ಇನ್ನುಮುಂದೆ ನಕಲಿ ಔಷಧಿಗಳ ಆಟ ನಡೆಯಲ್ಲ – ಔಷಧಿಗಳ ಮೇಲೆ QR ಕೋಡ್ ಕಡ್ಡಾಯ!

ಇನ್ನುಮುಂದೆ ನಕಲಿ ಔಷಧಿಗಳ ಆಟ ನಡೆಯಲ್ಲ – ಔಷಧಿಗಳ ಮೇಲೆ QR ಕೋಡ್ ಕಡ್ಡಾಯ!

ನವದೆಹಲಿ: ಕಾಲ ಬದಲಾಗಿದೆ. ಈಗ ಎಲ್ಲವೂ ಡಿಜಿಟಲೀಕರಣಗೊಂಡಿದೆ. ಡಿಜಿಟಲೀಕರಣಗೊಂಡಂತೆ ಮೋಸವೂ ಹೆಚ್ಚಾಗುತ್ತಿದೆ. ಯಾವುದು ಅಸಲಿ.. ಇನ್ಯಾವುದು ನಕಲಿ ಎಂಬುವುದು ಗೊತ್ತಾಗೋದಿಲ್ಲ. ಅಷ್ಟರ ಮಟ್ಟಿಗೆ ಕಳ್ಳರು ತಮ್ಮ ಕೈಚಳಕ ತೋರಿಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ನಕಲಿ ಔಷಧಿಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನಕಲಿ ಔಷಧಿ ಮಾರಾಟ ತಡೆಗಟ್ಟಲು ಕೇಂದ್ರ ಸರ್ಕಾರ ಹೊಸ ಪ್ಲಾನ್‌ ಮಾಡಿದೆ.

ಮೆಡಿಕಲ್‌ಗಳಲ್ಲಿ ಸಿಗುವ ಎಲ್ಲಾ ಔಷಧಗಳು ನಕಲಿಯೇ, ಅಸಲಿಯೇ? ವೈದ್ಯರು ಹೇಳಿದ ಔಷಧಿ ಇದಾ, ಅದಾ ಅಂತಾ ನಮಗೆ ಗೊಂದಲ ಇರುತ್ತದೆ. ಇನ್ನುಮುಂದೆ ಅಂತಹ ಭಯದಿಂದ ಮುಕ್ತರಾಗಬಹುದು. ಏಕೆಂದರೆ ದೇಶದ 300 ಔಷಧ ಬ್ರಾಂಡ್‌ಗಳು ತಮ್ಮ ಔಷಧಿಗಳ ಮೇಲೆ ಕ್ಯೂಆರ್ ಕೋಡ್ ಅಥವಾ ಬಾರ್ ಕೋಡ್ ಹಾಕುವುದು ಕಡ್ಡಾಯವಾಗಿದೆ ಕೇಂದ್ರ ಸರ್ಕಾರ ಆದೇಶ ನೀಡಿದ್ದು, ಈಗಾಗಲೇ ಇದು ಜಾರಿಗೆ ಬಂದಿದೆ.

ಇದನ್ನೂ ಓದಿ: ಮೊಸಳೆ ನೀರಿನಿಂದ ದಡಕ್ಕೆ ಬಂದಿದ್ದೇ ತಪ್ಪಾಯ್ತು.. – ಬಡಪಾಯಿ ಜೀವಕ್ಕೆ ಗತಿ ಕಾಣಿಸಿದ ಬೇಟೆಗಾರರು!

ದೇಶದಲ್ಲಿ ಹೆಚ್ಚುತ್ತಿರುವ ನಕಲಿ ಔಷಧಗಳ ದಂಧೆಗೆ ಕಡಿವಾಣ ಹಾಕಲು ಮತ್ತು ತಡೆಯಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಔಷಧಿಗಳ ಹಿಂದೆ ಇನ್ನುಮುಂದೆ QR ಕೋಡ್ ಅನ್ನು ಮುದ್ರಣ ಮಾಡಲಾಗುತ್ತದೆ. ಈ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಈ ಔಷಧಿಗಳು ಅಸಲಿಯೇ? ನಕಲಿ? ಎಂದು ತಿಳಿಯುವ ಅವಕಾಶವಿರುತ್ತದೆ. ಈ ನಿಟ್ಟಿನಲ್ಲಿ, ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಫಾರ್ಮಾ ಕಂಪನಿಗಳಿಗೆ ಪ್ರಮುಖ ನಿರ್ದೇಶನಗಳನ್ನು ನೀಡಿದೆ.

ಡಿಸಿಜಿಐ ನಿರ್ದೇಶನದ ಪ್ರಕಾರ, 300ಕ್ಕೂ ಹೆಚ್ಚು ಔಷಧೀಯ ಬ್ರ್ಯಾಂಡ್‌ಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಲ್ಲೆಗ್ರಾ, ಶೆಲ್ಕೋಲ್, ಕ್ಯಾಲ್ಪೋಲ್, ಡೊಲೊ ಮತ್ತು ಮೆಫ್ಟೋಲ್ ಸೇರಿ ಸುಮಾರು 300 ಔಷಧಿಗಳಿಗೆ QR ಕೋಡ್ ಹಾಕಬೇಕು ಅಂತಾ ಕೇಂದ್ರ ಹೇಳಿದೆ. ಈ ಬಾರ್ ಕೋಡ್‌ಗಳು ಅಥವಾ ಕ್ಯೂಆರ್ ಕೋಡ್‌ಗಳನ್ನು ನೀಡಲು ವಿಫಲವಾದರೆ ಭಾರಿ ದಂಡ ತುಂಬಲು ಸಿದ್ಧರಾಗಿರಬೇಕು ಎಂದು ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಔಷಧ ಕಂಪನಿಗಳಿಗೆ ಎಚ್ಚರಿಕೆ ನೀಡಿದೆ.

ಔಷಧಿ ಕಂಪನಿಗಳು ಪ್ಯಾಕ್‌ ಮೇಲೆ ಮುದ್ರಣ ಮಾಡಿರುವ QR ಕೋಡ್ ನಲ್ಲಿ  ಔಷಧದ ಹೆಸರು, ಬ್ರಾಂಡ್ ಹೆಸರು, ತಯಾರಕರ ಹೆಸರು ಮತ್ತು ವಿಳಾಸ, ಬ್ಯಾಚ್ ಸಂಖ್ಯೆ, ತಯಾರಿಕೆಯ ದಿನಾಂಕ, ಔಷಧದ ಮುಕ್ತಾಯ ದಿನಾಂಕ ಮತ್ತು ತಯಾರಕರ ಪರವಾನಗಿ ಸಂಖ್ಯೆ ಮುಂತಾದ ವಿವರಗಳನ್ನು ಮುದ್ರಣ ಮಾಡಲಾಗಿದೆ.

suddiyaana