ಟೆಸ್ಟ್ ಕ್ರಿಕೆಟಿಗೆ ದೇವದತ್ ಪಡಿಕ್ಕಲ್ ಪಾದಾರ್ಪಣೆ – 314ನೇ ಸಂಖ್ಯೆಯ ಜೆರ್ಸಿ ಪಡೆದ ಕನ್ನಡಿಗ

ಟೆಸ್ಟ್ ಕ್ರಿಕೆಟಿಗೆ ದೇವದತ್ ಪಡಿಕ್ಕಲ್ ಪಾದಾರ್ಪಣೆ – 314ನೇ ಸಂಖ್ಯೆಯ ಜೆರ್ಸಿ ಪಡೆದ ಕನ್ನಡಿಗ

ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಇಂಡಿಯಾ vs ಇಂಗ್ಲೆಂಡ್ ನಡುವೆ ಸೆಣಸಾಟ ನಡೆಯುತ್ತಿದೆ.. 5ನೇ ಟೆಸ್ಟ್ ಮ್ಯಾಚ್ ನಲ್ಲಿ ಟೀಮ್ ಇಂಡಿಯಾ ಹುಮ್ಮಸ್ಸಿನಲ್ಲೇ ಕಣಕ್ಕಿಳಿದಿದೆ. ಟೀಂ ಇಂಡಿಯಾ ಈಗಾಗ್ಲೇ ಸೀರಿಸ್ ಗೆದ್ದಾಗಿದೆ. ಇದರಲ್ಲಿ ಕನ್ನಡಿಗರು ಕೂಡಾ ಹೆಮ್ಮೆ ಪಡುವ ವಿಚಾರ ಇದೆ. ಕನ್ನಡಿಗ ದೇವದತ್ ಪಡಿಕ್ಕಲ್ 5ನೇ ಟೆಸ್ಟ್ ಮ್ಯಾಚ್ ಮೂಲಕ ಟೀಮ್ ಇಂಡಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: ಐದನೇ ಟೆಸ್ಟ್‌ನಲ್ಲಿ ದೇವದತ್ ಪಡಿಕ್ಕಲ್ ಡೆಬ್ಯೂ ಸಾಧ್ಯತೆ – ಕನ್ನಡಿಗನಿಗೆ ಟೀಮ್ ಇಂಡಿಯಾ ಡೋರ್ ಓಪನ್..!

ಇಂಗ್ಲೆಂಡ್‌ ವಿರುದ್ಧ ಐದನೇ ಹಾಗೂ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಚೊಚ್ಚಲ ಅವಕಾಶ ಪಡೆಯುವ ಮೂಲಕ ಕನ್ನಡಿಗ ದೇವದತ್‌ ಪಡಿಕ್ಕಲ್‌ ಅವರು ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಭಾರತ ಟೆಸ್ಟ್‌ ತಂಡದ 314ನೇ ಸಂಖ್ಯೆಯ ಜೆರ್ಸಿ ಹಾಗೂ ಕ್ಯಾಪ್‌ ಅನ್ನು ಎಡಗೈ ಆಟಗಾರ ಪಡೆದುಕೊಂಡಿದ್ದಾರೆ.

ಗುರುವಾರ ಆರಂಭವಾದ ಐದನೇ ಟೆಸ್ಟ್‌ ಪಂದ್ಯದ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಎರಡು ಬದಲಾವಣೆಯನ್ನು ತರಲಾಗಿದೆ. ರಜತ್‌ ಪಾಟಿದಾರ್‌ ಅವರು ಬುಧವಾರ ನೆಟ್ಸ್‌ನಲ್ಲಿ ಗಾಯಕ್ಕೆ ತುತ್ತಾಗಿದ್ದರು. ಈ ಕಾರಣದಿಂದ ಅವರ ಸ್ಥಾನದಲ್ಲಿ ದೇವದತ್‌ ಪಡಿಕ್ಕಲ್‌ಗೆ ಅವಕಾಶ ನೀಡಲಾಗಿದೆ ಹಾಗೂ ಕಳೆದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರು ಈ ಪಂದ್ಯಕ್ಕೆ ಮರಳಿದ್ದರಿಂದ ಆಕಾಶ್‌ ದೀಪ್ ತಮ್ಮ ಸ್ಥಾನವನ್ನು ಹಿರಿಯ ವೇಗಿಗೆ ಬಿಟ್ಟುಕೊಟ್ಟಿದ್ದಾರೆ.

ಸರ್ಫರಾಜ್ ಖಾನ್, ಧ್ರುವ್ ಜ್ಯುರೆಲ್, ಆಕಾಶ್ ದೀಪ್ ಇವೆರೆಲ್ಲಾ ಈ ಸೀರಿಸ್​​ನಲ್ಲೇ ಡೆಬ್ಯೂ ಮಾಡಿರೋದು. ಇದೀಗ ದೇವದತ್ ಪಡಿಕ್ಕಲ್​ ಸರದಿ ಬಂದಿರುವುದು ಕನ್ನಡಿಗರಿಗೂ ಕೂಡಾ ಖುಷಿ ಕೊಟ್ಟಿದೆ.

