ನಾವು ಉಸಿರಾಡುವ ಗಾಳಿಯೇ ಜೀವಕ್ಕೆ ಮಾರಕ! – 8 ವರ್ಷಗಳಷ್ಟು ಕಡಿಮೆಯಾಗುತ್ತಿದೆ ಜನರ ಆಯಸ್ಸು!

ನಾವು ಉಸಿರಾಡುವ ಗಾಳಿಯೇ ಜೀವಕ್ಕೆ ಮಾರಕ! – 8 ವರ್ಷಗಳಷ್ಟು ಕಡಿಮೆಯಾಗುತ್ತಿದೆ ಜನರ ಆಯಸ್ಸು!

ನಾವು ನೀವೆಲ್ಲಾ ಜೀವಂತವಾಗಿ ಇರೋದಕ್ಕೆ ಉಸಿರಾಡಲು ಗಾಳಿ ಬೇಕೇ ಬೇಕು. ಆದ್ರೆ ಅದೇ ಗಾಳಿ ನಮ್ಮ ಆಯಸ್ಸನ್ನೇ ಕಡಿಮೆ ಮಾಡುತ್ತಿದೆ ಅನ್ನೋ ಆಘಾತಕಾರಿ ವರದಿ ಹೊರ ಬಿದ್ದಿದೆ.

ಜಾಗತಿಕವಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಮಾನವನ ಆರೋಗ್ಯಕ್ಕೆ ಹೆಚ್ಚು ಅಪಾಯ ಉಂಟು ಮಾಡುತ್ತಿದೆ. ಅದ್ರಲ್ಲೂ ಭಾರತದಲ್ಲಿ ವಾಯು ಮಾಲಿನ್ಯದ ಪ್ರಮಾಣ ಮಿತಿ ಮೀರಿದ್ದು, ವಿಶ್ವ ಆರೋಗ್ಯ ಸಂಸ್ಥೆ ಆಘಾತಕಾರಿ ಅಂಶವನ್ನ ತಿಳಿಸಿದೆ. ಸೂಕ್ಷ್ಮ ಕಣಗಳ ವಾಯು ಮಾಲಿನ್ಯವು ಭಾರತೀಯನ ಜೀವಿತಾವಧಿಯನ್ನು ಸರಾಸರಿ 3ರಿಂದ 5 ವರ್ಷಗಳಷ್ಟು ಕಡಿಮೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ. ಅದ್ರಲ್ಲೂ ದೆಹಲಿಯ ವಾಯುವಿನ ಗುಣಮಟ್ಟ ಮತ್ತಷ್ಟು ಕುಸಿದಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ಮಾಲಿನ್ಯವಿರುವ ನಗರ ಎಂದು ‘ವಾಯು ಗುಣಮಟ್ಟ ಜೀವನ ಸೂಚ್ಯಂಕ’ ಕುರಿತ ವರದಿ ಹೇಳಿದೆ. ಹಾಗೇ ದೆಹಲಿ ನಿವಾಸಿಗಳು ಜೀವಿತಾವಧಿಯ 8.5 ವರ್ಷವನ್ನು ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ.. – ನಗರದಲ್ಲಿ ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚು ವಾಯುಮಾಲಿನ್ಯ!

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವಾರ್ಷಿಕ ಸರಾಸರಿ ಪಾರ್ಟಿಕ್ಯುಲೇಟ್‌ ಮಾಲಿನ್ಯ ಮಟ್ಟ ಒಂದು ಘನ ಮೀಟರ್‌ಗೆ 5 ಮೈಕ್ರೊ ಗ್ರಾಮ್‌ಗಳಷ್ಟಿರಬೇಕು. ಆದರೆ, ಭಾರತದ 130 ಕೋಟಿ ಜನರು ಈ ಸರಾಸರಿ ಪ್ರಮಾಣಕ್ಕಿಂತ ಹೆಚ್ಚು ಮಾಲಿನ್ಯ ಇರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಹೊರ ಬಿದ್ದಿದೆ.

suddiyaana