ವೆಂಟಿಲೇಟರ್‌ನಲ್ಲಿ ಬೀಡಿ ಸೇದಿದ ರೋಗಿ – ಆತನಚ ಎಡವಟ್ಟಿನಿಂದ ಆಸ್ಪತ್ರೆಗೆ ಬೆಂಕಿ!
ಕೆಲವರು ಬೀಡಿ, ಸಿಗರೇಟು ಸೇದೋ ಅಭ್ಯಾಸ ಹೊಂದಿರುತ್ತಾರೆ. ಈ ಅಭ್ಯಾಸ ಬಿಡಬೇಕು ಅಂತಾ ಎಷ್ಟು ಒತ್ತಾಯ ಮಾಡಿದ್ರೂ ಕೆಲವರಿಗೆ ಬೇಗ ಬಿಡಲು ಆಗೋದಿಲ್ಲ. ಇಂತಹ ವ್ಯಕ್ತಿ ಯಾವುದೇ ಸಂದರ್ಭದ ಬಂದ್ರೂ ಆ ಚಟವನ್ನು ಬಿಡೋದಿಲ್ಲ. ಊರು ಮುಳುಗಿದ್ರೂ ಆತ ಆ ಬಗ್ಗೆ ಯೋಚಿಸೋದಿಕ್ಕೆ ಹೋಗೋದಿಲ್ಲ. ಏನ್ ಬೇಕಾದ್ರೂ ಆಗ್ಲಿ ತಾನು ಬೀಡಿ ಸೇದಬೇಕು, ಕುಡಿಬೇಕು ಅಂತಾ ಯೋಚಿಸುತ್ತಾರೆ. ಇಲ್ಲೊಬ್ಬ ವ್ಯಕ್ತಿ ಬೀಡಿ ಸೇದಿದ್ದು, ಇದರಿಂದಾಗಿ ಆಸ್ಪತ್ರೆಗೆ ಬೆಂಕಿ ತಗುಲಿದೆ.
ಹೌದು, ಅಚ್ಚರಿಯಾದ್ರೂ ಸತ್ಯ. ಆಸ್ಪತ್ರೆಯೊಂದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ. ಅದೂ ಈ ಅಗ್ನಿ ಅವಘಡಕ್ಕೆ ಕಾರಣ ಬೀಡಿ! ಹೌದು, ಅಸ್ಪತ್ರೆಯ ಉಸಿರಾಟದ ಮಧ್ಯಂತರ ಆರೈಕೆ ಘಟಕದಲ್ಲಿ ಆಮ್ಲಜನಕ-ಬೆಂಬಲ ಪಡೆಯುತ್ತಿದ್ದ ರೋಗಿಗೆ ಬೀಡಿ ಹೊಡೆಯುವ ಚಟ ಹೊಂದಿದ್ದಾರೆ. ಮೂಲಗಳು ಹೇಳುವಂತೆ ಉಸಿರಾಟ ಮತ್ತು ಹೃದಯ ಸಂಬಂಧಿ ಕಾಯಿಲೆಗೆ ದಾಖಲಾಗಿದ್ದ ವ್ಯಕ್ತಿಗೆ ತನ್ನ ಕಡುಬಯಕೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಐಸಿಯುನಲ್ಲೇ ಬೀಡಿ ಸೇದಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿ ಬೀಡುಬಿಟ್ಟಿರುವ ರಷ್ಯಾಗೆ ದೊಡ್ಡ ಶಾಕ್! – ಸೇನಾಪಡೆಗಳಿಗೆ ಇಲಿ ಜ್ವರ, ಕಣ್ಣಲ್ಲಿ ರಕ್ತಸ್ರಾವ!
ಬಳಿಕ ಆಸ್ಪತ್ರೆಯಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅನಾಹುತದ ಮುನ್ಸೂಚನೆ ನೀಡಿದೆ. ಬಳಿಕ ತಕ್ಷಣ ಎಚ್ಚೆತ್ತ ಸಿಬ್ಬಂದಿ ಈ ಘಟನೆಯನ್ನು ದೊಡ್ಡದಾಗದಂತೆ ನೋಡಿಕೊಂಡಿದ್ದಾರೆ. ಬೇಗನೇ ನಂದಿಸುವ ಮೂಲಕ ಯಾವುದೇ ಅನಾಹುತವನ್ನು ತಪ್ಪಿಸಿದ್ದಾರೆ.
