ಮದುವೆಯಾಗದೇ ಸತ್ತರೆ ಕೋಪ ಬಂದು ಕೆಟ್ಟದ್ದೇ ಮಾಡುತ್ತಾರೆ – ಚೀನಾದಲ್ಲಿ ಸತ್ತವರ ಜೊತೆ ಮದುವೆಗೆ ಹೆಣ್ಣು ಮಕ್ಕಳ ಶವ ಮಾರಾಟ..!

ಮದುವೆಯಾಗದೇ ಸತ್ತರೆ ಕೋಪ ಬಂದು ಕೆಟ್ಟದ್ದೇ ಮಾಡುತ್ತಾರೆ – ಚೀನಾದಲ್ಲಿ ಸತ್ತವರ ಜೊತೆ ಮದುವೆಗೆ ಹೆಣ್ಣು ಮಕ್ಕಳ ಶವ ಮಾರಾಟ..!

ಜಗತ್ತಿನಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ವಿಶಿಷ್ಟ ಹಾಗೂ ವಿಚಿತ್ರ ಆಚರಣೆಗಳಿರುತ್ತವೆ. ಕೆಲವೊಂದು ಪದ್ಧತಿ ತೀರಾ ಅಸಾಧಾರಣವೆನಿಸುತ್ತದೆ. ಕೆಲವೊಮ್ಮೆ ಹೀಗೆಲ್ಲಾ ಆಚರಣೆ ಮಾಡುತ್ತಾರಾ ಎನ್ನುವಷ್ಟು ಭಯ ಹುಟ್ಟಿಸುತ್ತದೆ. ಚೀನಾದಲ್ಲಿ ಇಂತದ್ದೇ ಒಂದು ಸಂಪ್ರದಾಯವಿದೆ. ಆ ಆಚರಣೆಗೆ ಶವ ಬೇಕು. ಅದ್ರಲ್ಲೂ ಹೆಣ್ಣು ಮಕ್ಕಳ ಶವಕ್ಕೆ ಹೆಚ್ಚು ಡಿಮ್ಯಾಂಡ್.  ಹೀಗಾಗಿ ಹೆಣ್ಣು ಮಕ್ಕಳ ಶವಕ್ಕಾಗಿ ಜನ ಏನು ಬೇಕಾದರೂ ಮಾಡಲು ತಯಾರಿದ್ದಾರೆ.

ಇದನ್ನೂ ಓದಿ: Horror ಫಿಲ್ಮ್ ನೋಡೋದು ಆರೋಗ್ಯಕ್ಕೆ ಒಳ್ಳೇದಾ? – ಭೂತದ ಸಿನಿಮಾಗಳಿಂದ ಸಣ್ಣ ಆಗಬಹುದು!

ಚೀನಾದ ಶಾಂಡೊಂಗ್ ಪ್ರಾಂತ್ಯದಲ್ಲಿ ಒಂದು ವಿಚಿತ್ರ ಘಟನೆ ನಡೆಯುತ್ತದೆ. ತಮ್ಮ 16 ವರ್ಷದ ಮಗಳ ಶವವನ್ನು. ದತ್ತು ಪಡೆದಿರುವ ದಂಪತಿ ಮಾರಾಟ ಮಾಡಿದ್ದಾರೆ ಎಂದು ಮೃತ ಹುಡುಗಿಯ ನಿಜವಾದ ತಂದೆ ಪೊಲೀಸರಿಗೆ ದೂರು ನೀಡುತ್ತಾನೆ. ಪೊಲೀಸರಿಗೆ ದೂರು ನೀಡಿದ ವ್ಯಕ್ತಿ ಮೃತ ಹುಡುಗಿಯ ನಿಜವಾದ ತಂದೆಯಂತೆ. ಆತನಿಗೆ ಈಗಾಗಲೇ ಅವಳಿ ಮಕ್ಕಳಿದ್ದ ಕಾರಣ, ಮೂರನೇ ಮಗುವನ್ನು ಸಾಕಲು ಕಷ್ಟ ಎನ್ನುವ ಕಾರಣಕ್ಕೆ ಮಗಳನ್ನು ದತ್ತು ನೀಡಿದ್ದನು. ಕಳೆದ ವರ್ಷ ಡಿಸೆಂಬರ್‌ನಲ್ಲಿ ದತ್ತು ಮಗಳು ಕಟ್ಟಡವೊಂದರ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ ನಂತರ ದತ್ತು ಪಡೆದ ದಂಪತಿ ಹುಡುಗಿ ಶವವನ್ನು ಮಾರಾಟ ಮಾಡಿದ್ದಾರೆ. ನಿಜವಾದ ತಂದೆ ಹೇಳಿಕೊಂಡಿರುವ ವ್ಯಕ್ತಿ ದೂರಿನ ಮೇಲೆ ಪೊಲೀಸರು ದಂಪತಿ ಮನೆ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಸುಮಾರು 7.88 ಲಕ್ಷ ರೂಪಾಯಿ ಸಿಕ್ಕಿತ್ತು. ಆದ್ರೆ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ.