ಇನ್ನು ಈ ಟೆಸ್ಟ್​​ ಮ್ಯಾಚ್​​ನಲ್ಲಿ ಒಂದಷ್ಟು ರೆಕಾರ್ಡ್​ಗಳು ಕೂಡ ಆಗಬಹುದು. ಯಶಸ್ವಿ ಜೈಸ್ವಾಲ್ ಇನ್ನು 125 ರನ್ ಹೊಡೆದ್ರೆ ಒಂದು ರೆಕಾರ್ಡ್​​ನ್ನ ಬ್ರೇಕ್ ಮಾಡ್ತಾರೆ. ಇಂಗ್ಲೆಂಡ್​ ವಿರುದ್ಧದ ಈ ಸೀರಿಸ್​ನಲ್ಲಿ ನಾಲ್ಕು ಮ್ಯಾಚ್​ಗಳಲ್ಲಿ ಜೈಸ್ವಾಲ್ 655 ರನ್ ಹೊಡೆದಿದ್ದಾರೆ. ಧರ್ಮಶಾಲಾ ಮ್ಯಾಚ್​ನಲ್ಲಿ 125 ರನ್ ಮಾಡಿದ್ರೆ ಒಂದೇ ಸೀರಿಸ್​​ನಲ್ಲಿ ಹೈಯೆಸ್ಟ್ ಸ್ಕೋರ್ ಮಾಡಿದ ಭಾರತೀಯ ಕ್ರಿಕೆಟರ್​ ಅನ್ನೋ ರೆಕಾರ್ಡ್ ಜೈಸ್ವಾಲ್ ಹೆಸರಿಗೆ ಸೇರಿಕೊಳ್ಳುತ್ತೆ. 1970ರಲ್ಲಿ ಸುನಿಲ್ ಗವಾಸ್ಕರ್ ವೆಸ್ಟ್​ಇಂಡೀಸ್ ವಿರುದ್ಧದ ಸೀರಿಸ್​ನಲ್ಲಿ 774 ರನ್ ಹೊಡೆದಿದ್ರು. ಬಟ್ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ 1930ರಲ್ಲಿ ಇಂಗ್ಲೆಂಡ್​ ವಿರುದ್ಧ ಒಂದೇ ಸೀರಿಸ್​​ನಲ್ಲಿ 974 ರನ್​ ಹೊಡೆದಿದ್ದು ಅಲ್ಟಿಮೇಟ್ ರೆಕಾರ್ಡ್. ಮಾರ್ಡನ್ ಕ್ರಿಕೆಟರ್ಸ್​ಗಳಿಗೆ ಯಾರಿಗೂ ಕೂಡ ಈ ದಾಖಲೆಯಲ್ಲಿ ಬ್ರೇಕ್​ ಮಾಡೋಕೆ ಇದುವರೆಗೂ ಸಾಧ್ಯವಾಗಿಲ್ಲ.

ಹಾಗೆಯೇ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಹೊಸ ರೆಕಾರ್ಡ್ ಬರೆಯೋ ಸಾಧ್ಯತೆ ಇದೆ. ಇನ್ನು 10 ಸಿಕ್ಸರ್​​ಗಳನ್ನ ಹೊಡೆದ್ರೆ ಟೆಸ್ಟ್​ ಕ್ರಿಕೆಟ್​​ನಲ್ಲಿ ಭಾರತದ ಪರ ಹೈಯೆಸ್ಟ್ ಸಿಕ್ಸರ್ ಹೊಡೆದ ಕ್ರಿಕೆಟರ್​ ಎನ್ನಿಸಿಕೊಳ್ತಾರೆ. ವಿರೇಂದ್ರ ಸೆಹ್ವಾಗ್ ಟೆಸ್ಟ್​ನಲ್ಲಿ ಒಟ್ಟು 91 ಸಿಕ್ಸ್ ಹೊಡೆದಿದ್ದಾರೆ. ರೋಹಿತ್ ಶರ್ಮಾ 81 ಸಿಕ್ಸರ್​ಗಳನ್ನ ಹೊಡೆದಿದ್ದಾರೆ. ಹಾಗೆಯೇ ಆರು ಇನ್ನು ಸಿಕ್ಸರ್​ಗನ್ನ ಹೊಡೆದ್ರೆ ರೋಹಿತ್​ ಇಂಟರ್​​ನ್ಯಾಷನಲ್​ ಕ್ರಿಕೆಟ್​ನಲ್ಲಿ 600 ಸಿಕ್ಸರ್​ಗಳನ್ನ ಹೊಡೆದ ಫಸ್ಟ್ ಬ್ಯಾಟ್ಸ್​ಮನ್ ಎನ್ನಿಸಿಕೊಳ್ತಾರೆ.

Sulekha