ಮಧ್ಯವಯಸ್ಕ ರೋಗಿಯು ಬೀಡಿಗಾಗಿ ಪ್ರಲೋಭನೆಗೆ ಒಳಗಾಗಿದ್ದು, ಬಳಿಕ ಬೀಡಿ ಸೇದಿದ್ದಾರೆ. ಆದರೆ, ಬೆಂಕಿ ಕಾಣಿಸಿಕೊಂಡ ಬಳಿಕ ಕುಟುಂಬ ಸದಸ್ಯರು ಮನವಿ ಮಾಡಿದ ನಂತರ, ಆಸ್ಪತ್ರೆ ಸಿಬ್ಬಂದಿ ಬೇಗನೇ ಬೆಂಕಿ ನಂದಿಸಿದ್ದಾರೆ. ಅಪಘಾತದಿಂದ ಉಂಟಾದ ಸಣ್ಣ ಬೆಂಕಿಯನ್ನು ನಿಮಿಷಗಳಲ್ಲಿ ನಂದಿಸಲಾಗಿದೆ ಎಂದು ಆಸ್ಪತ್ರೆಯ ಪ್ರಾಧಿಕಾರವು ಈ ಸಂಬಂಧ ತನ್ನ ಅಧಿಕೃತ ಹೇಳಿಕೆ ನೀಡಿದೆ.
ಇನ್ನು, ಮೂಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಇಲ್ಲದ ಕಾರಣ ರೋಗಿಯು ಹೀಗೆ ಮಾಡಿದ್ದಾರೆ ಎಂದೂ ಹೇಳಲಾಗಿದೆ. ಜಾಮ್‌ನಗರದ ಜಿಜಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಮಧ್ಯವಯಸ್ಕ ವ್ಯಕ್ತಿಯನ್ನು ಉಸಿರಾಟದ ತೊಂದರೆಯ ದೂರಿನಿಂದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಪರೀಕ್ಷೆಗಳ ನಂತರ, ಕರ್ತವ್ಯದಲ್ಲಿದ್ದ ವೈದ್ಯರು ಅವರನ್ನು RICU ಗೆ ಸ್ಥಳಾಂತರಿಸಲು ಸಲಹೆ ನೀಡಿದರು. ಅವರು ಕ್ರಾನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ) ರೋಗಿಯಾಗಿದ್ದು, ಅವರ ಹೃದಯವೂ ದುರ್ಬಲವಾಗಿದೆ ಎಂದು ವೈದ್ಯರು ಹೇಳಿದ್ದಾರೆಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿದೆ.
ವ್ಯಕ್ತಿ ವೆಂಟಿಲೇಟರ್‌ನಲ್ಲಿದ್ದರು ಮತ್ತು ವ್ಯಸನದಿಂದ ಅವರು ಬೀಡಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ. ಆದರೆ, ನಿರುಪದ್ರವವೆಂದು ತೋರುವಷ್ಟು, ಅವರ ಕೈಯಲ್ಲಿ ಬೆಂಕಿ ಕಾಣಿಸಿಕೊಂಡಿತು, ಅದು ಅವರ ಮಾಸ್ಕ್‌ಗೆ ಹರಡಿತು ಮತ್ತು ಆ ವ್ಯಕ್ತಿಯ ಬೆರಳುಗಳು ಮತ್ತು ಹಣೆಯ ಮೇಲೆ ಸುಟ್ಟ ಗಾಯಗಳಾಗಿವೆ. ಬೆಡ್‌ನ ಬಳಿ ಬೆಂಕಿಪೊಟ್ಟಣ ಪತ್ತೆಯಾಗಿದೆ. ಭಯದಿಂದ ಬೀಡಿ ವಿಲೇವಾರಿ ಮಾಡಿರಬಹುದು ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಡಿಯಲ್ಲಿ ಘಟನೆಯ ಸಮಯದಲ್ಲಿ 15 ರೋಗಿಗಳು ಇದ್ದರು ಎಂದು ತಿಳಿದುಬಂದಿದೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಜಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ದೀಪಕ್ ತಿವಾರಿ, ಈ ಘಟನೆ ಆಕಸ್ಮಿಕವಾಗಿದೆ, ಸಿಬ್ಬಂದಿ ತಕ್ಷಣ ಧಾವಿಸಿ ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿದರು, ಒಬ್ಬ ರೋಗಿಗೆ ಸಣ್ಣ ಗಾಯವಾಗಿದ್ದು, ಇತರ ಎಲ್ಲಾ ರೋಗಿಗಳು ಸುರಕ್ಷಿತವಾಗಿದ್ದಾರೆ, ಸ್ಥಳಾಂತರಿಸುವಿಕೆಯ ಅಗತ್ಯವಿಲ್ಲ ಎಂದಿದ್ದಾರೆ.