ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಫೇಲ್ಯೂರ್ – ಚೆನ್ನೈ ವಿರುದ್ಧ ಆಡಲ್ವಾ ಪಡಿಕ್ಕಲ್?

ಕೋಲ್ಕತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ಇಂಪಾಕ್ಟ್ ಪ್ಲೇಯರ್ ಆಗಿ ದೇವದತ್ ಪಡಿಕ್ಕಲ್ಗೆ ಚಾನ್ಸ್ ನೀಡಿತ್ತು. ಸುಯೇಶ್ ಶರ್ಮಾ ಅವರ ಬದಲಿಗೆ ದೇವದತ್ ಪಡಿಕ್ಕಲ್ ರನ್ನ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್ಗೆ ಕಳಿಸಿತ್ತು. ಆದ್ರೆ ಕೊಟ್ಟ ಅವಕಾಶವನ್ನ ಬಳಸಿಕೊಳ್ಳದ ಪಡಿಕ್ಕಲ್ ಈಗ ಮುಂದಿನ ಪಂದ್ಯಕ್ಕೆ ಬೆಲೆ ತೆರಬೇಕಾಗಿದೆ. ಚೆನ್ನೈ ವಿರುದ್ಧದ ಮ್ಯಾಚ್ನಲ್ಲಿ ಬೆಂಚ್ ಕಾಯೋ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : ಭುವನೇಶ್ವರ್ & ಬೆಥೆಲ್ ಚೆನ್ನೈ ವಿರುದ್ಧ ಕಣಕ್ಕೆ? – ಚೆಪಾಕ್ ಪಿಚ್ ಯಾರಿಗೆ ಪ್ಲಸ್ ಆಗಲಿದೆ?
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್ಗಳಿಂದ ಗೆದ್ದು ಬೀಗಿದೆ. ಆರ್ಸಿಬಿ ತಂಡದ ಪರ ಎಲ್ಲ ಆಟಗಾರರು ಬೊಂಬಾಟ್ ಪ್ರದರ್ಶನ ನೀಡಿದ್ರು. ಆದರೆ, ಕನ್ನಡಿಗ ದೇವದತ್ ಪಡಿಕ್ಕಲ್ ಮಾತ್ರ ಎಲ್ಲರ ಮುಂದೆ ಡಲ್ ಎನಿಸಿದ್ರು. ಮೂರನೇ ಸ್ಲಾಟ್ನಲ್ಲಿ ಕ್ರೀಸ್ಗೆ ಬಂದ ಪಡಿಕ್ಕಲ್ ಸಿಡಿಸಿದ್ದು ಬರೀ 10 ರನ್ ಗಳನ್ನ ಮಾತ್ರ. 10 ಬಾಲ್ ಗಳನ್ನ ಫೇಸ್ ಮಾಡಿ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಸೋ ಆಡುವ ಅವಕಾಶ ಸಿಕ್ರೂ ಅಷ್ಟೊಂದು ಸಮರ್ಥವಾಗಿ ಬಳಿಸಿಕೊಳ್ಳಲಿಲ್ಲ. ಹೀಗಾಗಿ ಮುಂದಿನ ಪಂದ್ಯದಲ್ಲಿ ಚಾನ್ಸ್ ಸಿಗೋದು ಡೌಟ್ ಆಗಿದೆ. ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಪಡಿಕ್ಕಲ್ಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಇವರಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲಿಲ್ಲ. ಹೀಗಾಗಿ ಲಕ್ನೋ ತಂಡ ಕನ್ನಡಿಗ ಪಡಿಕ್ಕಲ್ ಅವರನ್ನು ರಿಲೀಸ್ ಮಾಡಿತ್ತು.
ಈ ವರ್ಷ ದೇವದತ್ ಪಡಿಕ್ಕಲ್ ಆರ್ ಸಿಬಿಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರು ಟೀಮ್ನಲ್ಲಿ ಇರೋದೇ ಇಬ್ಬರು ಕನ್ನಡಿಗರು. ಒಂದು ಮನೋಜ್ ಬಾಂಢಗೆ ಇನ್ನೊಂದು ಪಡಿಕ್ಕಲ್. ಬಾಂಢಗೆಗೆ ಇನ್ನೂ ಒಂದು ಅವಕಾಶ ಸಿಕ್ಕಿಲ್ಲ. ಇತ್ತ ಪಡಿಕ್ಕಲ್ ಕೊಟ್ರೂ ಬಳಸಿಕೊಳ್ತಿಲ್ಲ. ಪಡಿಕ್ಕಲ್ ರನ್ನ RCB 2 ಕೋಟಿಗೆ ಖರೀದಿಸಿದೆ. ಆದರೆ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಗೋದು ತುಂಬಾ ಕಡಿಮೆ. ಇದಕ್ಕೆ ಕಾರಣ ಅವರ ಕಳಪೆ ಫಾರ್ಮ್. ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ನೀಡಿದ ಪ್ರದರ್ಶನ ಅಷ್ಟಕಷ್ಟೇ. RCB ಮಿಡಲ್ ಆರ್ಡರ್ ಬ್ಯಾಟರ್ ಆಗಿ ಲಿಯಾಮ್ ಲಿವಿಂಗ್ಸ್ಟೋನ್, ಟಿಮ್ ಡೇವಿಡ್ ಮತ್ತು ಕೃನಾಲ್ ಪಾಂಡ್ಯ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ದಂಡು ಇದೆ. ಇಂತಹ ಪರಿಸ್ಥಿತಿಯಲ್ಲಿ ಪಡಿಕ್ಕಲ್ಗೆ ಅವಕಾಶ ಸಿಗೋದು ಕಷ್ಟ.
