ಮಹಿಳಾ ಸಹಪಾಠಿಯೊಂದಿಗೆ ಸಲುಗೆಯಿಂದ ಮಾತನಾಡಿದ್ದಕ್ಕೆ ವಿದ್ಯಾರ್ಥಿಯ ಬೆರಳು ಕಟ್!
ಕಾಲೇಜು ಅಂದ ಮೇಲೆ ಸಹಪಾಠಿಗಳೊಂದಿಗೆ ಸಲುಗೆಯಿಂದ ಇರುವುದು ಸಾಮಾನ್ಯ. ಮಹಿಳಾ ಸಹಪಾಠಿಗಳೊಂದಿಗೆ ಕುಳಿತುಕೊಳ್ಳುವುದು, ಒಟ್ಟಿಗೆ ತಿರುಗಾಟ ಇಲ್ಲವೂ ಇರುತ್ತದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಗೆ ಇದೇ ಮುಳುವಾಗಿದೆ. ಸಹಪಾಠಿಯೊಂದಿಗೆ ಸಲುಗೆಯಿಂದ ಇದ್ದಿದ್ದಕ್ಕೆ ವಿದ್ಯಾರ್ಥಿಯ ಕೈ ಬೆರಳುಗಳನ್ನೇ ಮುರಿದು ಹಾಕಿದ್ದಾರೆ.
ಹೌದು, ಈ ಘಟನೆ ದೆಹಲಿಯ ದಕ್ಷಿಣ ದ್ವಾರಕದಲ್ಲಿ ನಡೆದಿದೆ. ಮಹಿಳಾ ಸಹಪಾಠಿಯ ಜತೆ ಸಲುಗೆಯಿಂದ ಮಾತನಾಡಿದ್ದಕ್ಕೆ 12ನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಿರಿಯ ವಿದ್ಯಾರ್ಥಿಯೊಬ್ಬ ಹಲ್ಲೆ ನಡೆಸಿದ್ದಾನೆ. ಬಳಿಕ ಆತನ ಬೆರಳುಗಳನ್ನು ಕತ್ತರಿಸಿದ್ದಾನೆ.
ಇದನ್ನೂ ಓದಿ: ದೀಪಾವಳಿ ಹಬ್ಬದ ಖುಷಿಯಲ್ಲಿ ಪಟಾಕಿ ಬಗ್ಗೆ ಎಚ್ಚರವಿರಲಿ – ಚಿಕಿತ್ಸೆಗೆ ತಕ್ಷಣವೇ ಸ್ಪಂದಿಸಲು ಕಣ್ಣಿನ ಆಸ್ಪತ್ರೆಗಳು ಸಜ್ಜು..!
ಆರೋಪಿ ಅದೇ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು, ಈಗಾಗಲೇ ಪದವಿಯನ್ನೂ ಮುಗಿಸಿದ್ದಾನೆ. ಅಕ್ಟೋಬರ್ 21 ರಂದು ಘಟನೆ ನಡೆದಿದ್ದು, ಭಯಗೊಂಡಿದ್ದ ವಿದ್ಯಾರ್ಥಿ, ಬೈಕ್ ಚೈನ್‌ಗೆ ಕೈ ಸಿಲುಕಿ ಬೆರಳುಗಳು ಕತ್ತರಿಸಿವೆ ಎಂದು ಪೋಷಕರಿಗೆ ಸುಳ್ಳು ಹೇಳಿದ್ದಾನೆ. ಕಳೆದ ಶುಕ್ರವಾರ, ನೈಜ ಘಟನೆಯ ಬಗ್ಗೆ ಪೋಷಕರಿಗೆ ವಿದ್ಯಾರ್ಥಿ ತಿಳಿಸಿದ್ದಾನೆ. ಬಳಿಕ ದಾಖಲಾದ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ.
ಆರೋಪಿಯು ನನ್ನನ್ನು ಶಾಲೆಯ ಹೊರಗಡೆ ಭೇಟಿಯಾಗಿ ಪಾರ್ಕ್‌ಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಮಹಿಳಾ ಸಹಪಾಠಿ ಜತೆಗಿನ ಸ್ನೇಹದ ಬಗ್ಗೆ ತಕರಾರು ಎತ್ತಿ, ಕಲ್ಲಿನಿಂದ ಹಲ್ಲೆ ಮಾಡಿದ್ದಎಂದು ಹಲ್ಲೆಗೊಳಗಾದ ವಿದ್ಯಾರ್ಥಿ ಪೊಲೀಸರ ಬಳಿ ಹೇಳಿದ್ದಾನೆ.