ಡಿಜೆ ಸಾಂಗ್ ನಿಲ್ಲಿಸಲು ಹೇಳಿದ್ದಕ್ಕೆ ಗರ್ಭಿಣಿ ಮೇಲೆಯೇ ಗುಂಡು ಹಾರಿಸಿದ ಪಾಪಿ
ನವದೆಹಲಿ: ಗರ್ಭಿಣಿಯೊಬ್ಬಳು ಡಿಜೆ ಸಾಂಗ್ ನಿಲ್ಲಿಸಲು ಹೇಳಿದ್ದಕ್ಕೆ ನೆರೆಮನೆಯಾತ ಆಕೆ ಮೇಲೆ ಗುಂಡು ಹಾರಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಸಿರಸ್ ಪುರದ ನಿವಾಸಿ ರಂಜು ಗಂಡು ತಗುಲಿದ ಮಹಿಳೆ. ಹರೀಶ್ ಎಂಬಾತನ ಮನೆಯಲ್ಲಿ ಸಮಾರಂಭ ನಡೆಯುತ್ತಿತ್ತು. ಈ ಹಿನ್ನೆಲೆ ಆತ ಡಿಜೆಯನ್ನು ಕರೆಸಿ ಜೋರಾಗಿ ಮ್ಯೂಜಿಕ್ ಹಾಕಿದ್ದ. ಡಿಜೆ ಸೌಂಡ್ ನಿಂದಾಗಿ ಗರ್ಭಿಣಿಗೆ ಕರ್ಕಶ ಶಬ್ದವನ್ನು ಸಹಿಸಿಕೊಳ್ಳಲು ಕಷ್ಟವಾಗುತ್ತಿತ್ತು. ಹೀಗಾಗಿ ಆಕೆ ತನ್ನ ಬಾಲ್ಕನಿಗೆ ತೆರಳಿ ಡಿಜೆ ಸಾಂಗ್ ಅನ್ನು ಆಫ್ ಮಾಡುವಂತೆ ಕೇಳಿಕೊಂಡಿದ್ದಾಳೆ.
ಇದನ್ನೂ ಓದಿ: 2030ರ ವೇಳೆಗೆ ಸಾವು ಗೆಲ್ಲುವ ತಂತ್ರಜ್ಞಾನ ಯಶಸ್ವಿಯಾಗುತ್ತಾ – ಭವಿಷ್ಯವಾಣಿ ನಿಜವಾಗುತ್ತಾ?
ಇದರಿಂದ ಕೋಪಕೊಂಡ ಹರೀಶ್ ತನ್ನ ಸ್ನೇಹಿತ ಅಮಿತ್ ಬಳಿಯಿದ್ದ ಗನ್‍ನಿಂದ ಗುಂಡು ಹಾರಿಸಿದ್ದಾನೆ. ಈ ವೇಳೆ ರಂಜು ಕುತ್ತಿಗೆಗೆ ತಗುಲಿದೆ. ಆ ಸಮಯದಲ್ಲಿ ಮಹಿಳೆ ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಗರ್ಭಪಾತವಾಗಿದೆ. ಸದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ.
ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗರ್ಭಿಣಿಯ ಮೇಲೆ ಗುಂಡು ಹಾರಿಸಿದ ಹರೀಶ್ ಮತ್ತು ಆತನ ಸ್ನೇಹಿತ ಅಮಿತ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.