ಕರ್ನಾಟಕದಲ್ಲಿ ಎಣ್ಣೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ – ಏಪ್ರಿಲ್ ತಿಂಗಳಲ್ಲಿ ದಾಖಲೆಯ ಮಟ್ಟದಲ್ಲಿ ಮದ್ಯ ಸೇಲ್

ಕರ್ನಾಟಕದಲ್ಲಿ ಎಣ್ಣೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ – ಏಪ್ರಿಲ್ ತಿಂಗಳಲ್ಲಿ ದಾಖಲೆಯ ಮಟ್ಟದಲ್ಲಿ ಮದ್ಯ ಸೇಲ್

ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉರಿ ಬಿಸಿಲು, ಬಿಸಿಗಾಳಿಯಿಂದ ಹಗಲಿನಲ್ಲಿ ಓಡಾಡುವುದು ಕಷ್ಟವಾಗುತ್ತಿದೆ.  ತಲೆನೋವು, ಆಯಾಸ, ಮೈಯುರಿಯಂತಹ ಸಮಸ್ಯೆಗಳು ಉದ್ಭವಿಸುತ್ತಿವೆ. ಬಿಸಿಲಾಘಾತದಂತಹ ಗಂಭೀರ ಸಮಸ್ಯೆಗಳು ತಲೆದೋರುತ್ತಿವೆ. ಇಂತಹ ಸಂದರ್ಭದಲ್ಲಿ ಆರೋಗ್ಯದ ಕಾಳಜಿ ಬಗ್ಗೆ ನಿಗಾವಹಿಸುವುದು ಅತ್ಯಗತ್ಯವಾಗಿದೆ. ಒಂದ್ಕಡೆ ಆರೋಗ್ಯ ಕಾಳಜಿ ಬಗ್ಗೆ ಕೆಲವರು ಗಮನ ಹರಿಸುತ್ತಿದ್ದರೆ ಇನ್ನೂ ಕೆಲವರು ಮದ್ಯದ ಮೊರೆ ಹೋಗುತ್ತಿದ್ದಾತೆ.

ಇದನ್ನೂ ಓದಿ : ರಾಜಸ್ಥಾನ & ಗುಜರಾತ್ ನಡುವೆ ಇಂದು ಹೈವೋಲ್ಟೇಜ್ ಫೈಟ್ – ಜೈಪುರದಲ್ಲಿ ಗೆದ್ದವರಿಗೆ ಟಾಪ್-2 ಸ್ಥಾನ ಫಿಕ್ಸ್!

ರಾಜ್ಯದಲ್ಲಿ ಬೇಸಿಗೆಯ ಧಗೆ ಹೆಚ್ಚಿದ್ದು, ಇದರ ನಡುವೆ ಮದ್ಯ ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.  ಬಿಯರ್‌ ಮಾರಾಟ ಅತಿ ಹೆಚ್ಚಾಗಿದ್ದು, ಕರ್ನಾಟಕದಲ್ಲಿ  ಏಪ್ರಿಲ್ ತಿಂಗಳ ಮಾರಾಟದಲ್ಲಿ ರಾಜ್ಯ ಅಬಕಾರಿ ಇಲಾಖೆ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಏಪ್ರಿಲ್‌ ತಿಂಗಳಲ್ಲಿಯೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 3 ಸಾವಿರ ಕೋಟಿ ಆದಾಯ ಹರಿದುಬಂದಿದ್ದು, ಇದು ಅಬಕಾರಿ ಇಲಾಖೆಯಲ್ಲಿ ಕಳೆದ 13 ವರ್ಷಗಳ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದ ಮದ್ಯ ಮಾರಾಟ ಆಗಿರುವುದು ಇದೇ ಮೊದಲಾಗಿದೆ. ವಿಸ್ಕಿ, ಜಿನ್‌, ರಮ್‌ ಸೇರಿ ಕಳೆದ ತಿಂಗಳು ಬರೋಬ್ಬರಿ 68.17 ಲಕ್ಷ ಬಾಕ್ಸ್ ಮಾರಾಟವಾಗಿದೆ. ಇದರಿಂದಾಗಿ ಸರ್ಕಾರಕ್ಕೆ ಬರೋಬ್ಬರಿ 3688 ಸಾವಿರ ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ಇಷ್ಟು ದೊಡ್ಡಮಟ್ಟದ ಆದಾಯ ಮತ್ತು ಈ ಪ್ರಮಾಣದ ಮದ್ಯ ಮಾರಾಟ ಆಗಿರುವುದು ಹೊಸ ದಾಖಲೆಯ ಆಗಿದೆ.