ದೇವದತ್ ಪಡಿಕ್ಕಲ್ ಆರ್ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. 2020ರ ಐಪಿಎಲ್‌ನಲ್ಲಿ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪಡಿಕ್ಕಲ್ ಪ್ರತಿನಿಧಿಸಿದ್ದರು. ತನ್ನ ಚೊಚ್ಚಲ ಐಪಿಎಲ್ ಸೀಸನ್ನಲ್ಲೇ 5 ಅರ್ಧ ಶತಕಗಳ ಸಹಾಯದಿಂದ 473 ರನ್ ಚಚ್ಚಿದ್ರು. 2021ರ ಸೀಸನ್ನಲ್ಲಿ ಪಡಿಕ್ಕಲ್ ಒಂದು ಶತಕ ಮತ್ತು ಅರ್ಧಶತಕದ ಸಹಾಯದಿಂದ 411 ರನ್ ಬಾರಿಸಿದ್ರು. 2 ಸೀಸನ್ನಲ್ಲೂ ಆರ್ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ರೂ ಇವರನ್ನು 2022ರ ಮೆಗಾ ಹರಾಜಿಗೆ ಮುನ್ನ ಬಿಡುಗಡೆ ಮಾಡಲಾಗಿತ್ತು. 2022ರ ಐಪಿಎಲ್‌ನಲ್ಲಿ ರಾಜಸ್ಥಾನ್ ಪರ 376 ರನ್ ಬಾರಿಸಿದ್ದ ಪಡಿಕ್ಕಲ್, ಐಪಿಎಲ್ 2023ರಲ್ಲಿ 261 ರನ್ ಮಾತ್ರ ಕಲೆ ಹಾಕಿದ್ದರು. 2024ರಲ್ಲಿ ಲಕ್ನೋ ತಂಡ ಸೇರಿದ್ದ ಪಡಿಕ್ಕಲ್ 7 ಪಂದ್ಯಗಳನ್ನು ಆಡಿ ಕೇವಲ 38 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಿದ್ರೂ ಬೆಂಗಳೂರು ತಂಡ ಖರೀದಿ ಮಾಡಿ ಚಾನ್ಸ್ ಕೊಡ್ತಿದೆ. ಆದ್ರೂ ಪಡಿಕ್ಕಲ್ ಅದನ್ನ ಸಮರ್ಥವಾಗಿ ಬಳಸಿಕೊಳ್ತಿಲ್ಲ. ದೇವದತ್ ಪಡಿಕ್ಕಲ್ ಅವರು ಇದುವರೆಗೂ ಐಪಿಎಲ್‌ನಲ್ಲಿ 65 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಒಂದು ಶತಕ, 9 ಅರ್ಧಶತಕ ಸಹಿತ 1569 ರನ್ ಗಳಿಸಿರುವ ದಾಖಲೆ ಹೊಂದಿದ್ದಾರೆ.
ಇನ್ನು ಪಡಿಕ್ಕಲ್ ಈ ಬಾರಿಯ ಹರಾಜಿನಲ್ಲಿ ಮೊದಲಿಗೆ ಅನ್ ಸೋಲ್ಡ್ ಆಗಿದ್ರು. ಆ ನಂತ್ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕರ್ನಾಟಕ ಮೂಲದ ದೇವದತ್ ಪಡಿಕ್ಕಲ್ ಅವರನ್ನು ಮೂಲ ಬೆಲೆಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮೊದಲನೇ ಪಂದ್ಯದಲ್ಲೇ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿಸಿದೆ. ಬಟ್ ಚೆನ್ನೈ ವಿರುದ್ಧದ ಮ್ಯಾಚ್ ಆರ್ಸಿಬಿ ಪಾಲಿಗೂ ಪ್ರತಿಷ್ಠೆಯಾಗಿದ್ದು ಈ ಪಂದ್ಯದಲ್ಲಿ ಅವಕಾಶ ಸಿಗೋದು ಡೌಟಿದೆ. ಒಟ್ನಲ್ಲಿ ಆರ್ಸಿಬಿಯಲ್ಲಿ ಕನ್ನಡಿಗರಂದ್ರೆ ಅಷ್ಟಕ್ಕಷ್ಟೇ. ಅಂತಾದ್ರಲ್ಲಿ ಸಿಕ್ಕಿರೋ ಚಾನ್ಸ್ನಲ್ಲೂ ಆಡಿಲ್ಲ ಅಂದ್ರೆ ಫ್ರಾಂಚೈಸಿಯವ್ರು ಕಂಪ್ಲೀಟ್ ಸೈಡ್ಲೈನ್ ಮಾಡಿಬಿಡ್ತಾರೆ. ಸೋ ಮುಂದಿನ ಪಂದ್ಯಗಳಲ್ಲಾದ್ರೂ ಪಡಿಕ್ಕಲ್ ಅಬ್ಬರಿಸಲೇಬೇಕಿದೆ.