ಪ್ರಜಾಪ್ರಭುತ್ವ, ಆಡಳಿತ ವರ್ಗ, ಮಾಧ್ಯಮಗಳು ಕೇಂದ್ರದ ಕಪಿಮುಷ್ಠಿಯಲ್ಲಿದೆ – ಕೇಂದ್ರದ ವಿರುದ್ದ ಕಾಂಗ್ರೆಸ್‌ ಟೀಕಾಸ್ತ್ರ

ಪ್ರಜಾಪ್ರಭುತ್ವ, ಆಡಳಿತ ವರ್ಗ, ಮಾಧ್ಯಮಗಳು ಕೇಂದ್ರದ ಕಪಿಮುಷ್ಠಿಯಲ್ಲಿದೆ – ಕೇಂದ್ರದ ವಿರುದ್ದ ಕಾಂಗ್ರೆಸ್‌ ಟೀಕಾಸ್ತ್ರ

ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 9 ವರ್ಷ ಪೂರೈಸಿದೆ. ಇನ್ನೇನು ಲೋಕಸಭೆ ಚುನಾವಣೆ ಕೂಡ ಹತ್ತಿರ ಬರುತ್ತಿದೆ. ಈ ಹೊತ್ತಲ್ಲೇ ರಾಜ್ಯ ಕಾಂಗ್ರೆಸ್‌ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ದ್ವೇಷವನ್ನು ಬಿತ್ತುತ್ತಿದೆ ಎಂದು ಆರೋಪಿಸಿದೆ.

ಈ ಬಗ್ಗೆ ರಾಜ್ಯ ಕಾಂಗ್ರೆಸ್‌ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಕುರಿತಾಗಿ ಆನಿಮೇಟೆಡ್‌ ವಿಡಿಯೋವನ್ನು ಟ್ವೀಟ್‌ ಮಾಡಿದೆ. ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ, ಆಡಳಿತ ವರ್ಗ, ಮಾಧ್ಯಮಗಳು ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿವೆ ಎಂದು ಕಾಂಗ್ರೆಸ್ ದೂರಿದೆ.

ಇದನ್ನೂ ಓದಿ: ಶಾಲಾ ವಿದ್ಯಾರ್ಥಿಗಳ ಶೂ, ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆ – ಮಕ್ಕಳ ಹಣಕ್ಕೂ ಸರ್ಕಾರ ಕತ್ತರಿ!

ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನಗಳ ಮೌಲ್ಯಗಳನ್ನು ಗಂಟುಮೂಟೆ ಕಟ್ಟಿ ದ್ವೇಷವನ್ನು ಬಿತ್ತಿ, ಸರ್ವಾಧಿಕಾರವನ್ನು ಸ್ಥಾಪಿಸಲು ಹೊರಟಿರುವ ಬಿಜೆಪಿ ಹೊರಡಿದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಬಿಜೆಪಿಯ ಎಲ್ಲಾ ಪ್ರಯತ್ನಗಳನ್ನು ಪ್ರೀತಿ, ಸಹಬಾಳ್ವೆಯ ಸಂದೇಶಗಳ ಮೂಲಕ ರಾಹುಲ್‌ ಗಾಂಧಿ ಅವರು ಸೋಲಿಸಲಿದ್ದಾರೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದಾರೆ ಎಂದು ಕಾಂಗ್ರೆಸ್ ಬರೆದುಕೊಂಡಿದೆ.

ಕಾಂಗ್ರೆಸ್‌ ಹಂಚಿಕೊಂಡ ವ್ಯಂಗ್ಯ ಚಿತ್ರದಲ್ಲಿ ಪ್ರಧಾನಿ ಮೋದಿಯವರ ಅನಿಮೇಟೆಡ್ ಪಾತ್ರವು ವಾಹನದ ಮೇಲೆ ಪ್ರಜಾಪ್ರಭುತ್ವ, ಮಾಧ್ಯಮ ಮತ್ತು ಅಧಿಕಾರವನ್ನು ಹಿಡಿತದಲ್ಲಿಟ್ಟುಕೊಂಡು ರಥವನ್ನು ಓಡಿಸುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ಹಿಂದೂ ಮತ್ತು ಮುಸ್ಲಿಂ ವ್ಯಕ್ತಿಗಳ ನಡುವೆ ಬಿರುಕು ಉಂಟುಮಾಡುವ ಮತ್ತು ರಾಹುಲ್ ಗಾಂಧಿ ಪ್ರವೇಶಿಸಿ ಎರಡು ಸಮುದಾಯಗಳ ವ್ಯಕ್ತಿಗಳನ್ನು ಒಗ್ಗೂಡಿಸಲಾಗುತ್ತದೆ. ಭಾರತ್ ಜೋಡೋ ಯಾತ್ರೆಯ ಮೂಲಕ ಜನರನ್ನು ಒಗ್ಗೂಡಿಸುತ್ತಾ ಗಾಂಧಿ ನಡೆದುಕೊಂಡು ಹೋಗುವ, ಎಲ್ಲಾ ವರ್ಗದ ಜನರೊಂದಿಗೆ ಬೆರೆಯುವ ಚಿತ್ರಣಗಳನ್ನು ಕಟ್ಟಿಕೊಡಲಾಗಿದೆ. ಗಾಂಧಿ ಟ್ರಕ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ತೋರಿಸುತ್ತದೆ. ಬಳಿಕ ‘ನಫ್ರತ್ ಕಾ ಬಜಾರ್’ ಬೋರ್ಡ್ ಅನ್ನು ಹಾದುಹೋಗುವಾಗ, ಅದು ಕೆಳಗೆ ಬೀಳುತ್ತದೆ ಮತ್ತು ‘ಮೊಹಾಬತ್ ಕಿ ದುಕಾನ್’ ಹಿನ್ನೆಲೆಯಲ್ಲಿರುತ್ತದೆ.

suddiyaana