ ಈಗಾಗ್ಲೇ ಸರ್ಫರಾಜ್ ಖಾನ್, ಧ್ರುವ್ ಜ್ಯುರೆಲ್ರಂಥಾ ಹೈಲಿ ಟ್ಯಾಲೆಂಟೆಡ್ ಬ್ಯಾಟ್ಸ್ಮನ್ಗಳು ಡೆಬ್ಯೂ ಮಾಡಿದ್ದಾರೆ. ಈಗ ಕನ್ನಡಿಗ ದೇವದತ್ ಪಡಿಕ್ಕಲ್ ಸರದಿ ಬಂದಿದೆ.