ಸೋನಿಯಾ ಗಾಂಧಿ ಬಂಗಲೆಯಿಂದ ರಾಹುಲ್‌ ಗಾಂಧಿ ಬೇರೆಡೆಗೆ ಶಿಫ್ಟ್!  

ಸೋನಿಯಾ ಗಾಂಧಿ ಬಂಗಲೆಯಿಂದ ರಾಹುಲ್‌ ಗಾಂಧಿ ಬೇರೆಡೆಗೆ ಶಿಫ್ಟ್!  

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೋದಿ ಉಪನಾಮ ಹೇಳಿಕೆ ನೀಡಿದ್ದಕ್ಕೆ ಸಂಸದ ಸ್ಥಾನಕ್ಕೆ ಅನರ್ಹಗೊಂಡಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರದ ಅಧಿಕೃತ ಬಂಗಲೆ ತೊರೆದು ಸದ್ಯ ತಾಯಿ ಸೋನಿಯಾ ಗಾಂಧಿ ಅವರ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇದೀಗ ರಾಹುಲ್‌ ಗಾಂಧಿ ಅವರು ಸೋನಿಯಾ ಗಾಂಧಿ ಮನೆಯಿಂದ ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ರಾಮ, ರಾವಣ ಹುಚ್ಚರಂತೆ ಸೀತೆ ಹಿಂದೆ ಬಿದ್ದಿದ್ದರು! – ನಾನೂ ಸೀತೆಯಂತೆಯೇ ಎಂದ ಕಾಂಗ್ರೆಸ್‌ ನಾಯಕ

2019ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಕೋಲಾರದಲ್ಲಿ ಪ್ರಚಾರ ಭಾಷಣ ಮಾಡಿದ್ದ ರಾಹುಲ್‌ ಗಾಂಧಿ, ‘ನೀರವ್‌ ಮೋದಿ, ಲಲಿತ್‌ ಮೋದಿ, ನರೇಂದ್ರ ಮೋದಿ. ಹೀಗೆ ಎಲ್ಲಾ ಕಳ್ಳರು ಮೋದಿ ಎಂಬ ಉಪನಾಮವನ್ನೇ ಏಕೆ ಹೊಂದಿರುತ್ತಾರೆ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದರು. ಈ ಸಂಬಂಧ ರಾಹುಲ್‌ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು. ರಾಹುಲ್ ಗಾಂಧಿ ಅನಿವಾರ್ಯವಾಗಿ ಸರ್ಕಾರಿ ಅಧಿಕೃತ ಬಂಗಲೆ ತೆರವುಗೊಳಿಸಿದ್ದರು. ದೆಹಲಿಯ ತುಘಲಕ್‌ ಲೇನ್‌ನಲ್ಲಿರುವ 12ನೇ ನಂಬರ್‌ ಮನೆಯನ್ನು ಖಾಲಿ ಮಾಡಿ ತಾಯಿ ಸೋನಿಯಾ ಗಾಂಧಿ ಮನೆಗೆ ತೆರಳಿದ್ದರು. ಇದೀಗ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಬಂಗಲೆಯಿಂದ, ದೆಹಲಿ ಮಾಜಿ ಸಿಎಂ, ದಿವಂಗತ ಶೀಲಾ ದೀಕ್ಷಿತ್ ಮನೆಗೆ ಸ್ಥಳಾಂತರವಾಗಲು ನಿರ್ಧರಿಸಿದ್ದಾರೆ.

ದಕ್ಷಿಣ ದೆಹಲಿಯ ನಿಜಾಮುದ್ದೀನ್ ಪೂರ್ವದ ಬಿ2ನಲ್ಲಿರುವ ಶೀಲಾ ದೀಕ್ಷಿತ್ ಅವರ ಬಂಗಲೆಗೆ  ಸ್ಥಳಾಂತರವಾಗಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. ದೆಹಲಿಯ ಸಿಎಂ ಆಗಿ, ಕೇರಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 2019ರ ಜುಲೈ 20 ರಂದು ಶೀಲಾ ದೀಕ್ಷೀತ್ ನಿಧನರಾಗಿದ್ದಾರೆ. ಸದ್ಯ ಈ ಮನೆಯಲ್ಲಿ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್ ವಾಸವಾಗಿದ್ದಾರೆ. ಆದರೆ ಸಂದೀಪ್ ದೀಕ್ಷಿತ್ ಸದ್ಯದಲ್ಲೇ ತಮ್ಮ ಕುಟುಂಬಸ್ಥರ ಮನೆಗೆ ಸ್ಥಳಾಂತರವಾಗುತ್ತಿದ್ದಾರೆ. ಹೀಗಾಗಿ ಖಾಲಿಯಾಗುವ ಶೀಲಾ ದೀಕ್ಷಿತ್ ಮನೆಗೆ ರಾಹುಲ್ ಗಾಂಧಿ ಶಿಫ್ಟ್ ಆಗಲು ನಿರ್ಧರಿಸಿದ್ದಾರೆ.

suddiyaana