ಗೀಳಿಡದ ಗಿಲ್ Vs ಪ್ರಚಂಡ ಪಡಿಕ್ಕಲ್ – ವಿಜಯ್ ಹಜಾರೆಯಲ್ಲೂ PRINCE ಫೇಲ್
BCCI ಆಯ್ಕೆ ಸಮಿತಿಗೆ ಕಣ್ಣಿಲ್ವಾ?

2025-26ರ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಇನ್ನೇನು ನಾಕೌಟ್ ಹಂತದ ಪಂದ್ಯಗಳು ಸ್ಟಾರ್ಟ್ ಆಗುತ್ತೆ. ಲೀಗ್ ಹಂತದ 6ನೇ ಪಂದ್ಯಗಳು ಇವತ್ತು ನಡೆದಿವೆ. ಌಂಡ್ ಇವತ್ತಿನ ಪಂದ್ಯಗಳಲ್ಲೂ ಸಾಕಷ್ಟು ಆಟಗಾರರು ಇಂಪ್ರೆಸ್ಸಿವ್ ಇನ್ನಿಂಗ್ಸ್ಗಳನ್ನ ಆಡಿದ್ದಾರೆ. ಆದ್ರೆ ತುಂಬಾನೇ ನಿರೀಕ್ಷೆ ಇಟ್ಕೊಂಡಿದ್ದ ಶುಭ್ಮನ್ ಗಿಲ್ ಒನ್ಸ್ ಅಗೇನ್ ಇಲ್ಲೂ ಸೌಂಡ್ ಮಾಡ್ಲಿಲ್ಲ. ಅತ್ತ ಕರ್ನಾಟಕ ಪರ ದೇವದತ್ ಪಡಿಕ್ಕಲ್ ಅಬ್ಬರ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ : IND Vs BAN ಸರಣಿಗಳೇ ಬ್ಯಾನ್? – ಪಾಕಿಸ್ತಾನದಂತೆಯೇ ಆಗುತ್ತಾ ಬಾಂಗ್ಲಾ?
ಭಾರತದ ಪ್ರತಿಷ್ಠಿತ ದೇಶೀಯ ಪಂದ್ಯಾವಳಿಯಾಗಿರೋ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾದ ಆಟಗಾರರೂ ಆಡಲೇಬೇಕು ಅಂತಾ ಬಿಸಿಸಿಐ ಕಟ್ಟಪ್ಪಣೆ ಹೊರಡಿಸಿದೆ. ಹೀಗಾಗಿಯೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಸ್ಟಾರ್ ಆಟಗಾರರೆಲ್ಲಾ ತಮ್ಮ ತಮ್ಮ ರಾಜ್ಯಗಳ ಪರ ಪಂದ್ಯಗಳನ್ನ ಆಡಿದ್ದಾರೆ. ಇನ್ನೂ ಕೆಲವ್ರು ಆಡ್ತಿದ್ದಾರೆ. ಇವತ್ತಿನ ಪಂದ್ಯದಲ್ಲಿ ಪಂಜಾಬ್ ಪರ ಟೀಂ ಇಂಡಿಯಾ ಟೆಸ್ಟ್ ಮತ್ತು ಏಕದಿನ ನಾಯಕ ಶುಭ್ಮನ್ ಗಿಲ್ ಕೂಡ ಕಣಕ್ಕಿಳಿದಿದ್ರು. ಆದ್ರೆ ಗಿಲ್ ಇಲ್ಲಿಯೂ ಸಲ್ಲದವರಾಗಿದ್ದಾರೆ.
ಡೊಮೆಸ್ಟಿಕ್ ನಲ್ಲೂ ಸದ್ದು ಮಾಡದ ಶುಭ್ ಮನ್ ಗಿಲ್!
