ಚಳಿಗಾಲಕ್ಕೂ ಮುನ್ನವೇ ದೆಹಲಿಯ ಗಾಳಿ ಗುಣಮಟ್ಟ ಕುಸಿತ – ಜನರನ್ನು ಕಾಡುತ್ತಿದೆ ಉಸಿರಾಟದ ತೊಂದರೆ!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಗಾಲಕ್ಕೂ ಮುನ್ನವೇ ವಾಯುಗುಣಮಟ್ಟ ತೀರಾ ಕೆಳಮಟ್ಟಕ್ಕೆ ಇಳಿಯುತ್ತಿದೆ. ಕಳೆದ ಸೋಮವಾರದಿಂದ ವಾಯು ಗುಣಮಟ್ಟ ತೀರಾ ಕೆಳಮಟ್ಟಕ್ಕೆ ಇಳಿಯುತ್ತಿದೆ ಎಂದು ವರದಿಯಾಗಿದ್ದು, ಇದರಿಂದಾಗಿ ಜನರಲ್ಲಿ ಆತಂಕ ಹೆಚ್ಚಾಗಿದೆ.
ಹಲವು ದಿನಗಳಿಂದ ದೆಹಲಿಯಲ್ಲಿ ಮಳೆಯಾಗುತ್ತಿಲ್ಲ. ಇದರಿಂದಾಗಿ ನಗರದಲ್ಲಿ ವಾಯುಗುಣಮಟ್ಟ ತೀರಾ ಕೆಳಮಟ್ಟಕ್ಕೆ ಇಳಿಯುತ್ತಿದೆ. ಸೋಮವಾರದಂದು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 263 (ಕಳಪೆ) ದಾಖಲಾಗಿದೆ. ಇಂದು (ಬುಧವಾರ) ಬೆಳಿಗ್ಗೆ ವಾಯುಗುಣಮಟ್ಟ ಕಳಪೆಯಾಗಿದೆ ಎಂದು ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾಲಜಿ ಮಾಹಿತಿ ನೀಡಿದೆ.
ಇದನ್ನೂ ಓದಿ: ಬಾಂಗ್ಲಾದೇಶದ ಕರಾವಳಿ ದಾಟಲಿದೆ ‘ಹಮೂನ್’ ಚಂಡಮಾರುತ – ಈ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ
ಗಂಟೆಗೆ 10 ಕಿಮೀಗಿಂತ ಕಡಿಮೆ ಗಾಳಿಯ ವೇಗವು ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಮಾಲಿನ್ಯಕಾರಕಗಳ ನಿಶ್ಚಲತೆಗೆ ಕಾರಣವಾಗುತ್ತದೆ (ಮಾಲಿನ್ಯಕ್ಕೆ ಜವಾಬ್ದಾರಿ) ಮತ್ತು ಮಾಲಿನ್ಯದ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ತಾಪಮಾನವು 17 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ ಮತ್ತು ಗಾಳಿಯು ಮುಖ್ಯವಾಗಿ ವಾಯುವ್ಯ ಭಾರತದಿಂದ ಬರುತ್ತಿದೆ ಎಂದು ಮಾಹಿತಿ ನೀಡಿದೆ.
ಮಾಲಿನ್ಯದಿಂದಾಗಿ ದೆಹಲಿಯ ನಗರ ಪ್ರದೇಶದಲ್ಲಿ ವಾಸಿಸುವ ಲಕ್ಷಾಂತರ ಜನರು ಉಸಿರಾಟದ ಕಾಯಿಲೆಗಳಿಗೆ ಒಳಗಾಗುವಂತೆ ಮಾಡಿದೆ. ಅನೇಕರು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ. ಈ ಹಿನ್ನೆಲೆ ಜನರು ಎಚ್ಚರಿಕೆಯಿಂದ ಇರುವಂತೆ ವೈದ್ಯರು ಸೂಚಿಸಿದ್ದಾರೆ.