ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಒಂಟೆ ಮೇಳ – ಏನಿದರ ವಿಶೇಷತೆ ಗೊತ್ತಾ?

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಒಂಟೆ ಮೇಳ – ಏನಿದರ ವಿಶೇಷತೆ ಗೊತ್ತಾ?

ಸಾಂಪ್ರದಾಯಿಕ ಮೇಳಗಳು ಅವಿಸ್ಮರಣೀಯ ಅನುಭವ ನೀಡುತ್ತದೆ. ಅದರಲ್ಲೂ ಮಹಿಳೆಯರಿಗಂತೂ ಇಂತಹ ಮೇಳಗಳು ಅಂದರೆ ಪಂಚಪ್ರಾಣ. ಅಂತಹ ಒಂದು ಸುಂದರ ಮೇಳ  ವರ್ಷಕ್ಕೊಮ್ಮೆ ನಡೆಯುವ ಪುಷ್ಕರ್‌ ಮೇಳ. ಈ ಮೇಳದಲ್ಲಿ ಭಾರತೀಯರು ಮಾತ್ರವಲ್ಲದೆ, ವಿದೇಶಿಗರು ಕೂಡ ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಈ ಮೇಳಕಗಕೆ ಕಾತರದಿಂದ ಕಾಯ್ತಿರುತ್ತಾರೆ.

ಪ್ರಶಾಂತವಾದ ಪುಷ್ಕರ್ ಪಟ್ಟಣ ವಿಶ್ವದ ಪ್ರವಾಸಿಗರನ್ನು ಶೀಘ್ರದಲ್ಲೇ ಸ್ವಾಗತಿಸಲಿದೆ. ವಾರ್ಷಿಕ ಪುಷ್ಕರ್ ಒಂಟೆ ಮೇಳ 2023  ಆಯೋಜನೆಗೆ ಪುಷ್ಕರ್ ಪಟ್ಟಣ ಕಾಯುತ್ತಿದೆ.. ಇದನ್ನು ‘ಒಂಟೆಗಳ ಮೇಳ’ ಎಂದು ಸಹ ಕರೆಯಲಾಗುತ್ತದೆ. ವಾರ್ಷಿಕ ಪುಷ್ಕರ್ ಒಂಟೆ ಮೇಳ ನವೆಂಬರ್ 20ರಿಂದ 28ರವರೆಗೆ ನಡೆಯಲಿದೆ. ಮೇಳದಲ್ಲಿ ರಾಜಸ್ಥಾನಿ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ನೋಡಬಹುದು. ವಾಸ್ತವವಾಗಿ, ಪುಷ್ಕರ್ ಮೇಳ ರಾಜಸ್ಥಾನದ ಸಾಂಸ್ಕೃತಿಕ ಮತ್ತು ಶ್ರೀಮಂತ ಸಂಪ್ರದಾಯಗಳನ್ನು ಅನಾವರಣ ಮಾಡುವ ವೇದಿಕೆ. ಪ್ರಪಂಚದಾದ್ಯಂತದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪುಷ್ಕರ್ ಜಾತ್ರೆಯು ಪ್ರಾಥಮಿಕವಾಗಿ ಜಾನುವಾರು ವ್ಯಾಪಾರದ ಉದ್ದೇಶದಿಂದ ಕೂಡಿದೆ. ಈ ಸಮಯದಲ್ಲಿ ಬೃಹತ್ ಪ್ರಮಾಣದಲ್ಲಿ ಜಾತ್ರೆ ನಡೆಯುತ್ತದೆ.

ಇದನ್ನೂ ಓದಿ: ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿ ಊದಿಕೊಂಡಿದ್ಯಾ? – Smart Phone ತುಂಬಾ ಬಿಸಿಯಾದ್ರೆ ಬ್ಲಾಸ್ಟ್ ಆಗುತ್ತಾ?

ಒಂದು ವೇಳೆ ನೀವು ಬೀದಿ-ಛಾಯಾಗ್ರಹಣದಲ್ಲಿ ಆಸಕ್ತಿ ಹೊಂದಿದ್ದರೆ, ಅದನ್ನು ಪ್ರಯತ್ನಿಸಲು ಪುಷ್ಕರ್ ಒಂಟೆ ಮೇಳ ಅತ್ಯುತ್ತಮ ಸ್ಥಳ. ಇಲ್ಲಿ ನೀವು ಸಾವಿರಾರು ಒಂಟೆಗಳನ್ನು ಕಾಣಬಹುದು, ಎಲ್ಲವನ್ನೂ ಸುಂದರವಾಗಿ ವರ್ಣರಂಜಿತವಾಗಿ ಅಲಂಕರಿಸಿರುತ್ತಾರೆ. ಒಂಟೆ ಓಟಗಳು, ಒಂಟೆ ನೃತ್ಯ ಪ್ರದರ್ಶನಗಳು, ಜಾನಪದ ಸಂಗೀತ ಮತ್ತು ನೃತ್ಯ ಪ್ರದರ್ಶನಗಳು, ಅಕ್ರೋಬ್ಯಾಟ್‌ಗಳು, ಸಾಂಪ್ರದಾಯಿಕ ಬೊಂಬೆ ಪ್ರದರ್ಶನಗಳು ಮತ್ತು ಹಲವಾರು ಇತರ ಸ್ಪರ್ಧೆಗಳಿಗೆ ನೀವು ಸಾಕ್ಷಿಯಾಗಬಹುದು.ಹೀಗಾಗಿ ಅವಕಾಶ ಇದ್ದವರು ಒಂಟೆ ಮೇಳದ ಅವಧಿಯಲ್ಲಿ ರಾಜಸ್ಥಾನಕ್ಕೊಮ್ಮೆ ಭೇಟಿ‌ ನೀಡಿ.

Shwetha M