2025ರ ಏಪ್ರಿಲ್‌ನಲ್ಲಿ ಸುಮಾರು 2904 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. 2023ರ ಜುಲೈನಲ್ಲಿ 66.22 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿತ್ತು. ಆದರೆ ಈ ಬಾರಿ ಏಪ್ರಿಲ್‌ನಲ್ಲಿ ಈ ಎಲ್ಲಾ ದಾಖಲೆಗಳನ್ನು ಮದ್ಯ ಪ್ರಿಯರು ಬ್ರೇಕ್‌ ಮಾಡಿದ್ದು, ಬರೋಬ್ಬರಿ 68.17 ಲಕ್ಷ ಬಾಕ್ಸ್ ಮಾರಾಟದೊಂದಿಗೆ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. 2025 ಏಪ್ರಿಲ್‌ನಲ್ಲಿ 41.60 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, ಈ ವರ್ಷ ಅದು 50.39 ಲಕ್ಷ ಬಾಕ್ಸ್‌ಗೆ ಏರಿಕೆಯಾಗಿದೆ. ಇದು ಶೇ.21ಕ್ಕೂ ಹೆಚ್ಚಳವಾಗಿದೆ. ಈ ಮೂಲಕ ಸರ್ಕಾರದ ಬೊಕ್ಕಸ ಮಾತ್ರ ತುಂಬಿದೆ. ಈ ವರ್ಷ ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ 118.56 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ. ಅದರಲ್ಲಿಯೂ ವಿಶೇಷವೆಂದರೆ ಭಾರತೀಯ ತಯಾರಿತ ವಿದೇಶಿ ಮದ್ಯ ಬರೋಬ್ಬರಿ 68.17 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ಗೆ 8.64 ಲೀಟರ್‌) ಹಾಗೂ ಬಿಯರ್ 50.39 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ಗೆ 7.80 ಲೀಟರ್‌) ಮಾರಾಟವಾಗಿದೆ. ಬಿಯರ್‌ ಮಾರಾಟ ಈ ಬೇಸಿಗೆಯಲ್ಲಿ ಸಾಮಾನ್ಯವಾಗಿ ಹೆಚ್ಚುರುತ್ತದೆ. ಅದರಂತೆ ರಾಜ್ಯದಲ್ಲಿ ಸಹ ಬಿಯರ್‌ ಮಾರಾಟದಲ್ಲಿ ಏಕಾಏಕಿ ಏರಿಕೆ ಕಂಡಿದೆ. ಮದ್ಯ ಮಾರಾಟಕ್ಕೆ ಮತ್ತೊಂದು ಪ್ರಮುಖ ಕಾರಣ ಚುನಾವಣೆ ಎನ್ನಲಾಗುತ್ತಿದೆ. ಹೌದು, ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳ ಮತ್ತು ತಮಿಳುನಾಡಿನಲ್ಲಿ ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗಳು ರಾಜ್ಯದಲ್ಲಿ ಮದ್ಯ ಮಾರಾಟ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಚುನಾವಣೆಗೆ ಮುನ್ನ ಕೇರಳ ಮತ್ತು ತಮಿಳುನಾಡಿನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಖರೀದಿಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಇದರ ಜೊತೆಗೆ, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಗಳು ಸಹ ಮದ್ಯ ಮಾರಾಟ ಹೆಚ್ಚಳಕ್ಕೆ ಕಾರಣವೆಂದು ಪರಿಗಣಿಸಲಾಗುತ್ತಿದೆ.

Shantha Kumari

Leave a Reply

Your email address will not be published. Required fields are marked *