ಈ ದಂಪತಿ ಮಗಳ ಶವವನ್ನು ಇನ್ನೊಂದು ಶವದ ಜೊತೆ ಮದುವೆ ಮಾಡಲು ನೀಡಿದ್ದಾರೆ. ಇದಕ್ಕಾಗಿ ಅವರು ಹಣ ಪಡೆದಿದ್ದಾರೆ. ಚೀನಾದಲ್ಲಿ ಭೂತಗಳ ಮದುವೆ ಹೊಸತಲ್ಲ. ಗ್ರಾಮೀಣ ಪ್ರದೇಶದಲ್ಲಿ ಈಗಲೂ ಭೂತಗಳ ಮದುವೆ ನಡೆಯುತ್ತಿರುತ್ತದೆ. ಮದುವೆಯಾಗದೆ ಯಾರಾದರೂ ಸಾವನ್ನಪ್ಪಿದರೆ ಸತ್ತ ನಂತರ ಸಂಬಂಧಿಕರಿಗೆ ತೊಂದರೆ ನೀಡುತ್ತಾರೆ ಎನ್ನುವ ನಂಬಿಕೆ ಇಲ್ಲಿನ ಜನರಿಗಿದೆ. ಸತ್ತ ಮೇಲೆ ಅವರು ಯಾರ ಜೊತೆ ಇರೋದಿಲ್ಲ. ಅವರು ಆ ಪ್ರಪಂಚದಲ್ಲಿ ಒಂಟಿಯಾಗಿರಬೇಕಾಗುತ್ತದೆ. ಇದ್ರಿಂದ ಕೋಪಗೊಳ್ಳುವ ಅವರು ಸಂಬಂಧಿಕರಿಗೆ ತೊಂದರೆ ನೀಡ್ತಾರೆ ಎಂದು ನಂಬಿರುವ ಜನರು, ಸತ್ತ ಮೇಲೆ ಮದುವೆ ಮಾಡ್ತಾರೆ. ಮದುವೆಯಾಗದೆ ಸಾವನ್ನಪ್ಪಿದ ಎರಡು ಶವಗಳಿಗೆ ಈ ಮದುವೆ ನಡೆಯುತ್ತದೆ. ಸಾಮಾನ್ಯ ಮದುವೆಯಂತೆ ಇಲ್ಲಿ ಶವಗಳ ಮದುವೆ ಮಾಡಲಾಗುತ್ತದೆ. ಮದುವೆಯ ಎಲ್ಲ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಮರಣಾನಂತರದ ಜೀವನ ಸುಖವಾಗಿರಲಿ ಎಂದು ಬಯಸುತ್ತಾರೆ. ಮದುವೆಯ ಸಮಯದಲ್ಲಿ ಹುಡುಗಿಯ ಮೂಳೆಗಳನ್ನು ಹುಡುಗನ ಸಮಾಧಿಯಲ್ಲಿ ಹಾಕಲಾಗುತ್ತದೆ. ವಧುವಿನ ಮನೆಯವರು ವಧುವಿಗೆ ಹಣದ ಬೇಡಿಕೆ ಇಟ್ಟು, ವರದಕ್ಷಿಣೆ ಪಡೆಯುತ್ತಾರೆ. ಅದು ಕೇವಲ ಕಾಗದದ ರೂಪದಲ್ಲಿರುತ್ತದೆ. ನಿಜವಾಗಿ ಹಣ ಪಡೆಯುವುದಿಲ್ಲ. ಚೀನಾದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಬಹಳ ಕಡಿಮೆ ಇದೆ. ಹಾಗಾಗಿ ಅಲ್ಲಿನ ಪುರುಷರಿಗೆ ಮದುವೆ ಆಗ್ತಿಲ್ಲ. ಇದೇ ಕಾರಣಕ್ಕೆ ಹೆಣ್ಣು ಮಕ್ಕಳ ಶವಕ್ಕೂ ಇಲ್ಲಿ ಬೇಡಿಕೆ ಹೆಚ್ಚಿದೆ. ಹೆಣ್ಣು ಮಕ್ಕಳ ಶವವನ್ನು ಐದು ಲಕ್ಷಕ್ಕೆ ಮಾರಾಟ ಮಾಡುವವರಿದ್ದಾರೆ. ಹಣಕ್ಕೋಸ್ಕರ ಕೆಲ ಹೆಣ್ಣು ಮಕ್ಕಳನ್ನು ಕಿಡ್ನಾಪ್ ಮಾಡಿ ನಂತ್ರ ಅವರನ್ನು ಕೊಂದು ಶವದೊಂದಿಗೆ ಮದುವೆ ಮಾಡುವ ಅನೇಕ ಘಟನೆಗಳು ಇಲ್ಲಿ ವರದಿಯಾಗುತ್ತಿರುತ್ತವೆ. ಸಾವಿನ ನಂತರ ಮೃತರಿಗೆ ಖುಷಿ ನೀಡುವುದೇ ಈ ಪದ್ಧತಿ ಉದ್ದೇಶವಾಗಿದೆ.

Sulekha