ಸ್ಫೋ*ಟಗೊಂಡ ಕಾರು ಚಲಾಯಿಸುತ್ತಿದ್ದವನೇ ಉ*ಗ್ರ ಉಮರ್ – ಡಿಎಸ್ಎ ಟೆಸ್ಟ್‌ನಲ್ಲಿ ‘ಸ್ಫೋಟಕ’ ಸತ್ಯ ಬಯಲು

ಸ್ಫೋ*ಟಗೊಂಡ ಕಾರು ಚಲಾಯಿಸುತ್ತಿದ್ದವನೇ ಉ*ಗ್ರ ಉಮರ್ – ಡಿಎಸ್ಎ ಟೆಸ್ಟ್‌ನಲ್ಲಿ ‘ಸ್ಫೋಟಕ’ ಸತ್ಯ ಬಯಲು

ದೆಹಲಿಯ ಕೆಂಪು ಕೋಟೆಯ ಬಳಿ  ನಡೆದ ಕಾರು ಸ್ಫೋಟ ಪ್ರಕರಣದಲ್ಲಿ ಕಾರು ಚಲಾಯಿಸುತ್ತಿದ್ದವನು ಡಾ. ಉಮರ್‌ ಎಂಬುದು ಖಚಿತವಾಗಿದೆ. ಸ್ಫೋಟಗೊಂಡ ಐ20 ಕಾರಿನಲ್ಲಿ ಪತ್ತೆಯಾಗಿರುವ ಪತ್ತೆಯಾದ ಛಿದ್ರಗೊಂಡ ಶವದ ಡಿಎನ್ಎ ಪರೀಕ್ಷಾ ವರದಿ ಬಂದಿದ್ದು, ಶವ ಉಮರ್​​ನದ್ದು ಎಂದು ತಿಳಿದುಬಂದಿದೆ. ಈತ ಫರೀದಾಬಾದ್‌ನಲ್ಲಿ ತನ್ನ ಸಹಚರರ ಬಂಧನದ ಬಳಿಕ ಕಾರ್‌ ತೆಗೆದುಕೊಂಡು ಪರಾರಿಯಾಗಿದ್ದ.

ಡಾ. ಉಮರ್ ಬಿಳಿ ಬಣ್ಣದ ಹುಂಡೈ ಐ20 ಕಾರನ್ನು ಖರೀದಿಸಿದ್ದ ಮತ್ತು ಸ್ಫೋಟದ ಸಮಯದಲ್ಲಿ ಕಾರಿನಲ್ಲಿದ್ದ ಎಂದು ಭಾರತೀಯ ತನಿಖಾ ಸಂಸ್ಥೆಗಳು ಕಂಡುಹಿಡಿದಿವೆ. ಆತ ಫರಿದಾಬಾದ್‌ನಲ್ಲಿ ಬಂಧಿಸಲಾದ ಭಯೋತ್ಪಾದಕ ಘಟಕದ ಸದಸ್ಯನೂ ಆಗಿದ್ದ. ಪುಲ್ವಾಮಾದ ಸಂಬುರಾ ಗ್ರಾಮದ ನಿವಾಸಿಗಳಾದ ಉಮರ್‌ನ ತಾಯಿ ಮತ್ತು ಸಹೋದರರಿಂದ ಡಿಎನ್‌ಎ ಮಾದರಿಗಳನ್ನು ತೆಗೆದುಕೊಂಡು ಕಾರಿನಲ್ಲಿ ಕಂಡುಬಂದ ದೇಹದ ಅವಶೇಷಗಳೊಂದಿಗೆ ಹೋಲಿಸಿದಾಗ, ಅವು ಶೇ. 100 ಹೊಂದಿಕೆಯಾಗುತ್ತವೆ ಎಂದು ಕಂಡುಬಂದಿದೆ. ಮೃತನ ಹಲ್ಲುಗಳು, ಮೂಳೆಗಳು ಮತ್ತು ಇತರ ಅವಶೇಷಗಳು ತಾಯಿ ಮತ್ತು ಸಹೋದರನ ಮಾದರಿಗಳೊಂದಿಗೆ ಹೊಂದಿಕೆಯಾಗಿವೆ.

ಇದನ್ನೂ ಓದಿ: ನವೆಂಬರ್ 13 ರಿಂದ 16 ರವರೆಗೆ ಕೃಷಿ ಮೇಳ – ಜಿಕೆವಿಕೆಯಲ್ಲಿ ಇವತ್ತಿನಿಂದ ಕೃಷಿ ಕಲರವ

ಭಯೋತ್ಪಾದಕ ಉಮರ್ ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಲ್ಲಿದ್ದ. ಫರಿದಾಬಾದ್‌ನಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಸೋಮವಾರ ಬೆಳಿಗ್ಗೆ ಆತನ ಸಹಚರರನ್ನು ಬಂಧಿಸಲಾಗಿತ್ತು. ವೈದ್ಯ ಉಮರ್ ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಬಳಿಕ ಕಾರಿನಲ್ಲಿ ತುಂಬಿದ್ದ ಸ್ಫೋಟಕಗಳ ಜೊತೆಗೆ ದೆಹಲಿಗೆ ಪರಾರಿಯಾಗಿದ್ದ. ಮಯೂರ್ ವಿಹಾರ್, ಫರಿದಾಬಾದ್ ಮತ್ತು ಕನ್ನಾಟ್ ಪ್ಲೇಸ್‌ನಲ್ಲಿ ಕಾಣಿಸಿಕೊಂಡಿದ್ದ. ಕೆಂಪು ಕೋಟೆಯ ಸಮೀಪದ ಮಸೀದಿಯ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸುಮ್ಮನೆ ಕುಳಿತು ಕಳೆದಿದ್ದ.

ಕೆಂಪು ಕೋಟೆಯ ಬಳಿಯಲ್ಲೇ ಹೆಚ್ಚು ಜನಜಂಗುಳಿ ತುಂಬಿರುವ ಸಂದರ್ಭದಲ್ಲಿ ಸ್ಫೋಟಿಸುವುದು ಆತನ ಉದ್ದೇಶವಾಗಿತ್ತು. ಆತ್ಮಹತ್ಯಾ ದಾಳಿ ಆತನ ಉದ್ದೇಶವಾಗಿರಲಿಲ್ಲ. ಸ್ಫೋಟಕವನ್ನು ಕಾರಿನಲ್ಲಿ ಬಿಟ್ಟು ಟೈಮರ್‌ ಫಿಕ್ಸ್‌ ಮಾಡುವ ಉದ್ದೇಶವಿತ್ತು. ಕೊನೆಗೆ ಬೇರೆ ದಾರಿಯಿಲ್ಲದೆ ಕೆಂಪು ಕೋಟೆ ಮೆಟ್ರೋ ಗೇಟ್ ಸಂಖ್ಯೆ 1ರ ಬಳಿ ಆತ ಸ್ಫೋಟಿಸಿದ ಎಂದು ಅಂದಾಜಿಸಲಾಗಿದೆ.

Kishor KV