ದ್ವಿಶತಕ ಸಿಡಿಸಿದ ದೇವದತ್ ಪಡಿಕ್ಕಲ್ – ಸೆಂಚುರಿ ಹೊಡೆದು ಅಬ್ಬರಿಸಿದ ಕೆ.ಎಲ್ ರಾಹುಲ್

ಉತ್ತರಾಖಂಡ್ ವಿರುದ್ಧ ನಡೆಯುತ್ತಿರುವ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಆಟಗಾರರು ಭರ್ಜರಿ ಇನ್ನಿಂಗ್ಸ್ ಕಟ್ಟಿದ್ದಾರೆ. ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ದೇವದತ್ ಪಡಿಕ್ಕಲ್ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಜೊತೆಗೆ ಕೆ.ಎಲ್ ರಾಹುಲ್ ಕೂಡಾ ಸೆಂಚುರಿ ಹೊಡೆದು ಅಬ್ಬರಿಸಿದ್ದಾರೆ.
ಇದನ್ನೂ ಓದಿ: ವೈಭವ್ ಸಾಧನೆ ಬಗ್ಗೆ ತಂದೆಗಿಲ್ಲ ತೃಪ್ತಿ – ಮಾರ್ಚ್ನಲ್ಲೇ ಟೀಂ INDಗೆ ಎಂಟ್ರಿ?
ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಉತ್ತರಾಖಂಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಗಿಳಿದ ಕರ್ನಾಟಕಕ್ಕೆ ಮಯಾಂಕ್ ಶಾಕ್ ನೀಡಿದರು. ಕೆಎಲ್ ರಾಹುಲ್ ಜೊತೆ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಕ್ರೀಸ್ ಗೆ ಆಗಮಿಸಿದ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕೆಎಲ್ ರಾಹುಲ್ ಜೊತೆಗೂಡಿ ಇನಿಂಗ್ಸ್ ಕಟ್ಟಿದ ದೇವದತ್ ಪಡಿಕ್ಕಲ್ 2ನೇ ವಿಕೆಟ್ಗೆ 278 ರನ್ ಗಳ ಜೊತೆಯಾಟವಾಡಿದರು. ರಾಹುಲ್ , ರಣಜಿಯಲ್ಲಿ ಸತತ ಎರಡನೇ ಶತಕ ಬಾರಿಸಿದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ವಿರುದ್ಧ ಗೆಲುವಿನ ಶತಕ ಬಾರಿಸಿದ್ದ ರಾಹುಲ್ ಸೆಮಿಫೈನಲ್ನಲ್ಲಿ ಶತಕ ಬಾರಿಸಿದರು. 211 ಎಸೆತಗಳನ್ನು ಎದುರಿಸಿದ ರಾಹುಲ್ 11 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 141 ರನ್ ಬಾರಿಸಿದರು. ಕೆ.ಎಲ್ ಔಟಾದ ನಂತರವೂ ನಾಯಕ ದೇವದತ್ತ ಪಡ್ಡಿಕ್ಕಲ್ ಭರ್ಜರಿ ಇನ್ನಿಂಗ್ಸ್ ಕಟ್ಟಿದರು. ಜವಾಬ್ದಾರಿಯುತ ಇನಿಂಗ್ಸ್ ಮುಂದುವರೆಸಿದ ದೇವದತ್ ಪಡಿಕ್ಕಲ್ 288 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ದ್ವಿಶತಕದ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ಗೆ ಮುಂದಾದ ಪಡಿಕ್ಕಲ್ 330 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 29 ಫೋರ್ ಗಳೊಂದಿಗೆ 232 ರನ್ ಬಾರಿಸಿ ಔಟಾದರು. ದೇವದತ್ ಪಡಿಕ್ಕಲ್ ಅವರ ಈ ಭರ್ಜರಿ ಡಬಲ್ ಸೆಂಚುರಿ ನೆರವಿನೊಂದಿಗೆ ಕರ್ನಾಟಕ ತಂಡ ತನ್ನ ಮೊತ್ತವನ್ನು ಹೆಚ್ಚಿಸಿಕೊಂಡಿದೆ. ಇನ್ನು ಕರುಣ್ ನಾಯರ್ ಅರ್ಧಶತಕ ಬಾರಿಸಿದ್ದು, ಕರ್ನಾಟಕ 5 ವಿಕೆಟ್ ಗಳ ನಷ್ಟಕ್ಕೆ 548 ರನ್ಗಳನ್ನು ಗಳಿಸಿದೆ.

ನೋಡಿರಿ