ಇವತ್ತಿನ ಪಂದ್ಯಗಳ ಪೈಕಿ ಶುಭ್ಮನ್ ಗಿಲ್ ಮೇಲೆ ತುಂಬಾನೇ ಹೋಪ್ಸ್ ಇತ್ತು. ಯಾಕಂದ್ರೆ ಬೇರೆಲ್ಲಾ ಆಟಗಾರರಿಗಿಂತ ಗಿಲ್ ಆಡೋದು ಅವ್ರ ಕಡೆಯಿಂದ ಬಿಗ್ ಇನ್ನಿಂಗ್ಸ್ ಬರೋದು ತುಂಬಾನೇ ಮುಖ್ಯವಾಗಿತ್ತು. ಆದ್ರೆ ಗಿಲ್ ಪರಿಸ್ಥಿತಿ ಎಲ್ಲಿಯೂ ಸಲ್ಲದವರಂತಾಗಿದ್ದಾರೆ. ಗೋವಾ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ ಓಪನರ್ ಆಗಿ ಕಣಕ್ಕಿಳಿದ ಗಿಲ್ 12 ಎಸೆತಗಳಲ್ಲಿ 11 ರನ್ ಗಳಿಸಿ ಔಟ್ ಆಗಿದ್ದಾರೆ. ಗಿಲ್ ಅವ್ರ ಇದೇ ಫೇಲ್ಯೂರ್ ಈಗ ಬಿಸಿಸಿಐಗೂ ತಲೆನೋವು ತಂದಿಟ್ಟಿದೆ. ಕಳೆದ ವರ್ಷ ಟಿ-20 ಫಾರ್ಮೆಟ್ಗೆ ವೈಸ್ ಕ್ಯಾಪ್ಟನ್ ಮಾಡಿದ್ರೂ ಒಂದೇ ಒಂದು ಅರ್ಧಶತಕ ಬರ್ಲಿಲ್ಲ. ಹೀಗಾಗಿಯೇ 2026ರ ಟಿ-20 ವಿಶ್ವಕಪ್ ತಂಡದಿಂದ ಹೊರಗಿಟ್ಟಿದ್ದಾರೆ. ಈಗ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ಕ್ಯಾಪ್ಟನ್ ಆಗಿ ತಂಡವನ್ನ ಲೀಡ್ ಮಾಡ್ತಾರೆ. ಸೋ ಇಂಥಾ ಟೈಮಲ್ಲಿ ಫಾರ್ಮ್ ಕಳ್ಕೊಂಡಿರೋ ಗಿಲ್ ಯಾವಾಗ ಕಂ ಬ್ಯಾಕ್ ಮಾಡ್ತಾರೋ ಅನ್ನೋ ಟೆನ್ಷನ್ ಕಾಡ್ತಿದೆ. ಹೀಗೆ ಗಿಲ್ ಡಲ್ ಆಗಿದ್ರೆ ಅತ್ತ ದೇವದತ್ ಪಡಿಕ್ಕಲ್ ಮಾತ್ರ ದಾಖಲೆಗಳನ್ನೇ ಧೂಳೀಪಟ ಮಾಡ್ಕೊಂಡು ಮುನ್ನುಗ್ತಿದ್ದಾರೆ.
6ನೇ ಪಂದ್ಯದಲ್ಲಿ ಪಡಿಕ್ಕಲ್ ಪರಾಕ್ರಮ.. ಶತಕದಂಚಿನಲ್ಲಿ ಔಟ್!
ಪ್ರಸ್ತುತ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕದ ತಂಡ ಅನ್ಸ್ಟಾಪಬಲ್ ಟೀಂ ಆಗಿ ಪರ್ಫಾಮ್ ಮಾಡ್ತಿದೆ. ತಂಡದ ಪರ ಸಾಲಿಡ್ ಫಾರ್ಮ್ನಲ್ಲಿರೋ ದೇವದತ್ ಪಡಿಕ್ಕಲ್ ಇವತ್ತಿನ ಮ್ಯಾಚಲ್ಲೂ ಶೈನ್ ಆದ್ರು. ಅಹಮದಾಬಾದ್‌ನ ಗುಜರಾತ್ ಕಾಲೇಜು ಮೈದಾನದಲ್ಲಿ ರಾಜಸ್ಥಾನ ವಿರುದ್ಧ ಕರ್ನಾಟಕ ಪರ ಮತ್ತೆ ಅಬ್ಬರಿಸಿದ್ರು. 82 ಎಸೆತಗಳಲ್ಲಿ 12 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 91 ರನ್ ಗಳಿಸಿದರು. ಇನ್ನೇದು ಶತಕಕ್ಕೆ 9 ರನ್‌ಗಳ ಅಗತ್ಯ ಇದ್ದಾಗ ವಿಕೆಟ್ ಒಪ್ಪಿಸಿದ್ರು. ಪಡಿಕ್ಕಲ್ ಈ ಟೂರ್ನಿಯಲ್ಲಿ ತಮ್ಮ ಐದನೇ ಶತಕ ಗಳಿಸುವ ಅವಕಾಶವನ್ನು ಸ್ವಲ್ಪದರಲ್ಲೇ ಕಳ್ಕೊಂಡ್ರು. ಹೀಗಿದ್ರೂ ಅದ್ಭುತ ದಾಖಲೆ ಬರೆದಿದ್ದಾರೆ. ಆರು ಇನ್ನಿಂಗ್ಸ್‌ಗಳಲ್ಲಿ 100.83 ಸರಾಸರಿಯಲ್ಲಿ 605 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಸೇರಿವೆ. ಹಾಗೇ ಪಡಿಕ್ಕಲ್ ಮೂರು ವಿಜಯ್ ಹಜಾರೆ ಟ್ರೋಫಿ ಸೀಸನ್ಗಳಲ್ಲಿ 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ.. ಇದಕ್ಕೂ ಮೊದಲು, ಪಡಿಕ್ಕಲ್ 2020/21 ರ ವಿಜಯ್ ಹಜಾರೆ ಟ್ರೋಫಿ ಋತುವಿನಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 737 ರನ್ ಮತ್ತು 2019/20 ರ ಋತುವಿನಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 609 ರನ್ ಗಳಿಸಿದ್ದರು. ಈ ಆವೃತ್ತಿಯಲ್ಲಿ ಪಡಿಕ್ಕಲ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಹೀಗಿದ್ರೂ ಭಾರತ ತಂಡದಲ್ಲಿ ಮಾತ್ರ ಅವಕಾಶ ಸಿಕ್ಕಿಲ್ಲ. ಅವ್ರ ಅದ್ಭುತ ಫಾರ್ಮ್ ಹೊರತಾಗಿಯೂ ಜನವರಿ 11 ರಿಂದ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಅವರನ್ನು ಭಾರತೀಯ ತಂಡದಲ್ಲಿ ಸೆಲೆಕ್ಟ್ ಮಾಡಿಲ್ಲ. ಭಾರತದ ಪರ ಪಡಿಕ್ಕಲ್ ಎರಡು ಟೆಸ್ಟ್ ಮತ್ತು ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಕೊನೆಯ ಬಾರಿಗೆ ಭಾರತ ಪರ 2024 ರ ನವೆಂಬರ್‌ನಲ್ಲಿ ಆಡಿದ್ದರು. ಲಿಸ್ಟ್ ಎ ಕ್ರಿಕೆಟ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರೂ ಭಾರತದ ಪರ ಏಕದಿನ ಮಾದರಿಗೆ ಡೆಬ್ಯೂ ಮಾಡಲು ಅವಕಾಶ ಸಿಕ್ಕಿಲ್ಲ.
ವಿಜಯ್ ಹಜಾರೆಯಲ್ಲಿ ಸತತ 6ನೇ ಪಂದ್ಯ ಗೆದ್ದ ಕರ್ನಾಟಕ!
ಇನ್ನು ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡ ಅಜೇಯ ಯಾತ್ರೆ ಮುಂದುವರಿಸಿದೆ. ರಾಜಸ್ಥಾನ ವಿರುದ್ಧದ 6ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿತು. 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 324 ರನ್ ಗಳಿಸಿತು. ನಾಯಕ ಮಯಾಂಕ್ ಅಗರ್ವಾಲ್ 107 ಎಸೆತಗಳಲ್ಲಿ 100 ರನ್ ಗಳಿಸಿದರು. ಪಡಿಕ್ಕಲ್ ಮತ್ತು ಮಯಾಂಕ್ ಜೊತೆಯಾಟದಲ್ಲಿ ಕರ್ನಾಟಕ 183 ರನ್‌ಗಳ ಪಾಲುದಾರಿಕೆ ಹೊಂದಿತ್ತು. 325 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ ಪರ ಟಾಪ್ ಆರ್ಡರ್ ಬ್ಯಾಟಿಂಗ್ನಲ್ಲಿ ಬಿಗ್ ಇನ್ನಿಂಗ್ಸ್ ಬರ್ಲಿಲ್ಲ. ಹೀಗಾಗಿ ಈ ಪಂದ್ಯವನ್ನ ಕರ್ನಾಟಕ ತಂಡ ಗೆದ್ದು ನಾಕೌಟ್ ಸುತ್ತಿಗೆ ಸೆಲೆಕ್ಟ್ ಆಗಿದೆ. ಒಟ್ನಲ್ಲಿ ವಿಜಯ್ ಹಜಾರೆಯಲ್ಲಿ ಕರ್ನಾಟಕದ ಪ್ರದರ್ಶನ ಮತ್ತು ದೇವದತ್ ಪಡಿಕ್ಕಲ್ ಬ್ಯಾಟಿಂಗ್ ನೆಕ್ಸ್ಟ್ ಲೆವೆಲ್ನಲ್ಲಿದೆ. ದುರಂತ ಏನಂದ್ರೆ ಇಂಥಾ ಬೆಂಕಿ ಫಾರ್ಮ್ನಲ್ಲಿರೋ ಪಡಿಕ್ಕಲ್ಗೆ ಭಾರತದ ಪರ ಪಂದ್ಯಗಳನ್ನ ಆಡೋಕೆ ಅವಕಾಶ ಕೊಡ್ತಿಲ್ಲ. ಇನ್ನಾದ್ರೂ ಬಿಸಿಸಿಐ ಕಣ್ತೆರೆದು ನೋಡ್ಬೇಕಿದೆ. ಆಡದೇ ಇದ್ದೋರಿಗೆ ಅವಕಾಶ ಕೊಟ್ಟೂ ಕೊಟ್ಟು ಶೇಪ್ಔಟ್ ಆಗೋದಕ್ಕಿಂತ ಪಡಿಕ್ಕಲ್ರಂಥ ಪ್ರತಿಭಾವಂತರನ್ನ ಗುರುತಿಸಿ ಬೆಳೆಸಬೇಕಿದೆ.

ನೋಡಿರಿ

